More

    ರಾಜಕೀಯ ಕಾರಣಕ್ಕೆ ಕೆಲ ಅತಿಥಿ ಉಪನ್ಯಾಸಕರ ಪಟ್ಟು: ಸಚಿವ ಡಾ.ಅಶ್ವತ್ಥ ನಾರಾಯಣ ಕಿಡಿ

    ಬೆಂಗಳೂರು: ಮಾನವೀಯ ನೆಲೆ, ಜೀವನ ನಿರ್ವಹಣೆಗೆ ಅನುಕೂಲವಾಗಲೆಂದು ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಬಳ ಮೂರು ಪಟ್ಟು ಹೆಚ್ಚಿಸಿದ್ದು, ಯಾವುದೋ ರಾಜಕೀಯ ಕಾರಣಕ್ಕೆ ಕೆಲ ಅತಿಥಿ ಉಪನ್ಯಾಕರ ಸಂಘಟನೆಗಳು ಪಟ್ಟು ಹಿಡಿದಿವೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಕಿಡಿಕಾರಿದರು.

    ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು,‌‌ಯುಜಿಸಿ ನಿಯಮಾವಳಿ ಪ್ರಕಾರ ನೇಮಕವಾದವರಿಗೆ ಮಾತ್ರ ಸೇವಾ ಭದ್ರತೆ ಅನ್ವಯವಾಗುತ್ತದೆ. ಉಳಿದವರಿಗೆ ಸೇವಾ‌‌ಭದ್ರತೆಯ ಪ್ರಶ್ನೆಯೇ ಉದ್ಬವಿಸದು ಎಂದು ಸ್ಪಷ್ಟಪಡಿಸಿದರು. ಸರ್ಕಾರದ ಈಗಿನ ನಿರ್ಧಾರದಲ್ಲಿ ಬದಲಾವಣೆಯಿಲ್ಲ. ಇಷ್ಟ ಇರುವವರು ಸೇರಿಕೊಳ್ಳಬಹುದು. ಯುಜಿಸಿ ಮಾನದಂಡದ ಪ್ರಕಾರ ಹಾಲಿ 13500 ಅತಿಥಿ ಉಪನ್ಯಾಸಕರಲ್ಲಿ 4,500 ಉಪನ್ಯಾಸಕರು ಮಾತ್ರ ಅರ್ಹರಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯ, ಬೋಧನಾ ಗುಣಮಟ್ಟ ಕಾಯ್ದುಕೊಳ್ಳುವ ದೃಷ್ಟಿಯಿಂದ ಯುಜಿಸಿ ನಿಯಮಾವಳಿ ಪಾಲಿಸಲೇಕಾಗಿದೆ‌ ಎಂದು ಸಮಜಾಯಿಷಿ ನೀಡಿದರು.

    ಸೋಮವಾರ ಪೋರ್ಟಲ್ ಆರಂಭ
    ಯುಜಿಸಿ ಅರ್ಹತೆಯ ಮಾನದಂಡ ಹಾಗೂ ವರ್ಕ್ ಲೋಡ್ 8-10 ತಾಸು ವಿಸ್ತರಣೆಯಾಗಿರುವ ಕಾರಣ ಹೊಸದಾಗಿ 9500. ಅತಿಥಿ ಉಪನ್ಯಾಸಕರ ನೇಮಕಕ್ಕೆ ಅವಕಾಶ ದೊರೆತಿದ್ದು,‌ ಅರ್ಜಿ‌ ಸಲ್ಲಿಕೆಗಾಗಿ ಸೋಮವಾರ ಪೋರ್ಟಲ್ ಕಾರ್ಯಾರಂ‌ಭಿಸಲಿದ್ದು, ಅರ್ಹ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅಶ್ವತ್ಥ ನಾರಾಯಣ ಹೇಳಿದರು.

    ಮಾವನ ಎದುರಾಳಿಯಾದ ಸೊಸೆ? ಬಿಜೆಪಿ ತತ್ವಕ್ಕೆ ಮನಸೋತು ಬಿಎಸ್‌ಪಿ ಬಿಟ್ಟ ಮುಲಾಯಂ ಮಗನ ಪತ್ನಿ…

    ಜನರೇ ಎಚ್ಚರ ನಿಮಗೂ ಹೀಗಾಗಬಹುದು…ಪಿಜ್ಜಾ ತಿನ್ನುವ ಆಸೆಯಿಂದ 11 ಲಕ್ಷ ರೂ. ಕಳೆದುಕೊಂಡು ವೃದ್ಧೆ!

    ಇದು ಅತ್ಯಾಚಾರಿಗಳನ್ನು ಪ್ರೀತಿಸೋ ಸಮಾಜ: ನಟಿ ಪಾರ್ವತಿ ನೋವಿಗೆ ಗಾಯಕಿ ಚಿನ್ಮಯಿ ಸಾಂತ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts