More

    ಮೊಟ್ಟೆ, ತರಕಾರಿ ಮಾರಾಟಕ್ಕಿಳಿದ ಮಟ್ಕಾ ಬುಕ್ಕಿಗಳು; ಪ್ರವಾಸಿಗರನ್ನೇ ಕಾಯುತ್ತಿದೆ ಕರೊನಾಮುಕ್ತ ರಾಜ್ಯ

    ಪಣಜಿ: ದೇಶದಲ್ಲಿಯೇ ಕರೊನಾ ಮುಕ್ತ ಮೊದಲ ರಾಜ್ಯವೆನಿಸಿದೆ ಗೋವಾ. ಇಲ್ಲಿದ್ದ ಏಳು ಸೋಂಕಿತರ ಪೈಕಿ ಎಲ್ಲರೂ ಗುಣಮುಖರಾಗಿ, ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

    ಆದರೆ, ಎಲ್ಲ ರಾಜ್ಯಗಳಂತೆ ಇಲ್ಲಿಯೂ ಲಾಕ್​ಡೌನ್​ ನಿಯಮಗಳು ಅನ್ವಯಿಸುತ್ತವೆ. ಪ್ರವಾಸೋದ್ಯಮವನ್ನೇ ನಂಬಿಕೊಂಡಿರುವ ಈ ರಾಜ್ಯ ಹೊರಗಿನ ಜನರೇ ಇಲ್ಲದಂತಾಗಿ ಆದಾಯದ ಮೂಲವನ್ನೇ ಕಳೆದುಕೊಂಡಿದೆ. ಇನ್ನೊಂದೆಡೆ ಗೋವಾ ಪ್ರಸಿದ್ಧವಾಗಿರುವುದು ಜೂಜಾಟಕ್ಕೆ. ಕ್ಯಾಸಿನೋಗಳು ಕಾನೂನುಬದ್ಧ ಜೂಜಾಟ ನಡೆಸಿದರೆ, ಅಕ್ರಮವಾಗಿ ನಡೆಯುವ ಮಟ್ಕಾ ಸಾವಿರಾರು ಜನರಿಗೆ ಉದ್ಯೋಗ ಮೂಲವೂ ಹೌದು.

    ಪ್ರತಿದಿನ 10-12 ಕೋಟಿ ವಹಿವಾಟು ನಡೆಸುವ ಮಟ್ಕಾಗೆ 10,000ಕ್ಕೂ ಅಧಿಕ ಬುಕ್ಕಿಗಳಿದ್ದಾರೆ. ನಗದು ವಹಿವಾಟು ಇದರ ಜೀವಾಳವಾಗಿರುವುದರಿಂದ ಇದನ್ನು ಆನ್​​ಲೈನ್​ನಲ್ಲಿ ನಡೆಸಲು ಸಾಧ್ಯವಿಲ್ಲ. ಇನ್ನು ಬುಕ್ಕಿಗಳು ಮನೆಮನೆಗೆ ಹೋಗಿ ನಂಬರ್​ ಬರೆದುಕೊಳ್ಳುವುದು ಅಸಾಧ್ಯದ ಮಾತು.

    ಹೀಗಾಗಿ, ಮಟ್ಕಾ ಬುಕ್ಕಿಗಳು ಈಗ ಪರ್ಯಾಯ ಉದ್ಯೋಗ ನಡೆಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಕೆಲವರು ತರಕಾರಿ, ಹಣ್ಣು-ಹಂಪಲು ಮಾರಾಟದಲ್ಲಿ ತೊಡಗಿದ್ದರೆ, ಇನ್ನು ಕೆಲವರು, ಮೊಟ್ಟೆ ಹಾಗೂ ಇನ್ನಿತರ ದಿನಸಿ ವಸ್ತುಗಳ ಮಾರಾಟದಲ್ಲಿ ತೊಡಗಿದ್ದಾರೆ.
    ಮಟ್ಕಾ ಕೆಲಸವನ್ನು ಪೊಲೀಸರ ಕಣ್ತಪ್ಪಿಸಿ ಮಾಡಬೇಕಾಗುತ್ತದೆ. ಆದರೆ, ಇಲ್ಲಿ ಜಾಗದ ಮಾಲೀಕರಿಗೆ ಒಂದಷ್ಟು ಬಾಡಿಗೆ ಕೊಡುವುದು ಬಿಟ್ಟರೆ ಬೇರಾವ ತೊಂದರೆಗಳಿಲ್ಲ ಎನ್ನುತ್ತಾರೆ ತರಕಾರಿ ವ್ಯಾಪಾರಿಗಳಾಗಿರುವ ಬುಕ್ಕಿಗಳು.

    ಮಟ್ಕಾ ನಂಬರ್​ ಬರೆಸಲು ಜನರು ನನ್ನ ಬಳಿ ಬರುತ್ತಿದ್ದರು. ಅಲ್ಲಿ ಒಂದೇ ಸ್ಥಳದಲ್ಲಿ ಇರುವುದು ಮುಖ್ಯವಾದರೆ, ಇಲ್ಲಿ ಬೇರೆ ಬೇರೆ ಸ್ಥಳಗಳಿಗೆ ತೆರಳಿ ಮಾರಾಟ ಮಾಡಬೇಕಾಗುತ್ತದೆ ಎನ್ನುತ್ತಾರೆ ಮೊಟ್ಟೆ ಮಾರಾಟಕ್ಕಿಳಿದಿರುವ ಬುಕ್ಕಿಗಳು.
    ಕೆಲ ದಿನಗಳಲ್ಲಿ ಲಾಕ್​ಡೌನ್​ ತೆರವಾಗಿ ಎಲ್ಲವೂ ಸಾಮಾನ್ಯ ಸ್ಥಿತಿಗೆ ಬರಲಿದೆ. ಮಟ್ಕಾ ಎಂದಿನಂತೆ ನಡೆಯಲಿದೆ ಎಂಬ ವಿಶ್ವಾಸ ಇವರದ್ದಾಗಿದೆ.

    ಮೇ 3ಕ್ಕೆ ಮುಗಿಯಲ್ಲ ದೇಶಾದ್ಯಂತ ಲಾಕ್​​ಡೌನ್​, ವಿಸ್ತರಣೆ ಕೋರುತ್ತಿರುವ 6 ರಾಜ್ಯಗಳು, ಇನ್ನಷ್ಟು ಸೇರಿಕೊಂಡರೆ ಅಚ್ಚರಿಯಿಲ್ಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts