More

    ಐಪಿಎಲ್​ನಲ್ಲಿ ಆಟಗಾರರಿಗೆ ಕರೊನಾ ಸೋಂಕಿನ ಲಕ್ಷಣ ಕಂಡರೆ ಬದಲಿ ಆಟಗಾರರ ಬಳಕೆಗೆ ಅವಕಾಶ

    ನವದೆಹಲಿ: ಕರೊನಾ ಹಾವಳಿಯ ನಡುವೆ ಐಪಿಎಲ್​ ಆಯೋಜನೆಗೆ ಮುಂದಾಗಿರುವ ಕಾರಣ ಬಿಸಿಸಿಐ ಈ ಬಾರಿ ಕೆಲ ನಿಯಮಗಳನ್ನು ಸಡಿಲಗೊಳಿಸಿದೆ. ಈ ಪೈಕಿ, ತಂಡವೊಂದು ಎಷ್ಟು ಬೇಕಾದರೂ ಆಟಗಾರರನ್ನು ಬದಲಿಯಾಗಿ ಕರೆಸಿಕೊಳ್ಳುವುದು ಪ್ರಮುಖವಾದುದು. ಕರೊನಾ ಸೋಂಕಿನ ಲಕ್ಷಣ ಕಾಣಿಸುವ ಆಟಗಾರರಿಗೆ ಬದಲಿಯಾಗಿ ಈ ಆಟಗಾರರನ್ನು ಆಡಿಸಲು ಅವಕಾಶ ಮಾಡಿಕೊಡಲಾಗಿದೆ.

    ಐಸಿಸಿ ಈಗಾಗಲೆ ಟೆಸ್ಟ್​ ಕ್ರಿಕೆಟ್​ನಲ್ಲಿ ಬಳಸಲು ಅವಕಾಶ ಮಾಡಿಕೊಟ್ಟಿರುವ ನಿಯಮದಂತೆ ಐಪಿಎಲ್​ನಲ್ಲೂ ಟೂರ್ನಿ ಅಥವಾ ಪಂದ್ಯದ ವೇಳೆ ಯಾವುದಾದರೂ ಆಟಗಾರನಿಗೆ ಕರೊನಾ ಸೋಂಕಿನ ಲಕ್ಷಣಗಳು ಕಂಡುಬಂದರೆ ಆತನಿಗೆ ಬದಲಿ ಆಟಗಾರನನ್ನು ಕಣಕ್ಕಿಳಿಸಲು ಫ್ರಾಂಚೈಸಿಗಳಿಗೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ಫ್ರಾಂಚೈಸಿಯೊಂದಕ್ಕೆ ಈ ರೀತಿಯಾಗಿ ಎಷ್ಟು ಆಟಗಾರರನ್ನು ಬೇಕಾದರೂ ಬದಲಾಯಿಸಿಕೊಳ್ಳಲು ಬಿಸಿಸಿಐ ಅನುಮತಿ ನೀಡಿದೆ.

    ಇದನ್ನೂ ಓದಿ: ಐಪಿಎಲ್​ನಲ್ಲಿ ಚೀನಾ ಪ್ರಾಯೋಜಕರಿಗೆ ಕಡಿವಾಣವಿಲ್ಲ

    ಇಂಗ್ಲೆಂಡ್​ನಲ್ಲಿ ಟೆಸ್ಟ್​ ಕ್ರಿಕೆಟ್​ ಪುನರಾರಂಭಕ್ಕೆ ಮುನ್ನ ಐಸಿಸಿ ಕೂಡ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಇಂಥದ್ದೇ ಬದಲಾವಣೆ ತಂದಿತ್ತು. ಅದರಂತೆ ಟೆಸ್ಟ್​ ಪಂದ್ಯದಲ್ಲಿ ಕರೊನಾ ಲಕ್ಷಣ ಕಾಣಿಸುವ ಆಟಗಾರನಿಗೆ ಅವನಂಥದ್ದೇ ಸಾಮರ್ಥ್ಯದ ಅಂದರೆ ಬೌಲರ್​ಗೆ ಬದಲಾಗಿ ಬೌಲರ್​, ಬ್ಯಾಟ್ಸ್​ಮನ್​ಗೆ ಬದಲಾಗಿ ಬ್ಯಾಟ್ಸ್​ಮನ್​ ಮತ್ತು ಆಲ್ರೌಂಡರ್​ಗೆ ಬದಲಾಗಿ ಆಲ್ರೌಂಡರ್​ ಆಡಿಸಲು ಅವಕಾಶ ನೀಡಲಾಗಿತ್ತು. ಇದೀಗ ಐಪಿಎಲ್​ನಲ್ಲೂ ಇಂಥದ್ದೇ ಅವಕಾಶವನ್ನು ಮಾಡಿಕೊಡಲು ಭಾನುವಾರ ನಡೆದ ಮಹತ್ವದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

    ಯುಎಇಯಲ್ಲಿ ಐಪಿಎಲ್​ ಆಯೋಜನೆಗೆ ಕೇಂದ್ರ ಸರ್ಕಾರ ಸಮ್ಮತಿ, ದಿನಾಂಕವೂ ಖಚಿತ, ಪಂದ್ಯಗಳೂ ಬೇಗನೆ ಆರಂಭ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts