More

    ದೇಗುಲ ನಿರ್ಮಾಣಕ್ಕಾಗಿ ಶಾಂತಿ ಹೋಮ

    ಆನಂದಪುರ: ಗ್ರಾಮ ದೇವತೆ ಕಡ್ಲೆಹಂಕ್ಲು ಶ್ರೀ ಮಾರಿಕಾಂಬಾ ದೇವಿಯ ತವರು ಮನೆ ಗುಡಿ ಅಶೋಕ ರಸ್ತೆಯ ತಿರುವಿನಲ್ಲಿದೆ. ಈ ದೇಗುಲದ ಸ್ಥಳದಲ್ಲಿ ಸುಂದರ ಶಿಲಾಮಯ ದೇಗುಲ ನಿರ್ಮಿಸಲು ಪೂರ್ವ ಸಿದ್ಧತಾ ಹಂತವಾಗಿ ಭಾನುವಾರದಿಂದ ಎರಡು ದಿನ ಶಾಂತಿ ಹೋಮ ನಡೆಯಿತು. ಭಾನುವಾರ ರಾತ್ರಿ ಶ್ರೀ ಪಂಚದುರ್ಗಾ ದೀಪ ನಮಸ್ಕಾರ, ಅಘೋರ ಶೂಲಿನಿ ಹೋಮ, ಅಘೋರಾಸ ಪ್ರಯೋಗ, ಪ್ರೇತೋಚ್ಚಾಟನೆ, ಬ್ರಹ್ಮರಾಕ್ಷಸ ಮುಕ್ತಿ ಮಂಗಳ ಪೂಜೆ ನಡೆಸಲಾಯಿತು. ಸೋಮವಾರ ನಾರಾಯಣ ಬಲಿ ಹೋಮ, ನಾರಾಯಣ ಬಲಿ ಜಪ, ತಿಲಹೋಮ ಹಾಗೂ ಮಂಗಳಾರತಿ ನಡೆಯಿತು. ಕೋಟೇಶ್ವರದ ರಾಮಕೃಷ್ಣ ಉಡುಪರ ಪೌರೋಹಿತ್ಯದಲ್ಲಿ ನಡೆದ ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಕಡ್ಲೆಹಂಕ್ಲು ಶ್ರೀ ಮಾರಿಕಾಂಬಾ ದೇವಾಲಯ ಸಮಿತಿ ಅಧ್ಯಕ್ಷ ಎಲ್.ವೆಂಕಟೇಶ, ಪದಾಧಿಕಾರಿಗಳು, ಗ್ರಾಮಸ್ಥರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts