More

    ಇದು ಅತ್ಯಾಚಾರಿಗಳನ್ನು ಪ್ರೀತಿಸೋ ಸಮಾಜ: ನಟಿ ಪಾರ್ವತಿ ನೋವಿಗೆ ಗಾಯಕಿ ಚಿನ್ಮಯಿ ಸಾಂತ್ವಾನ

    ಚೆನ್ನೈ: ಗಾಯಕಿ ಹಾಗೂ ಡಬ್ಬಿಂಗ್​ ಕಲಾವಿದೆ ಚಿನ್ಮಯಿ ಶ್ರೀಪಾದ ಅವರು ಸಾಮಾಜಿಕ ಜಾಲತಾಣದಲ್ಲಿನ ಅಶ್ಲೀಲತೆ ಹಾಗೂ ಸಮಾಜದಲ್ಲಿ ಹೆಣ್ಣಿನ ವಿರುದ್ಧ ನಡೆಯುತ್ತಿರುವ ಶೋಷಣೆಯ ವಿರುದ್ಧ ತಮ್ಮ ಹೋರಾಟ ಮುಂದುವರಿಸಿದ್ದಾರೆ. ಸ್ತ್ರೀವಾದಿ ಎಂದೇ ಬ್ರ್ಯಾಂಡ್​ ಆಗಿರುವ ಚಿನ್ಮಯಿ ಅವರು ಇದೀಗ ಸಮಾಜದಲ್ಲಿ ಅತ್ಯಾಚಾರಿಗಳನ್ನು ನೋಡುವ ರೀತಿಯನ್ನು ವಿವರಿಸಿ, ಆಕ್ರೋಶ ಹೊರಹಾಕಿದ್ದಾರೆ.

    2017ರಲ್ಲಿ ಮಲಯಾಳಂನ ಖ್ಯಾತ ನಟಿಯೊಬ್ಬರನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಇನ್ನು ಮಾಸಿಲ್ಲ. ಕೆಲವು ದಿನಗಳಿಂದ ಈ ಪ್ರಕರಣದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿದ್ದು, ಇತ್ತೀಚೆಗಷ್ಟೇ ಸಂತ್ರಸ್ತ ನಟಿಯು ಕೂಡ ಇನ್​ಸ್ಟಾಗ್ರಾಂನಲ್ಲಿ ಕಹಿ ಘಟನೆಯನ್ನು ನೆನಪು ಮಾಡಿಕೊಂಡಿದ್ದರು. ಚಿತ್ರರಂಗದ ಅನೇಕ ಗಣ್ಯರು ನಟಿಯ ಬೆಂಬಲಕ್ಕೆ ನಿಂತಿದ್ದಾರೆ.

    ಸಂತ್ರಸ್ತ ನಟಿಗೆ ಬೆಂಬಲ ನೀಡಿದವರಲ್ಲಿ ನಟಿ ಪಾರ್ವತಿ ಥಿರುವೊತ್ತು ಪ್ರಮುಖ ಸ್ಥಾನದಲ್ಲಿ ನಿಲ್ಲುತ್ತಾರೆ. ಮಹಿಳಾ ಗುಂಪುಗಳ ಸಂಪರ್ಕದಲ್ಲಿರುವ ಪಾರ್ವತಿ ಚಿತ್ರರಂಗದಲ್ಲಿನ ಮಹಿಳಾ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತುತ್ತಿರುತ್ತಾರೆ. ಇದರ ಪರಿಣಾಮ ಚಿತ್ರರಂಗದಲ್ಲಿ ಪಾರ್ವತಿಗೆ ಅವಕಾಶಗಳು ಕಡಿಮೆಯಾಗಿವೆ. ಈ ವಿಚಾರವನ್ನು ಇತ್ತೀಚಿನ ಸಂದರ್ಶನವೊಂದರಲ್ಲಿ ಪಾರ್ವತಿಯೇ ಹೇಳಿಕೊಂಡಿದ್ದಾರೆ. ಅಲ್ಲದೆ, ಬೆದರಿಕೆ ಕರೆಗಳು ಬರುತ್ತಿರುವುದಾಗಿಯೂ ತಿಳಿಸಿದ್ದಾರೆ. ಇದೀಗ ಅವರ ಬಳಿ ಎರಡೇ ಎರಡು ಚಿತ್ರಗಳಿರುವುದಾಗಿ ಹೇಳಿದ್ದಾರೆ.

    ಈ ವಿಚಾರವನ್ನು ಚಿನ್ಮಯಿ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಸ್ತಾಪಿಸಿದ್ದಾರೆ. ಪಾರ್ವತಿ ಓರ್ವ ಅದ್ಭುತ ಕಲಾವಿದೆ. ದೌರ್ಜನ್ಯಕ್ಕೆ ಒಳಗಾದವರ ಪರ ಧ್ವನಿ ಎತ್ತಿ ಅವಕಾಶಗಳಿಂದ ವಂಚಿತರಾಗಿದ್ದಾರೆ. ಲೈಂಗಿಕ ಕಿರುಕುಳದ ವಿರುದ್ಧ ಹೋರಾಡಿ ಆಕೆ ಕೆಲಸ ಕಳೆದುಕೊಂಡಿದ್ದು ನಿಜ. ಆದರೆ, ಹಲವು ಮಹಿಳೆಯರು ಕೆಲವು ಕಾರಣಗಳಿಂದ ಈ ವಿಚಾರದಲ್ಲಿ ಸುಮ್ಮನಾಗಿದ್ದಾರೆ. ಇದು ಅತ್ಯಾಚಾರಿಗಳನ್ನು ಪ್ರೀತಿಸುವ ಸಮಾಜವಾಗಿದೆ ಎಂದು ಚಿನ್ಮಯಿ ಅಸಮಾಧಾನ ಹೊರಹಾಕಿದ್ದಾರೆ.

    ನಟಿಯ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿ ನಟ ದಿಲೀಪ್ ಕುಮಾರ್ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಜನವರಿ 18ರವರೆಗೆ ಅವರನ್ನು ಬಂಧಿಸದಂತೆ ಕೇರಳ ಹೈಕೋರ್ಟ್ ಪೊಲೀಸರಿಗೆ ಸೂಚಿಸಿದೆ.

    ಗಾಯಕ ಚಿನ್ಮಯಿ ಅವರು ದಕ್ಷಿಣ ಭಾರತದಲ್ಲಿ ಮೀಟೂ ಚಳುವಳಿಯನ್ನು ಮುನ್ನಡೆಸಿದರು. ಆ ಸಮಯದಲ್ಲಿ, ಅವರು ತಮಿಳು ಚಿತ್ರರಂಗದ ಪ್ರಮುಖ ಬರಹಗಾರ ವೈರಮುತ್ತು ವಿರುದ್ಧ ಆರೋಪಗಳನ್ನು ಮಾಡಿದ್ದರು. ಅಲ್ಲದೆ, ಕನ್ನಡದ ಗಾಯಕ ರಘು ದೀಕ್ಷಿತ ವಿರುದ್ಧವೂ ಮೀಟೂ ಆರೋಪ ಮಾಡಿದ್ದರು. (ಏಜೆನ್ಸೀಸ್​)

    ಮಗಳ ಸಾವಿನ ನೋವಲ್ಲೇ ಜನತೆಯ ಬಳಿ ಅಮೃತಾ ನಾಯ್ಡು ಮಾಡಿರುವ ಮನವಿಯು ಕಣ್ಣೀರು ತರಿಸುವಂತಿದೆ

    86 ವರ್ಷಗಳ ಶಿಕ್ಷೆಗೆ ಗುರಿಯಾದ ಪಾಕ್‌ ಸುಂದರಿ! ಅಮೆರಿಕವನ್ನೇ ತಲ್ಲಣಗೊಳಿಸಿರುವ ನರವಿಜ್ಞಾನಿಯ ಭಯಾನಕ ಕಥೆಯಿದು..

    ಐಷಾರಾಮಿ ಕಾರುಗಳೇ ಈತನ ಟಾರ್ಗೆಟ್​: ಬರೋಬ್ಬರಿ 100 ಕಾರು ಕದ್ದಿದ ಖದೀಮ ಸಿಕ್ಕಿಬಿದ್ದಿದ್ದೇ ರೋಚಕ!

    ಹವಾಮಾನಕ್ಕೂ ಜಗ್ಗಲ್ಲ, ಕಣ್ಗಾವಲಿಗೂ ಬೀಳಲ್ಲ- ಯೋಧರಿಗಾಗಿ ನೂತನ ಸಮವಸ್ತ್ರ, ಹೀಗಿದೆ ನೋಡಿ ವಿಶೇಷತೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts