More

    ಪೋರ್ನ್​ ವಿಡಿಯೋಗಳನ್ನು ನೋಡುವಾಗ ಪತ್ನಿ ಕೈಗೆ ಸಿಕ್ಕಿಬಿದ್ದ ಗಂಡ: ನಂತರ ನಡೆದಿದ್ದು ಘೋರ ದುರಂತ

    ಸೂರತ್​: ಪೋರ್ನ್​ ವಿಡಿಯೋಗಳನ್ನು ನೋಡುವ ವಿಚಾರದಲ್ಲಿ ಗಂಡ-ಹೆಂಡತಿ ನಡುವೆ ಆರಂಭವಾದ ಜಗಳ ಪತ್ನಿಯ ಕೊಲೆಯಲ್ಲಿ ಅಂತ್ಯವಾಗಿರುವ ದಾರುಣ ಘಟನೆ ಗುಜರಾತಿನ ಸೂರತ್​ನಲ್ಲಿ ನಡೆದಿದೆ.

    ಕತರ್​ಗಮ್​ ಮೂಲದ ಕಿಶೋರ್​ ಪಟೇಲ್​ (33) ಎಂಬಾತ ತನ್ನ ಪತ್ನಿಯ ಕಾಜಲ್​ (30) ಎಂಬಾಕೆಯನ್ನು ಬೆಂಕಿ ಇಟ್ಟು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

    ಇದನ್ನೂ ಓದಿ: ನಟಿ ಶುಭಾ ಪೂಂಜಾ ಮನೆಯಲ್ಲಿ ನಡೆದ ಅತ್ಯಂತ ನೋವಿನ ಸಂಗತಿ ಬಿಚ್ಚಿಟ್ಟ ಆ್ಯಂಕರ್​ ಅನುಶ್ರೀ!

    ಭಾನುವಾರ ರಾತ್ರಿ ಕಿಶೋರ್ ತನ್ನ ಮೊಬೈಲ್​ನಲ್ಲಿ ಪೋರ್ನ್​ ವಿಡಿಯೋಗಳನ್ನು ನೋಡುತ್ತಿದ್ದ. ಇದನ್ನು ಗಮನಿಸಿದ ಪತ್ನಿ ಅಂತಹ ವಿಡಿಯೋಗಳನ್ನು ನೋಡುವುದನ್ನು ನಿಲ್ಲಿಸು ಎಂದು ಹೇಳಿದಳು. ಆದರೆ, ಪತ್ನಿಯ ಮಾತಿಗೆ ಕ್ಯಾರೆ ಎನ್ನದ ಕಿಶೋರ್​ ವಿಡಿಯೋ ನೋಡುವುದನ್ನು ಮುಂದುವರಿಸಿದೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಭಾರೀ ವಾಗ್ವಾದ ನಡೆಯಿತು.

    ಸೋಮವಾರವು ಕೂಡ ಇದೇ ವಿಚಾರಕ್ಕೆ ಗಂಡ-ಹೆಂಡತಿ ನಡುವೆ ಮತ್ತೆ ವಾಗ್ವಾದ ನಡೆಯಿತು. ಈ ವೇಳೆ ಇಬ್ಬರ ಮಾತಿನ ಚಕಮಕಿ ಹೊಡೆದಾಟಕ್ಕೆ ತಿರುಗಿ, ತಾಳ್ಮೆ ಕಳೆದುಕೊಂಡ ಕಿಶೋರ್​, ಪತ್ನಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾನೆ. ಶೇ. 40 ಸುಟ್ಟ ಗಾಯಗಳಿಂದ ಮಂಗಳವಾರ ಬೆಳಗ್ಗೆ ಕಾಜಲ್​ ಕೊನೆಯುಸಿರೆಳೆದಳು. ಸಾವಿಗೂ ಮುನ್ನ ಪೊಲೀಸರ ಮುಂದೆ ಕಾಜಲ್​ ಹೇಳಿಕೆ ನೀಡಿದ್ದು, ಅದರ ಆಧಾರದ ಮೇಲೆ ಕಿಶೋರ್​ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದ್ದು, ಆತನನ್ನು ಬಂಧಿಸಲಾಗಿದೆ.

    ಇದನ್ನೂ ಓದಿ: ಅಮೆರಿಕ ಅಧ್ಯಕ್ಷೀಯ ಚುನಾವಣೆ; ಕಣಕ್ಕೆ ಧುಮುಕಿದ್ರು ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ

    ಅಂದಹಾಗೆ ಆರೋಪಿ ಕಿಶೋರ್​ ಗುಜರಾತಿನ ಪಠಾಣ್​ ಮೂಲದವನು. ಕಾಜಲ್​ ಮುಂಬೈ ಮೂಲದವಳು. ಇಬ್ಬರು ಒಂದು ವರ್ಷಗಳ ಹಿಂದಷ್ಟೇ ಮದುವೆಯಾಗಿದ್ದರು. ಮುಂಬೈನ ಡೈಮಂಡ್​ ಆಭರಣ ಫ್ಯಾಕ್ಟರಿಯಲ್ಲಿ ಒಟ್ಟಿಗೆ ಕೆಲಸ ಮಾಡುವಾಗ ಇಬ್ಬರ ನಡುವೆ ಪರಿಚಯವಾಗಿ, ಪರಿಚಯ ಪ್ರೇಮಕ್ಕೆ ತಿರುಗಿ ನಂತರ ಇಬ್ಬರು ಮದುವೆ ಆಗಿದ್ದರು. ಕಾಜಲ್​ಗೆ ಇದು ಎರಡನೇ ಮದುವೆ ಆಗಿತ್ತು. ಆಕೆಯ ಮೊದಲ ಗಂಡ 5 ವರ್ಷಗಳ ಹಿಂದೆಯೇ ಮೃತಪಟ್ಟಿದ್ದಾರೆ. (ಏಜೆನ್ಸೀಸ್​)

    ರಷ್ಯಾ-ಯೂಕ್ರೇನ್ ಸಮರಕ್ಕೆ ವರ್ಷ; ಯಾರಿಗೂ ಇಲ್ಲ ಹರ್ಷ

    ಖಾಸಗಿ ಫೋಟೋ ಸೋರಿಕೆ: ನಟಿ ಆಲಿಯಾ ಭಟ್ ಆಕ್ರೋಶ, ದೂರು ದಾಖಲಿಸಿ ಎಂದ ಮುಂಬೈ ಪೊಲೀಸರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts