More

    ವಿಜ್ಞಾನಿಗಳ ಪರಿಶ್ರಮ ಸರ್ವಕಾಲಕ್ಕೂ ಶ್ಲಾಘನೀಯ

    ಆನಂದಪುರ: ವಿಜ್ಞಾನಿಗಳು ತಮ್ಮ ಸಂಶೋಧನಾ ಕಾರ್ಯ ಯಶಸ್ವಿಯಾಗುವವರೆಗೂ ವಿಶ್ರಮಿಸುವುದಿಲ್ಲ. ಅವರ ಪರಿಶ್ರಮದ ಸಾಧನೆ ಸರ್ವಕಾಲಕ್ಕೂ ಶ್ಲಾಘನೀಯ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.

    ಪಬ್ಲಿಕ್ ಶಾಲಾ ಆವರಣದಲ್ಲಿ ಜೈ ಭಾರತ್ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಇಸ್ರೋ ವಿಜ್ಞಾನಿಗಳಿಂದ ಪದವಿ ಪೂರ್ವ ಮತ್ತು ಪದವಿಯೇತರ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಇಸ್ರೋ ವಿಜ್ಞಾನಿಗಳು ಚಂದ್ರಯಾನದಂತಹ ಸಾಹಸದ ಕಾರ್ಯ ಯಶಸ್ಸುಗೊಳಿಸಿ, ಜಗತ್ತೇ ಭಾರತದತ್ತ ನೋಡುವಂತೆ ಮಾಡಿದರು. ವಿದ್ಯಾರ್ಥಿಗಳು ಮತ್ತು ಯುವಕರು ಇಂತಹ ಪರಿಶ್ರಮದ ವಿಜ್ಞಾನಿಗಳ ಸಾಹಸದ ಯಶೋಗಾಥೆಯಿಂದ ಸ್ಫೂರ್ತಿ ಪಡೆಯಬೇಕು ಎಂದರು.
    ಹೆಚ್ಚವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಭೂಮರಡ್ಡಿ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಯುವಕರು ಮಾದಕ ವ್ಯಸನಕ್ಕೆ ಬಲಿಯಾಗಬಾರದು ಎಂದು ಕಿವಿಮಾತು ಹೇಳಿದರು. ಮಲೆನಾಡು ಕೋಚಿಂಗ್ ಸೆಂಟರ್‌ನ ಕೇಶವಮೂರ್ತಿ ಮಾತನಾಡಿ, ಸೂಕ್ತ ಮಾರ್ಗದರ್ಶನ ಪಡೆದುಕೊಂಡರೆ ಮಾತ್ರ ಉತ್ತಮ ಉದ್ಯೋಗ ಪಡೆಯಲು ಸಾಧ್ಯ ಎಂದರು.
    ಬಳಗದ ಅಧ್ಯಕ್ಷ ಎಲ್.ಶರಣ್ ಅಧ್ಯಕ್ಷತೆ ವಹಿಸಿದ್ದರು. ಇಸ್ರೋ ವಿಜ್ಞಾನಿ ಎ.ಎಸ್.ಭೀಮರಾಜಪ್ಪ, ಗ್ರಾಪಂ ಅಧ್ಯಕ್ಷ ಮೋಹನ್ ಕುಮಾರ್, ಸದಸ್ಯರಾದ ಶರತ್ ನಾಗಪ್ಪ, ಗಜೇಂದ್ರ, ತಾಪಂ ಮಾಜಿ ಸದಸ್ಯ ಸೋಮಶೇಖರ ಲಾವಿಗೆರೆ, ಪ್ರಮುಖರಾದ ಎನ್.ಉಮೇಶ, ಎಚ್.ಕೆ.ನಾಗಪ್ಪ, ಎಂ.ಎಲ್.ಈಶ್ವರ, ರಹಮತ್ ಉಲ್ಲಾ, ರಮಾನಂದ ಸಾಗರ್, ಚೇತನ್, ರವಿಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts