More

    32 ದಿನ ಸತತ ನರೇಗಾ ಕೆಲಸ ನೀಡಿದ ಪಿಡಿಓ,

    ನರೇಗಾ ಕಾಯಕ ಸ್ಥಳದಲ್ಲಿ ಕೂಲಿಕಾರರಿಂದ ಸನ್ಮಾನದ ಜೊತೆಗೆ ಪ್ರಶಂಸೆ

    ರೋಣ:

    32 ದಿನ ಸತತವಾಗಿ ನರೇಗಾ ಯೋಜನೆಯಡಿ ಬದು ನಿರ್ಮಾಣದ ಕೆಲಸ ನೀಡಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗೆ ಖುಷಿಯಿಂದ ಸನ್ಮಾನ ಮಾಡುವ ಮೂಲಕ ನರೇಗಾ ಕೂಲಿಕಾರರು ಅಭಿನಂದನೆ ಸಲ್ಲಿಸಿದ್ದಾರೆ..

    ರೋಣ ತಾಲೂಕಿನ ಕುರಡಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಯರೇಬೇಲೇರಿ ಗ್ರಾಮದ ಹೊರವಲಯದ ಜಮೀನಿನಲ್ಲಿ ಸನ್ಮಾನ ಕಾರ್ಯಕ್ರಮ ನಡೆದಿದ್ದು ಕುರುಡಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶಿಲ್ಪಾ ಕವಲೂರ ಅವರಿಗೆ ಕೂಲಿ ಕಾರ್ಮಿಕರು ಸೇರಿದಂತೆ ಮೇಟ್ಸ್ ಗಳು ಗ್ರಾಮದ ಜಮೀನಿನಲ್ಲಿ ಸನ್ಮಾನ ಮಾಡುವ ಮೂಲಕ ಅಭಿಮಾನ ವ್ಯಕ್ತ ಪಡಿಸಿದ್ದಾರೆ..

    ಕುರುಡಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಯರೇಬೇಲೇರಿ ಗ್ರಾಮದಲ್ಲಿ ನರೇಗಾ ಯೋಜನೆಯು  ಬಂದಾಗಿನಿಂದ ಇಲ್ಲಿಯವರೆಗೂ ಈ ಗ್ರಾಮದಲ್ಲಿ ಇಷ್ಟು ಗರಿಷ್ಠ ಪ್ರಮಾಣದಲ್ಲಿ ಕೂಲಿ ಕೆಲಸ ಯಾರು ಕೊಟ್ಟಿದಿಲ್ಲಾ, ಹೊಸದಾಗಿ ಪಿಡಿಓ ಆಗಿ ಬಂದ ಶಿಲ್ಪಾ ಕವಲೂರ ಇಷ್ಟು ಪ್ರಮಾಣದಲ್ಲಿ ಕೆಲಸ ಕೊಟ್ಟು ನಮಗೆ ಆರ್ಥಿಕವಾಗಿ ಸದೃಢ ಆಗುವ ಹಾಗೆ ಮಾಡಿದ್ದಾರೆ ಅಂತಾರೆ ಗ್ರಾಮಸ್ಥರು.

    ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, BFT ಪ್ರಕಾಶ ಅಂಬಕ್ಕಿ, ಗ್ರಾಮ ಕಾಯಕ ಮಿತ್ರರು, ಪಂಚಾಯತ ಸಿಬ್ಬಂದಿಗಳು ಸೇರಿದಂತೆ ಕೂಲಿ ಕಾರ್ಮಿಕರು ಹಾಜರಿದ್ದರು.. 

    *ಕೋಟ್*

    ನಮಗೆ ಹೊಸದಾಗಿ ಬಂದ ಪಿಡಿಓ ಅವರು 33 ದಿನ ಕೆಲಸ ಕೊಟ್ಟಾರ ಅವರಿಗೆ ಪುಣ್ಯ ಬರ್ಲಿ ನಮಗೆ ಮಳೆ ಆಗು ವರೆಗೂ ಇನ್ನೂ ಕೆಲಸ ಕೊಡ್ತಿನಿ ಅಂದಾರ ಮಳೆ ಇರಲಾರದಾಗ ನರೇಗಾ ಯೋಜನೆಯಡಿ ನಾಲ್ಕು ದುಡ್ಡು ಕೈಯಾಗು ಬರ್ತಾವು ಅದರಿಂದ ಮನೆತನ ನಡೆಯುತ್ತ ಇದುವರೆಗೂ ನಮ್ಮ ಗ್ರಾಮದಲ್ಲಿ ಇಷ್ಟು ಕೆಲಸ ಯಾರು ಕೊಟ್ಟಿದ್ದಿಲ್ಲಾ.

    • ಆನಂದ ಬಸಪ್ಪ ಕುಂಬಾರ, ನರೇಗಾ ಕೂಲಿ ಕಾರ್ಮಿಕ

    *ಕೋಟ್*

    ಮೊದಲು ಮುಂಡರಗಿ ತಾಲೂಕಿನಲ್ಲಿ ಪಿಡಿಓ ಆಗಿ ಕೆಲಸ ನಿರ್ವಹಣೆ ಮಾಡುತ್ತಿದ್ದೇ, ಇತ್ತೀಚಿಗೆ ರೋಣ ತಾಲೂಕಿನ ಕುರುಡಗಿ ಗ್ರಾಪಂ ಅಲ್ಲಿ ಕೆಲಸ ನಿರ್ವಹಣೆ ಮಾಡುತ್ತಿದ್ದೇನೆ, ನಾನು ಯರೇಬೆಲೇರಿ ಗ್ರಾಮದಲ್ಲಿ ನರೇಗಾ ಯೋಜನೆಯಡಿ ನನ್ನ ವೃತ್ತಿಯನ್ನು ಪೂರೈಸಿದ್ದೇನೆ ಅಷ್ಟೇ, ಆದರೆ ಇಂದು ಜನರು ನನ್ನ ಕೆಲಸವನ್ನು ಗುರುತಿಸಿ ಪ್ರೋತ್ಸಾಹ ನೀಡುವ ಜೊತೆಗೆ ಪ್ರಶಂಸೆ ವ್ಯಕ್ತಪಡಿಸಿದ ರೀತಿ ನಿಜಕ್ಕೂ ನನಗೆ ಮಾತು ಬರದ ಹಾಗೆ ಮಾಡಿದೆ…

    *ಶಿಲ್ಪಾ ಕವಲೂರ* ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕುರುಡಗಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts