More

    ಬೋಧಕರೇ ಎಚ್ಚರ… ಬಳಸದಿರಿ ಝೂಮ್​ ಆ್ಯಪ್, ತಾಂತ್ರಿಕ ಶಿಕ್ಷಣ ಇಲಾಖೆಯೇ ಹೊರಡಿಸಿದೆ ಸುತ್ತೋಲೆ

    ಬೆಂಗಳೂರು: ಚೀನಾ ನಿರ್ಮಿತ ಎಂದಾಗ ಅದರ ವಿಶ್ವಾಸಾರ್ಹತೆಯೇ ಪ್ರಶ್ನೆಗೊಳಗಾಗುತ್ತದೆ. ಹೀಗಿದ್ದರೂ ಜನರು ಅದರ ಬೆನ್ನು ಬೀಳುವುದನ್ನು ಬಿಡುವುದಿಲ್ಲ. ಸದ್ಯಕ್ಕೆ ಚೀನಾ ಮೂಲದ ಝೂಮ್​ ಆ್ಯಪ್​ ಕೂಡ ವಿವಾದಕ್ಕೊಳಗಾಗಿದೆ.

    ಲಾಕ್​ಡೌನ್​ ಸಮಯದಲ್ಲಿ ಈ ಆ್ಯಪ್​ ಬಳಕೆದಾರರ ಸಂಖ್ಯೆ ಒಂದು ಕೋಟಿಯಿಂದ 20 ಕೋಟಿಗೆ ಏರಿರುವುದು ಇದರ ಜನಪ್ರಿಯತೆಗೆ ಸಾಕ್ಷಿ. ಆದರೆ, ಆ್ಯಪ್​ ಸುರಕ್ಷಿತವಲ್ಲ ಎಂದು ಕೇಂದ್ರ ಸರ್ಕಾರವೇ ಸ್ಪಷ್ಟಪಡಿಸಿದೆ. ಕೇಂದ್ರದ ಸೈಬರ್​ ಸೆಕ್ಯುರಿಟಿ ನೋಡಲ್ ಏಜೆನ್ಸಿಯಾಗಿರುವ ಕಂಪ್ಯೂಟರ್​ ಎಮರ್ಜೆನ್ಸಿ ರೆಸ್ಪಾನ್ಸ್​ ಟೀಮ್​- ಇಂಡಿಯಾ (CERT-IN) ಇದರಲ್ಲಿನ ಮಾಹಿತಿಗಳು ಸೋರಿಕೆಯಾಗುತ್ತಿವೆ. ಬಳಕೆಮಾಡುವ ಸಂದರ್ಭದಲ್ಲಿಯೇ ಇದನ್ನು ಹ್ಯಾಕ್​ ಮಾಡಲಾಗುತ್ತಿದೆ ಎಂದು ಹೇಳಿದೆ. ಹೀಗಾಗಿ ಸರ್ಕಾರಿ ಉದ್ದೇಶಗಳಿಗೆ ಇದನ್ನು ಬಳಸದಿರುವಂತೆ ಸೂಚಿಸಿತ್ತು. ಜತೆಗೆ, ಅನಿವಾರ್ಯವಾಗಿ ಬಳಕೆ ಮಾಡುತ್ತಿರುವವರು ಕೆಲ ಮುನ್ನೆಚ್ಚರಿಕೆ ಕೈಗೊಳ್ಳುವಂತೆ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ.

    ಇದರ ಬೆನ್ನಲ್ಲೇ, ರಾಜ್ಯದ ತಾಂತ್ರಿಕ ಶಿಕ್ಷಣ ಇಲಾಖೆ ಕೂಡ ಸುತ್ತೋಲೆ ಹೊರಡಿಸಿದ್ದು, ಆನ್​ಲೈನ್​ ಪಾಠ, ಪಠ್ಯ ಸಾಮಗ್ರಿ ತಯಾರಿಕೆ ಹಂಚಿಕೆ ಮೊದಲಾದ ಉದ್ದೇಶಗಳಿಗಾಗಿ ಬೋಧಕರಿಗೆ ಝೂಮ್​ ಆ್ಯಪ್​ ಬಳಸದಂತೆ ನಿರ್ದೇಶಿಸಿದೆ. ಕೇಂದ್ರ ಸರ್ಕಾರದ ಸೂಚನೆಯನ್ವಯ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದೆ.

    ಇದರ ಬದಲಾಗಿ ದೇಶೀಯವಾಗಿ ತಯಾರಿಸಲಾಗಿರುವ ಟಿಸಿಎಸ್​ ಐಆನ್​ ಡಿಜಿಟಲ್ ಕ್ಲಾಸ್​ ರೂಮ್​ ಆ್ಯಪ್​ ಬಳಸಬಹುದೆಂದು ಸೂಚಿಸಿದೆ.
    ಬೋಧಕರು ಆನ್​ಲೈನ್​ನಲ್ಲಿ ಮಾಡುತ್ತಿರುವ ಪಾಠಗಳು, ವಿಷಯ, ಅದಕ್ಕೆ ಬಳಸುತ್ತಿರುವ ಆ್ಯಪ್​ ಮೊದಲಾದವುಗಳ ಬಗ್ಗೆ ಇಲಾಖೆ ಮಾಹಿತಿ ಕೇಳಿತ್ತು. ಆಗ ಬಹುತೇಕರು ಝೂಮ್​ ಆ್ಯಪ್​ ಬಳಸುತ್ತಿರುವ ಬಗ್ಗೆ ವಿವರ ನೀಡಿದ್ದರು.

    ಆನ್​ಲೈನ್​ ಪಾಠದ ಹೆಸರಲ್ಲಿ ಶುಲ್ಕ ವಸೂಲಿಗೆ ನಡೆಯುತ್ತಿದೆ ತಂತ್ರ, ಶಿಕ್ಷಣ ಸಂಸ್ಥೆಗಳಿಗೆ ಇಲಾಖೆ ನೀಡಿರುವ ಎಚ್ಚರಿಕೆ ಏನು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts