More

    ನಿಮ್ಮ ಸಮಸ್ಯೆ ಆಲಿಸುತ್ತ ಕುಳಿತುಕೊಳ್ಳಲು ಸಾಧ್ಯವಿಲ್ಲ, ಅಂಜಲಿ ನಿಂಬಾಳ್ಕರ್ ನಡೆಗೆ ಕಾರ್ಯಕರ್ತರ ಆಕ್ರೋಶ

    ಯಲ್ಲಾಪುರ: ಒಂದೆಡೆ ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಚುನಾವಣಾ ಪೂರ್ವಭಾವಿ ಸಭೆ ನಡೆದರ ಮತ್ತೊಂದೆಡೆ ಕೆಲ ಅಸಮಾಧಾನಿತ ಕಾರ್ಯಕರ್ತರು, ಮುಖಂಡರು ಪಟ್ಟಣದ ಜಡ್ಡಿಯಲ್ಲಿ ಪ್ರತ್ಯೇಕ ಸಭೆ ನಡೆಸಿದರು.

    ಪಕ್ಷದ ಕಚೇರಿಯ ಸಭೆಗೆ ಬಂದಿದ ಘೊಷಿತ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್​ಗೆ ನಮ್ಮ ಸಭೆಗೂ ಬರುವಂತೆ ಒತ್ತಾಯಿಸಿದ ಹಿನ್ನೆಲೆಯಲ್ಲಿ ಅವರು ಜಡ್ಡಿಯ ಸಭೆಗೂ ಭೇಟಿ ನೀಡಿದರು. ಈ ವೇಳೆ ಕಾಂಗ್ರೆಸ್​ನ ಭಿನ್ನಮತ ಸ್ಪೋಟಗೊಂಡಿತು. ಅಸಮಾಧಾನಿತ ಕಾರ್ಯಕರ್ತರು, ಮುಖಂಡರು ಹಾಲಿ ಬ್ಲಾಕ್ ಅಧ್ಯಕ್ಷ ಎನ್.ಕೆ. ಭಟ್ಟ ಮೆಣಸುಪಾಲ ಹಾಗೂ ಚುನಾವಣಾ ಉಸ್ತುವಾರಿ, ಮಾಜಿ ಶಾಸಕ ವಿ.ಎಸ್. ಪಾಟೀಲ ವಿರುದ್ಧ ಆಕ್ರೋಶ ಹೊರಹಾಕಿದರು.

    ಅದನ್ನು ತಡೆದ ಅಂಜಲಿ ನಿಂಬಾಳ್ಕರ್, ನಿಮ್ಮ ಸಮಸ್ಯೆ ಪರಿಹರಿಸುವ ಅಧಿಕಾರ ನನಗಿಲ್ಲ. ನಾನು ನಿಮ್ಮೊಂದಿಗೆ ಸದಾ ಇದ್ದೇನೆ ಎಂದಾಗ, ಆಕ್ರೋಶಿತರು ನಮ್ಮ ಅಹವಾಲುಗಳನ್ನು ಕೇಳಲೇಬೇಕೆಂದು ಪಟ್ಟು ಹಿಡಿದರು. ಇದರಿಂದ ಅಂಜಲಿ ನಿಂಬಾಳ್ಕರ್ ಗಲಿಬಿಲಿಗೊಂಡರು.

    ಜಿಲ್ಲಾಧ್ಯಕ್ಷ ಸಾಯಿನಾಥ ಗಾಂವ್ಕರ ಎದುರಲ್ಲೇ ಕಾರ್ಯಕರ್ತರು ಆಕ್ರೋಶ ಹೊರಹಾಕಿದರೂ ಅವರು ಮೌನ ವಹಿಸಿದ್ದರು. ಇದರಿಂದ ಬೇಸತ್ತ ನಿಂಬಾಳ್ಕರ್, ಪ್ರಚಾರ ಕಾರ್ಯ ಇರುವುದರಿಂದ ಸಮಸ್ಯೆ ಆಲಿಸುತ್ತ ಕುಳಿತುಕೊಳ್ಳಲು ಸಾಧ್ಯವಿಲ್ಲ, ಮುಂದಿನ ದಿನಗಳಲ್ಲಿ ನಿಮ್ಮನ್ನು ಕಾಣುತ್ತೇನೆ’ ಎಂದು ಸಭೆಯಿಂದ ಹೊರ ನಡೆದರು. ಜಿಲ್ಲಾಧ್ಯಕ್ಷ ಸಾಯಿನಾಥ ಗಾಂವ್ಕರ ಸಹ ಅವರನ್ನು ಹಿಂಬಾಲಿಸಿದರು.

    ನಂತರ ಕಾರ್ಯಕರ್ತರು ಮಾಧ್ಯಮದವರೆದುರು ತಮ್ಮ ಆಕ್ರೋಶ ಹೊರಹಾಕಿದರು. ಅಭ್ಯರ್ಥಿಯಾದವರು ತಾಳ್ಮೆ ವಹಿಸದೇ, ತಮ್ಮ ಸಭೆಯಿಂದ ಹೊರ ಹೋದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಕೆ.ಭಟ್ಟ ಮೆಣಸುಪಾಲ ಅವರು ಮಾಜಿ ಶಾಸಕ ವಿ.ಎಸ್. ಪಾಟೀಲ ಅವರ ಕೈಗೊಂಬೆಯಾಗಿದ್ದು, ಕಾರ್ಯಕರ್ತರ ಭಾವನೆಗೆ ಬೆಲೆ ಕೊಡುತ್ತಿಲ್ಲ. ಇಬ್ಬರನ್ನೂ ಪಕ್ಷದ ಹುದ್ದೆಯಿಂದ ಕಿತ್ತೊಗೆಯಬೇಕೆಂದು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಅನಿಲ ನಾಯ್ಕ ಆಗ್ರಹಿಸಿದರು.

    ಈ ಬಗ್ಗೆ ಹಿರಿಯ ಮುಖಂಡ ಆರ್.ವಿ. ದೇಶಪಾಂಡೆ, ಜಿಲ್ಲಾಧ್ಯಕ್ಷ, ರಾಜ್ಯಾಧ್ಯಕ್ಷರಿಗೂ ದೂರಲಾಗಿತ್ತು. ರಾಜ್ಯ ಉಪಾಧ್ಯಕ್ಷರನ್ನು ವೀಕ್ಷಕರಾಗಿ ಕಳುಹಿಸಿ ವರದಿ ಪಡೆದಿದ್ದರು. ವರದಿಯಲ್ಲಿ ಕಾರ್ಯಕರ್ತರಿಗೆ ಅನ್ಯಾಯವಾದ ಬಗ್ಗೆ ಉಲ್ಲೇಖವಾಗಿದ್ದು, ಮಾಜಿ ಶಾಸಕ ವಿ.ಎಸ್. ಪಾಟೀಲ ಅವರ ಮೊಸಳೆ ಕಣ್ಣೀರನ್ನೇ ನಂಬಿ ಅದನ್ನು ಅನುಷ್ಠಾನಗೊಳಿಸುತ್ತಿಲ್ಲ ಎಂದು ದೂರಿದರು .

    ಪಾಟೀಲ ಹಾಗೂ ಎನ್.ಕೆ. ಭಟ್ಟ ಅವರನ್ನು ಕೂಡಲೇ ಹುದ್ದೆಯಿಂದ ಕಿತ್ತು ಹಾಕಬೇಕು. ಇಲ್ಲವಾದಲ್ಲಿ ಚುನಾವಣೆ ಸಂದರ್ಭದಲ್ಲಿ ತಟಸ್ಥ ನಿಲುವು ಅನುಸರಿಸುವುದಾಗಿ ಎಚ್ಚರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts