More

    ಲಾಕ್​​ಡೌನ್​ ಆಗಿ ಮನೆಯಲ್ಲಿದ್ದವರಿಗೆ ನಿಮ್ಮೂರಲ್ಲೇ ಉದ್ಯೋಗಾವಕಾಶ ಎಲ್ಲ ಜಿಲ್ಲೆಗಳಲ್ಲೂ ಬೇಕಾಗಿದ್ದಾರೆ ತಾಂತ್ರಿಕ ಸಹಾಯಕರು

    ಬೆಂಗಳೂರು: ಕರೊನಾ ಸಂಕಷ್ಟದಿಂದಾಗಿ ಮನೆಯಿಂದ ಹೊರಗೆ ಬರುವಂತೆಯೇ ಇಲ್ಲ. ಗುತ್ತಿಗೆ ಕಾರ್ಮಿಕರು, ದಿನಗೂಲಿ ನೌಕರರು ಉದ್ಯೋಗವಿಲ್ಲದೇ ಮನೆಯಲ್ಲಿಯೇ ಕೂರುವಂತಾಗಿದೆ. ದಿನಸಿ, ಔಷಧ ಹಾಗೂ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಬೇರೇನೂ ಸಿಗದಿರುವಾಗ ಉದ್ಯೋಗವೆಲ್ಲಿ ಸಿಗುತ್ತೆ ಎನ್ನುತ್ತೀರಾ?

    ಏಪ್ರಿಲ್​ 20ರ ಬಳಿಕ ಗ್ರಾಮೀಣ ಪ್ರದೇಶದಲ್ಲಿ ಕೈಗಾರಿಕೆಗಳ ಆರಂಭಕ್ಕೆ ಅವಕಾಶ ನೀಡಲಾಗಿದೆ. ಜತೆಗೆ, ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿಯಲ್ಲಿ ಉದ್ಯೋಗಾವಕಾಶಗಳನ್ನು ಸೃಜಿಸಲು ರಾಜ್ಯ ಸರ್ಕಾರ ತಿಳಿಸಿದೆ. ಜತೆಗೆ, ಕೂಲಿಯ ಮೊತ್ತವನ್ನು ಹೆಚ್ಚಿಸಿದೆ. ಇದು ಕಾರ್ಮಿಕರಿಗಾದರೆ, ವಿದ್ಯಾವಂತರಿಗೆ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್​ ರಾಜ್​ ಇಲಾಖೆಯೇ ಹಲವು ಉದ್ಯೋಗಾವಕಾಶಗಳಿಗಾಗಿ ಅರ್ಜಿ ಆಹ್ವಾನಿಸಿದೆ.

    ಅರಣ್ಯೀಕರಣ, ಕೃಷಿ, ತೋಟಗಾರಿಕೆ, ರೇಷ್ಮೆ ಕ್ಷೇತ್ರದಲ್ಲಿ ತಾಂತ್ರಿಕ ಸಹಾಯಕರನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಲು ಆನ್​ಲೈನ್​ ಮೂಲಕ ಅರ್ಜಿ ಆಹ್ವಾನಿಸಿದೆ. ವಿಶೇಷವೆಂದರೆ ರಾಜ್ಯ 30 ಜಿಲ್ಲೆಗಳಲ್ಲೂ ಈ ಉದ್ಯೋಗಾವಕಾಶವಿದ್ದು, ಅರ್ಜಿ ಸಲ್ಲಿಸಬಹುದು. ಒಟ್ಟು 407 ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದೆ.

    ವಿದ್ಯಾರ್ಹತೆ: ಅರಣ್ಯೀಕರಣ ತಾಂತ್ರಿಕ ಸಹಾಯಕರಾಗಲು ಬಿಎಸ್​ಸಿ ಫಾರೆಸ್ಟ್ರಿ ಪಾಸಾಗಿರಬೇಕು. ಎಂಎಸ್​ಸಿ ಆಗಿದ್ದರೆ ಇನ್ನೂ ಉತ್ತಮ. ಇಲ್ಲದಿದ್ದರೆ ಸಮಾನಾಂತರ ಕ್ಷೇತ್ರದ ವಿದ್ಯಾರ್ಹತೆ ಹೊಂದಿರಬೇಕು.
    ಇನ್ನು, ಕೃಷಿ, ತೋಟಗಾರಿಕೆ, ರೇಷ್ಮೆ ಕ್ಷೇತ್ರದ ತಾಂತ್ರಿಕ ಸಹಾಯಕರಿಗೆ ಸಂಬಂಧಿಸಿದ ಕ್ಷೇತ್ರದಲ್ಲಿ ಬಿಎಸ್​ಸಿ (ಆ್ಯಗ್ರಿ, ಸಿರಿಕಲ್ಚರ್​, ಹಾರ್ಟಿಕಲ್ಚರ್​, ಡೇರಿ ಇತ್ಯಾದಿ…) ಆಗಿರಬೇಕು ಅಥವಾ ಸ್ನಾತಕೋತ್ತರ ಪದವಿಯೂ ಅಪೇಕ್ಷಣೀಯವಾಗಿದೆ. ಅಥವಾ ಸಮಾನಾಂತರ ಕ್ಷೇತ್ರದ ವಿದ್ಯಾರ್ಹತೆ ಪರಿಗಣಿಸಲಾಗುತ್ತದೆ.

    ವಯೋಮಿತಿ: 21- 40 ವರ್ಷ ನಿಗದಿಪಡಿಸಲಾಗಿದೆ. ಈ ಹುದ್ದೆಗಳಿಗೆ 22,000 ರೂ. ವೇತನ ನಿಗದಿಪಡಿಸಲಾಗಿದೆ. ಜತೆಗೆ ಪ್ರಯಾಣ ಭತ್ಯೆ ನೀಡಲಾಗುತ್ತದೆ.

    ವಿವರಗಳಿಗೆ: https://bit.ly/3akkGLl
    ಅರ್ಜಿ ಸಲ್ಲಿಸಲು ಈ ಲಿಂಕ್​ ಬಳಸಿ: http://end2endmgnrega.co.in/
    ಅರ್ಜಿ ಸಲ್ಲಿಕೆಗೆ ಆರಂಭ: ಏಪ್ರಿಲ್​ 20
    ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಮೇ 15

    ಬೋಧಕರೇ ಎಚ್ಚರ… ಬಳಸದಿರಿ ಝೂಮ್​ ಆ್ಯಪ್, ತಾಂತ್ರಿಕ ಶಿಕ್ಷಣ ಇಲಾಖೆಯೇ ಹೊರಡಿಸಿದೆ ಸುತ್ತೋಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts