ಮಾವನ ಎದುರಾಳಿಯಾದ ಸೊಸೆ? ಬಿಜೆಪಿ ತತ್ವಕ್ಕೆ ಮನಸೋತು ಎಸ್‌ಪಿ ಬಿಟ್ಟ ಮುಲಾಯಂ ಮಗನ ಪತ್ನಿ...

mulayam
Published on

ಲಖನೌ: ಉತ್ತರ ಪ್ರದೇಶದ ಚುನಾವಣೆ ಇನ್ನೇನು ಸಮೀಪಿಸುತ್ತಿದೆ. ಈಗಾಗಲೇ ಇಲ್ಲಿ ಪಕ್ಷಾಂತರ ಪರ್ವ ಶುರುವಾಗಿದೆ. ಸಚಿವರು, ಶಾಸಕರು ಸೇರಿದಂತೆ ಕೆಲ ಬಿಜೆಪಿ ಧುರೀಣರು ತಮ್ಮ ಪಕ್ಷ ಬಿಟ್ಟು ಬಹುಜನ ಸಮಾಜವಾದಿ ಪಕ್ಷ (ಬಿಎಸ್ಪಿ) ಸೇರ್ಪಡೆಗೊಳ್ಳುತ್ತಿದ್ದರೆ, ಅದೇ ಇನ್ನೊಂದೆಡೆ ಬಿಎಸ್‌ಪಿ ಬಿಟ್ಟು ಬಿಜೆಪಿ ಸೇರುವವರೂ ಹೆಚ್ಚಾಗುತ್ತಿದ್ದಾರೆ.

ಇದೀಗ ಸಮಾಜವಾದಿ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾದವ್​ ಅವರ ಕಿರಿಯ ಸೊಸೆ ಅಪರ್ಣಾ ಯಾದವ್ ಎಸ್‌ಪಿ ತೊರೆದಿದ್ದು ಬಿಜೆಪಿ ಸೇರುವ ತಯಾರಿ ನಡೆಸುತ್ತಿರುವುದಾಗಿ ಹೇಳಲಾಗುತ್ತಿದೆ. ಮುಲಾಯಂ ಸಿಂಗ್ ಅವರ ಕಿರಿಯ ಪುತ್ರ ಪ್ರತೀಕ್ ಯಾದವ್ ಅವರ ಪತ್ನಿ ಅಪರ್ಣಾ. ಮೊದಲಿನಿಂದಲೂ ಎನ್​ಡಿಎ ಸರ್ಕಾರದ ನೀತಿಗಳನ್ನು ಬೆಂಬಲಿಸುತ್ತಿದ್ದ ಇವರು ಇದೀಗ ಬಿಜೆಪಿ ಸೇರುವ ತಯಾರಿ ನಡೆಸಿರುವುದಾಗಿ ವಿಶ್ವಸಾರ್ಹ ಮೂಲಗಳು ತಿಳಿಸಿವೆ.

ಇವರು 2017ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಇವರು ಸ್ಪರ್ಧಿಸಿದ್ದರು. ಬಿಎಸ್‌ಪಿಯಿಂ ಸ್ಪರ್ಧಿಸಿ ಬಿಜೆಪಿಯ ರೀಟಾ ಬಹುಗುಣ ಜೋಶಿ ಎದುರು ಪರಾಭವಗೊಂಡಿದ್ದರು. ಆದರೆ ಇದೀಗ ಬಿಜೆಪಿ ಸೇರುವ ಒಲವು ತೋರಿದ್ದಾರೆ. ಇದು  ಸಮಾಜವಾದಿ ಪಕ್ಷಕ್ಕೆ ಹೊಡೆತ ಬೀಳುವ ಸಾಧ್ಯತೆ ಇದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net