More

    ಜನರೇ ಎಚ್ಚರ ನಿಮಗೂ ಹೀಗಾಗಬಹುದು…ಪಿಜ್ಜಾ ತಿನ್ನುವ ಆಸೆಯಿಂದ 11 ಲಕ್ಷ ರೂ. ಕಳೆದುಕೊಂಡು ವೃದ್ಧೆ!

    ಮುಂಬೈ: ಸೈಬರ್‌ ಕ್ರೈಂ ಪ್ರಕರಣ ದಿನವೂ ವರದಿಯಾಗುತ್ತಿದೆ. ಬ್ಯಾಂಕ್‌ ಖಾತೆಗೆ ಕನ್ನ ಹಾಕಿ ಮೋಸ ಮಾಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಮುಂಬೈನಲ್ಲಿ ಇಂಥದ್ದೇ ಒಂದು ಪ್ರಕರಣ ಜರುಗಿದ್ದು, ಆನ್​ಲೈನ್​ನಲ್ಲಿ ಪಿಜ್ಜಾ ಮತ್ತು ಡ್ರೈ ಫ್ರೂಟ್​ ಆರ್ಡರ್​ ಮಾಡಿದ ವೃದ್ಧೆಯೊಬ್ಬರು 11 ಲಕ್ಷ ರೂಪಾಯಿ ಕಳೆದುಕೊಂಡಿದ್ದು, ಇದೀಗ ಸೈಬರ್​ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾರೆ.

    ಮುಂಬೈನ ಅಂಧೇರಿಯಲ್ಲಿ ವಾಸವಿರುವ ವೃದ್ಧೆ ಕಳೆದ ವರ್ಷ ಜುಲೈನಲ್ಲಿ ಆನ್​ಲೈನ್​ನಲ್ಲಿ ಪಿಜ್ಜಾ ಆರ್ಡರ್​ ಮಾಡಿದ್ದರು. ಈ ವೇಳೆ 9,999 ರೂಪಾಯಿ ಕಳೆದುಕೊಂಡಿದ್ದರು. ಮತ್ತೆ ಅಕ್ಟೋಬರ್​ 29ರಂದು ಡ್ರೈಫ್ರೂಟ್​ ಆರ್ಡರ್​ ಮಾಡಿ 1,496 ರೂಪಾಯಿ ಕಳೆದುಕೊಂಡಿದ್ದರು.

    ಕಳೆದುಕೊಂಡ ಹಣವನ್ನು ಮತ್ತೆ ಪಡೆಯಲು ವೃದ್ಧೆ ಗೂಗಲ್​ ಸಹಾಯ ಪಡೆದಿದ್ದಾರೆ. ಗೂಗಲ್​ನಲ್ಲಿ ಸಿಕ್ಕ ಫೋನ್​ ನಂಬರ್​ ಒಂದಕ್ಕೆ ವೃದ್ಧೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ವ್ಯಕ್ತಿ ಹಣವನ್ನು ಅಕೌಂಟ್​ಗೆ ಮರಳಿಸುವ ಭರವಸೆಯನ್ನು ನೀಡಿದ್ದಾನೆ. ಫೋನ್​ನಲ್ಲಿ ಅಪ್ಲಿಕೇಶನ್​ ಒಂದನ್ನು ಡೌನ್​ಲೋಡ್​ ಮಾಡುವಂತೆ ಹೇಳಿದ್ದಾನೆ. ಹೇಳಿದಂತೆಯೇ ವೃದ್ಧೆ ಆ್ಯಪ್​ ಡೌನ್​ಲೋಡ್​ ಮಾಡಿದ್ದಾರೆ.

    ಇದಾದ ಬಳಿಕ ಸೈಬರ್​ ಖದೀಮರು ಅಪ್ಲಿಕೇಶನ್​ ಸಹಾಯದಿಂದ ವೃದ್ಧೆಯ ಬ್ಯಾಂಕ್​ ಖಾತೆಯ ನಂಬರ್​ ಮತ್ತು ಪಾಸ್​ವರ್ಡ್​ ಸೇರಿದಂತೆ ಅನೇಕ ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ. ಬಳಿಕ ಹಂತ ಹಂತವಾಗಿ ಹಣವನ್ನು ಖಾತೆಯಿಂದ ಎಗರಿಸಿದ್ದಾರೆ. ನವೆಂಬರ್​ 14 ರಿಂದ ಡಿಸೆಂಬರ್​ 1ರವರೆಗೂ ಸುಮಾರು 11 ಲಕ್ಷದ 78 ಸಾವಿರ ಹಣವನ್ನು ವೃದ್ಧೆಯ ಬ್ಯಾಂಕ್​ ಖಾತೆಯಿಂದ ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ.

    ತಾನೂ ಮತ್ತೊಮ್ಮೆ ಮೋಸ ಹೋಗಿರುವುದನ್ನು ಇತ್ತೀಚೆಗಷ್ಟೇ ಅರಿತ ವೃದ್ಧೆ ಸೈಬರ್​ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ನಡೆದ ಎಲ್ಲ ಘಟನೆಯನ್ನು ಪೊಲೀಸರ ಎದುರು ವೃದ್ಧೆ ವಿವರಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಎಫ್​ಐಆರ್​ ದಾಖಲಿಸಿದ್ದಾರೆ. ಗೂಗಲ್​ನಲ್ಲಿ ಕಾಣುವ ಫೋನ್​ ನಂಬರ್​ಗೆ ಕರೆ ಮಾಡಬೇಡಿ ಸೈಬರ್​ ವಂಚಕರು ಕಾದು ಕುಳಿತಿರುತ್ತಾರೆ ಎಂದು ಪೊಲೀಸರು ಎಚ್ಚರಿಕೆಯನ್ನು ನೀಡಿದ್ದಾರೆ. (ಏಜೆನ್ಸೀಸ್​)

    ಮಗಳ ಸಾವಿನ ನೋವಲ್ಲೇ ಜನತೆಯ ಬಳಿ ಅಮೃತಾ ನಾಯ್ಡು ಮಾಡಿರುವ ಮನವಿಯು ಕಣ್ಣೀರು ತರಿಸುವಂತಿದೆ

    ಇದು ಅತ್ಯಾಚಾರಿಗಳನ್ನು ಪ್ರೀತಿಸೋ ಸಮಾಜ: ನಟಿ ಪಾರ್ವತಿ ನೋವಿಗೆ ಗಾಯಕಿ ಚಿನ್ಮಯಿ ಸಾಂತ್ವಾನ

    ಸಂಗೀತಗಾರನ ಎದುರಲ್ಲೇ ವಾದ್ಯವನ್ನು ಸುಟ್ಟ ತಾಲಿಬಾನಿಗಳು: ಕಲಾವಿದನ ಕಣ್ಣೀರು ನೋಡಿ ರಕ್ಕಸರ ನಗು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts