More

    ಅಪ್ಪ-ಮಗಳ ಬಾಂಧವ್ಯದ ಕಿರುಚಿತ್ರ ‘ಆರಾಧ್ಯ’ …

    ಬೆಂಗಳೂರು: ಕಳೆದ ಒಂದು ವರ್ಷದಲ್ಲಿ ಪತ್ರಕರ್ತ ಹಾಗೂ ನಟ ಯತಿರಾಜ್​ ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಈಗ ಅವರ 18ನೇ ಕಿರುಚಿತ್ರವಾಗಿ ‘ಆರಾಧ್ಯ’ ಮೂಡಿಬಂದಿದೆ. ಈ ಚಿತ್ರವನ್ನು ನಿರ್ದೇಶಿಸುವುದರ ಜತೆಗೆ ಅವರೇ ಕಥೆ, ಚಿತ್ರಕಥೆ ಬರೆದು ನಿರ್ಮಾಣ ಮಾಡಿದ್ದಾರೆ.

    ಇದನ್ನೂ ಓದಿ: ಕನ್ನಡ ಸಿನಿಮಾದಲ್ಲಿ ರಶ್ಮಿಕಾ ನಟಿಸದಿರಲು ಕಾರಣ…

    ತಂದೆ-ಮಗಳ ಬಾಂಧವ್ಯ ಸಾರುವ ಈ ಚಿತ್ರವು ಇದೀಗ ಯೂಟ್ಯೂಬ್​ನ ಕಲಾವಿಧ ಚಾನಲ್​ನಲ್ಲಿ ಬಿಡುಗಡೆಯಾಗಿ, ಮೆಚ್ಚುಗೆ ಪಡೆಯುತ್ತಿದೆ. ಇತ್ತೀಚೆಗೆ, ಈ ಕಿರುಚಿತ್ರದ ಪ್ರದರ್ಶನ ಸಹ ನಡೆಯಿತು.

    ಈ ಸಂದರ್ಭದಲ್ಲಿ ಮಾತನಾಡಿದ ಯತಿರಾಜ್​, ‘ಕರೊನಾ ಬಂದ ಮೇಲೆ ಆಯಾ ಸಂದರ್ಭಕ್ಕೆ ತಕ್ಕ ಹಾಗೆ ಕೆಲವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದೇನೆ. ಆದರೆ, ‘ಆರಾಧ್ಯ’ ನನ್ನ ಮನಸ್ಸಿಗೆ ಬಹಳ ಹತ್ತಿರವಾದ ಸಿನಿಮಾ. ಮನೆಯಲ್ಲಿ ತಂದೆಯಾದವನಿಗೆ ಜವಾಬ್ದಾರಿ ಇಲ್ಲದೇ ಇದ್ದಾಗ, ಮಕ್ಕಳಿಗೆ ಯಾವ ರೀತಿ ತೊಂದರೆಯಾಗುತ್ತದೆ ಎಂಬ ವಿಷಯವನ್ನು ಮುಖ್ಯವಾಗಿಟ್ಟುಕೊಂಡು ಈ ಚಿತ್ರ ಮಾಡಿದ್ದೇವೆ’ ಎಂದರು.

    ‘ಆರಾಧ್ಯ’ ಕಿರುಚಿತ್ರದಲ್ಲಿ ಯತಿರಾಜ್​ ಜತೆಗೆ ಬೇಬಿ ಆರಾಧ್ಯ, ಅಂಜಲಿ, ಶಾಂತಕುಮಾರ್ ಅಭಿನಯಿಸಿದ್ದಾರೆ. ಜೀವನ್ ಅವರ ಛಾಯಾಗ್ರಹಣ ಹಾಗೂ ಸಂಕಲನ, ವಿನುಮನಸು ಸಂಗೀತ ನಿರ್ದೇಶನ ಈ ಕಿರುಚಿತ್ರಕ್ಕಿದೆ. ಈ ಕಿರುಚಿತ್ರ ಎಂಟು ನಿಮಿಷದ ಅವಧಿಯದ್ದಾಗಿದೆ.

    ಇದನ್ನೂ ಓದಿ: ಕೃಷ್ಣನಿಗೆ ಜತೆಯಾದ ಆಶಿಕಾ; ಪಿ.ಸಿ. ಶೇಖರ್ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆ

    ಈ ಸಂದರ್ಭದಲ್ಲಿ ಕಿರುಚಿತ್ರ ನೋಡಿದ ‘ಗೆಜ್ಜೆನಾದ’ ಖ್ಯಾತಿಯ ವಿಜಯಕುಮಾರ್, ಜಂಕಾರ್ ಮ್ಯೂಸಿಕ್ ನ ಭರತ್ ಜೈನ್ ಹಾಗೂ ಪತ್ರಿಕಾ ಸಂಪರ್ಕಾಧಿಕಾರಿ ವೆಂಕಟೇಶ್ ತಮ್ಮ ಅಭಿಪ್ರಾಯ ಹಂಚಿಕೊಂಡರು.

    VIDEO: ನಟಿ ಪಾಯಲ್‌ ಘೋಷ್‌ ಮೇಲೆ ಆ್ಯಸಿಡ್‌ ದಾಳಿಗೆ ಯತ್ನ: ರಾಡ್‌ನಿಂದ ಹಲ್ಲೆ- ದುಃಖ ತೋಡಿಕೊಂಡ ತಾರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts