More

    ಗೆಸ್ಟ್‌ಹೌಸ್‌ನಲ್ಲಿ ಲಸಿಕೆ ಹಾಕಿಸಿಕೊಂಡು ವಿವಾದಕ್ಕೀಡಾಗಿದ್ದ ಕ್ರಿಕೆಟಿಗ ಕುಲದೀಪ್​ಗೆ ಕ್ಲೀನ್​ಚಿಟ್​

    ಲಖನೌ: ಟೀಮ್ ಇಂಡಿಯಾದ ಕ್ರಿಕೆಟಿಗರು ಇತ್ತೀಚೆಗೆ ಒಬ್ಬೊಬ್ಬರಾಗಿಯೇ ಕೋವಿಡ್ ಲಸಿಕೆ ಹಾಕಿಸಿಕೊಳ್ಳುತ್ತಿದ್ದಾರೆ. ಅದೇ ರೀತಿ ಸ್ಪಿನ್ನರ್ ಕುಲದೀಪ್ ಯಾದವ್ ಕೂಡ ಶನಿವಾರ ಲಸಿಕೆ ಹಾಕಿಸಿಕೊಂಡರು. ಆದರೆ ಇದೇ ಕಾರಣಕ್ಕಾಗಿ ಕುಲದೀಪ್ ಇದೀಗ ವಿವಾದಕ್ಕೀಡಾಗಿದ್ದಾರೆ! ಹಾಗಾದರೆ ಲಸಿಕೆ ತೆಗೆದುಕೊಳ್ಳುವುದೇ ತಪ್ಪಾ ಎಂಬ ಅನುಮಾನ ಬೇಡ, ಇಲ್ಲಿ ವಿವಾದ ಎದ್ದಿರುವುದು ಕುಲದೀಪ್ ಯಾದವ್ ಲಸಿಕೆ ಹಾಕಿಸಿಕೊಂಡ ಸ್ಥಳದ ಬಗ್ಗೆ ಆಗಿದೆ! ಇದರ ಬೆನ್ನಲ್ಲೇ ಪ್ರಕರಣದ ತನಿಖೆ ನಡೆದು ಅವರಿಗೆ ಕ್ಲೀನ್​ಚಿಟ್​ ಕೂಡ ನೀಡಲಾಗಿದೆ.

    ಉತ್ತರ ಪ್ರದೇಶದ ಆಟಗಾರ ಕುಲದೀಪ್ ಯಾದವ್ ಅವರು ಕಾನ್ಪುರದ ಗೆಸ್ಟ್‌ಹೌಸ್‌ನಲ್ಲಿ ಲಸಿಕೆ ಹಾಕಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ಗೋವಿಂದ್ ನಗರದ ಜೋಗೇಶ್ವರ್ ಆಸ್ಪತ್ರೆಯಲ್ಲಿ ಲಸಿಕೆ ಹಾಕಿಸಿಕೊಳ್ಳಲು ಅವರು ಭೇಟಿ ನಿಶ್ಚಯ ಮಾಡಿಕೊಂಡಿದ್ದರು. ಆದರೂ ಆಸ್ಪತ್ರೆಯ ಸಿಬ್ಬಂದಿ ಗೆಸ್ಟ್‌ಹೌಸ್‌ಗೆ ತೆರಳಿ ಲಸಿಕೆ ಹಾಕಿರುವುದು ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

    ಇದನ್ನೂ ಓದಿ: ಮಹಿಳಾ ಕ್ರಿಕೆಟರ್ ತಾಯಿಯ ಕೋವಿಡ್ ಚಿಕಿತ್ಸೆಗೆ ನೆರವಾದ ವಿರಾಟ್ ಕೊಹ್ಲಿ

    ಐಪಿಎಲ್‌ನಲ್ಲಿ ಕೋಲ್ಕತ ನೈಟ್‌ರೈಡರ್ಸ್‌ ತಂಡದ ಆಟಗಾರರಾಗಿರುವ ಕುಲದೀಪ್ ಯಾದವ್, ಕೋವಿಡ್ ಲಸಿಕೆ ಹಾಕಿಸಿಕೊಳ್ಳುತ್ತಿರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲೂ ಹಂಚಿಕೊಂಡಿದ್ದರು ಮತ್ತು ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿ ಎಂದು ಮನವಿಯನ್ನೂ ಮಾಡಿದ್ದರು. ಅವರು ಗೆಸ್ಟ್‌ಹೌಸ್‌ನ ಹೊರಗೆ ಕುರ್ಚಿಯಲ್ಲಿ ಕುಳಿತು ಲಸಿಕೆ ಹಾಕಿಸಿಕೊಂಡಂತೆ ಚಿತ್ರದಲ್ಲಿ ಕಂಡ ಕಾರಣ ವಿವಾದ ಸೃಷ್ಟಿಯಾಗಿತ್ತು.

    ಕುಲದೀಪ್‌ಗೆ ಕ್ಲೀನ್‌ಚಿಟ್
    ವಿವಾದದ ಬೆನ್ನಲ್ಲೇ ಕಾನ್ಪುರ ನಗರ ಮ್ಯಾಜಿಸ್ಟ್ರೇಟ್ ಹಿಮಾಂಶು ಗುಪ್ತಾ, ಕುಲದೀಪ್ ಯಾದವ್‌ಗೆ ಕ್ಲೀನ್‌ಚಿಟ್ ನೀಡಿ ವರದಿ ಸಲ್ಲಿಸಿದ್ದಾರೆ. ಕುಲದೀಪ್ ಯಾದವ್ ಗೆಸ್ಟ್‌ಹೌಸ್‌ನಲ್ಲಲ್ಲ, ಜೋಗೇಶ್ವರ್ ಆಸ್ಪತ್ರೆಯಲ್ಲೇ ಲಸಿಕೆ ಹಾಕಿಸಿಕೊಂಡಿದ್ದಾರೆ. ಅಂದು ಲಸಿಕೆ ಹಾಕಿಸಿಕೊಳ್ಳಲು ಹೆಸರು ನೋಂದಾಯಿಸಿಕೊಂಡವರ ಪಟ್ಟಿಯಲ್ಲಿ ಕುಲದೀಪ್ ಹೆಸರು 136ನೇ ಕ್ರಮಸಂಖ್ಯೆಯಲ್ಲಿದೆ ಎಂದು ಅವರು ವರದಿ ಸಲ್ಲಿಸಿದ್ದಾರೆ.

    ಆ ಪಂದ್ಯದ ಬಳಿಕ ನನಗೆ ಮತ್ತು ಪತ್ನಿಗೆ ಜೀವ ಬೆದರಿಕೆ ಬಂದಿತ್ತು ಎಂದ ಫಾಫ್​ ಡು ಪ್ಲೆಸಿಸ್!

    VIDEO | ಕ್ರಿಕೆಟಿಗ ರಾಬಿನ್ ಉತ್ತಪ್ಪ ಡಾನ್ಸ್ ವಿಡಿಯೋ ವೈರಲ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts