More

    ಆಶಿಕಾ ಪಾಲಿಗೆ ಇಂದು ವಿಶೇಷವಾದ ದಿನ? ಯಾಕಿರಬಹುದು?

    ಆಗಸ್ಟ್​ 05ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ನಟಿ ಆಶಿಕಾ ರಂಗನಾಥ್​ಗೆ ಇಂದು ಮತ್ತೆ ವಿಶೇಷವಾದ ದಿನ. ಯಾಕೆ ಗೊತ್ತಾ? ಆಶಿಕಾ ಅಭಿನಯದ ಮೊದಲ ಕನ್ನಡ ಚಿತ್ರ ‘ಕ್ರೇಜಿ ಬಾಯ್​’ ಇಂದು ಬಿಡುಗಡೆಯಾಗಿ ನಾಲ್ಕು ವರ್ಷ.

    ಇದನ್ನೂ ಓದಿ: ‘ಜೋಗಿ’ ಹೆಸರಲ್ಲಿದೆ ಇಷ್ಟೆಲ್ಲಾ ದಾಖಲೆಗಳು!

    ಈ ವಿಷಯವನ್ನು ಆಶಿಕಾ ಅವರೇ ಸೋಷಿಯಲ್​ ಮೀಡಿಯಾದಲ್ಲಿ ಈ ಕುರಿತು ಪೋಸ್ಟ್​ ಹಾಕಿದ್ದಾರೆ. ‘ಕ್ರೇಜಿ ಬಾಯ್​ ಚಿತ್ರ, ಕಪಾಲಿ ಚಿತ್ರಮಂದಿರ, ಫಸ್ಟ್​ ಡೇ ಫಸ್ಟ್​ ಶೋ, ನಾಲ್ಕು ವರ್ಷಗಳ ಹಿಂದೆ … ಎಂಥಾ ಅದ್ಭುತವಾದ ಅನುಭವ ಅದು. ಈ ಜೀವನದಲ್ಲಿ ಮರೆಯಲಿಕ್ಕೆ ಸಾಧ್ಯವಾಗದೇ ಇರುವ ಅನುಭವ ಅದು. ಎಲ್ಲರಿಗೂ ಧನ್ಯವಾದಗಳು’ ಎಂದು ಪೋಸ್ಟ್​ ಹಾಕಿದ್ದಾರೆ.

    ಆಶಿಕಾ ಕನ್ನಡ ಚಿತ್ರರಂಗಕ್ಕೆ ಬಂದು ನಾಲ್ಕು ವರ್ಷವಾದ ಹಿನ್ನೆಲೆಯಲ್ಲಿ ಅವರ ಅಭಿಮಾನಿಗಳು ಸೋಷಿಯಲ್​ ಮೀಡಿಯಾದಲ್ಲಿ ಕಾಮನ್​ ಡಿಸ್​​ಪ್ಲೇ ಪಿಕ್ಚರ್​ (ಸಿಡಿಪಿ) ಹಾಕಿಕೊಂಡು ತಮ್ಮ ಮೆಚ್ಚಿನ ನಟಿಗೆ ಶುಭಾಶಯಗಳನ್ನು ಕೋರಿದ್ದಾರೆ.

    ಇದನ್ನೂ ಓದಿ: ಸೂಪರ್ ಸ್ಟಾರ್​ಗೆ ರಾಕಿಂಗ್​ ಸ್ಟಾರ್ ಧ್ವನಿ…

    ‘ಕ್ರೇಜಿ ಬಾಯ್​’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದ ಆಶಿಕಾ ನಂತರದ ವರ್ಷಗಳಲ್ಲಿ ‘ಮಾಸ್​ ಲೀಡರ್​’, ‘ಮುಗುಳು ನಗೆ’, ‘ರಾಜು ಕನ್ನಡ ಮೀಡಿಯಂ’, ‘ರಾಂಬೋ 2’, ‘ತಾಯಿಗೆ ತಕ್ಕ ಮಗ’ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರಗಳು ಈಗಾಗಲೇ ಬಿಡುಗಡೆಯಾಗಿದ್ದು, ಮುಂದಿನ ದಿನಗಳಲ್ಲಿ ‘ಅವತಾರ್​ ಪುರುಷ’, ‘ರೆಮೋ’, ‘ಮದಗಜ’ ಮುಂತಾದ ಚಿತ್ರಗಳು ಇನ್ನೂ ಬಿಡುಗಡೆಯಾಗುವುದಕ್ಕಿದೆ.

    ಎಲ್ಲಾ ಸರಿ, ಈ ಪನ್ನಾ ಯಾರು? ಉತ್ತರಕ್ಕಾಗಿ ನಾಳೆವರೆಗೂ ಕಾಯಬೇಕು …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts