More

    ಟ್ರಾನ್ಸ್‌ರ್ ಮಿನಿಸ್ಟ್ರಾ? ಸಸ್ಪೆಂಡ್ ಮಾಡುವ ಮಿನಿಸ್ಟ್ರಾ? ಮೇಲ್ಮನೆಯಲ್ಲಿ ಸಚಿವ ಪ್ರಿಯಾಂಕಗೆ ಕಾಡಿದ ಅನುಮಾನ

    ಬೆಂಗಳೂರು:
    ನಾನು ಟ್ರಾನ್ಸ್‌ರ್ ಮಾಡುವ ಮಿನಿಸ್ಟ್ರಾ? ಸಸ್ಪೆಂಡ್ ಮಾಡುವ ಮಿನಿಸ್ಟ್ರಾ? ಎನ್ನುವ ಅನುಮಾನ ನನಗೆ ಕಾಡುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ ಖರ್ಗೆ ಮೇಲ್ಮನೆಯಲ್ಲಿ ಹೇಳಿಕೊಂಡಿದ್ದು ಅಚ್ಚರಿ ಮೂಡಿಸಿತು.
    ತಾವು ಸಚಿವರಾದ ಮೇಲೆ ಗ್ರಾಮ ಪಂಚಾಯಿತಿಯ 472 ಪಿಡಿಒ ಗಳನ್ನು ಅಮಾನತ್ತು ಮಾಡಿದ್ದೇನೆ. ಬಹಳ ಜನರನ್ನು ವರ್ಗಾವಣೆ ಮಾಡಿದ್ದೇನೆ. ಆಡಳಿತಾತ್ಮಕ ದೃಷ್ಟಿಯಿಂದ ನಿತ್ಯ ಕ್ರಮ ಕೈಗೊಳ್ಳುತ್ತಲೇ ಇದ್ದೇನೆ ಎಂದು ಹೇಳಿದರು.
    ಕಾಂಗ್ರೆಸ್‌ನ ಮಂಜುನಾಥ ಭಂಡಾರಿ ನಿಯಮ 330 ಮೇರೆಗೆ ತಂದಿದ್ದ ಚರ್ಚೆಗೆ ಉತ್ತರ ನೀಡಿದ ಅವರು, ಈ ವ್ಯವಸ್ಥೆ ಬಹಳ ಜಡ್ಡುಗಟ್ಟಿ ಹೋಗಿತ್ತು. ಎಷ್ಟೋ ಪಿಡಿಒಗಳು ತಿಜೋರಿಯಲ್ಲಿ ೈಲ್ ಇಟ್ಟುಕೊಂಡಿದ್ದರು. ಹಾಗಾಗಿ ಸಸ್ಪೆಂಡ್ ಮತ್ತು ವರ್ಗಾವಣೆ ಮಾಡುವುದು ಅನಿವಾರ್ಯವಾಗಿತ್ತು ಎಂದು ವಿವರಣೆ ನೀಡಿದರು.

    ಹಂತ ಹಂತವಾಗಿ ಸುಧಾರಣೆ
    ಗ್ರಾಪಂ, ತಾಪಂ, ಜಿಪಂ ಪಂಚಾಯಿತಿ ವ್ಯವಸ್ಥೆಯನ್ನು ಹಂತ ಹಂತವಾಗಿ ಸುಧಾರಣೆ ಮಾಡಲಾಗುವುದು. ಪಂಚಾಯಿತಿ ವ್ಯವಸ್ಥೆ ಸಬಲೀಕರಣ ಮಾಡಲು ಅಗತ್ಯವಿರುವ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದರು.

    ವೇತನ ಹೆಚ್ಚಳ ಪರಿಶೀಲನೆ
    ಗ್ರಾಪಂ, ತಾಪಂ, ಜಿಪಂ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಹಾಗೂ ಸದಸ್ಯರ ವೇತನ ಕೇರಳಕ್ಕಿಂತ ಹೆಚ್ಚಾಗಿದೆ. ಆದರೂ ಸದಸ್ಯರ ಅಭಿಪ್ರಾಯದ ಹಿನ್ನೆಲೆಯಲ್ಲಿ ವೇತನ ಹೆಚ್ಚಳ ಮಾಡಲು ಪರಿಶೀಲನೆ ಮಾಡಲಾಗುವುದು ಎಂದರು.

    25 ಸಾವಿರಕ್ಕೆ ಏರಿಕೆ
    ಪಂಚಾಯಿತಿ ಅಧ್ಯಕ್ಷರ ಸಾದಿಲ್ವಾರು ವೆಚ್ಚ 5 ಸಾವಿರಕ್ಕೆ ಮಿತಿಗೊಳಿಸಿರುವುದನ್ನು 25 ಸಾವಿರಕ್ಕೆ ಹೆಚ್ಚಳ ಮಾಡುವ ಪ್ರಸ್ತಾವನೆಯನ್ನು ಹಣಕಾಸು ಇಲಾಖೆಗೆ ಕಳುಹಿಸಲಾಗುವುದು ಎಂದು ಹೇಳಿದರು.

    ಶೇ.60 ಗ್ರಾಮ ಸಭೆ ಆಗಿಲ್ಲ
    ಗ್ರಾಮ ಸಭೆಗಳು ಕಡ್ಡಾಯವಾಗಿ ನಡೆಯಬೇಕು. ಆದರೆ, ಈ ತನಕ ಪರಿಶೀಲನೆ ಮಾಡಿದಾಗ ಶೇ.60ರಷ್ಟು ಗ್ರಾಮ ಸಭೆಗಳು ನಡೆದಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಆದ್ದರಿಂದ ಪಂಚಾಯಿತಿಗಳ ಜವಬ್ದಾರಿ ಬಗ್ಗೆ ಕೈಪಿಡಿಯೊಂದನ್ನು ಸಿದ್ಧಪಡಿಸಿ ಎಲ್ಲಾ ಪಂಚಾಯಿತಿಗಳಿಗೆ ಕಳುಹಿಸಿಕೊಡಲಾಗುವುದು ಎಂದರು.

    ಬಾಪು ಕೇಂದ್ರಕ್ಕೆ 77 ಸೇವೆ
    ಗ್ರಾಮ ಪಂಚಾಯಿತಿಯ ಬಾಪೂಜಿ ಸೇವಾ ಕೇಂದ್ರಕ್ಕೆ ಮೊದಲು 30 ಸೇವೆಗಳು ಮಾತ್ರ ಲಭ್ಯವಿತ್ತು. ಈಗ 77 ಸೇವೆ ಸಿಗುವಂತೆ ಮಾಡಲಾಗಿದೆ. ಗೃಹಲಕ್ಷ್ಮಿ ಯೋಜನೆಯನ್ನು ಇದೇ ಸೇವಾ ಕೇಂದ್ರದ ಮೂಲಕವೇ ನಿಭಾಯಿಸಿ 3.20 ಲಕ್ಷ ಮಹಿಳೆಯರಿಗೆ ಅನುಕೂಲ ಮಾಡಿಕೊಡಲಾಗಿದೆ ಎಂದರು.

    ಕೆಡಿಪಿ ಸಭೆ ಕಡ್ಡಾಯ
    ಗ್ರಾಪಂ ಮಟ್ಟದಲ್ಲಿ ಪ್ರಗತಿ ಪರಿಶೀಲನಾ ಸಭೆ (ಕೆಡಿಪಿ)ಯನ್ನು ಗ್ರಾಪಂ ಅಧ್ಯಕ್ಷರ ನೇತೃತ್ವದಲ್ಲಿ ಮಾಡಲು ಕಡ್ಡಾಯ ಮಾಡಲಾಗಿದೆ. ಹಾಗೆಯೇ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿಯೂ ಕೆಡಿಪಿ ಸಭೆ ನಡೆಯಲಿದೆ ಎಂದರು.

    9 ಸಾವಿರ ಕೋಟಿ ಬಿಲ್ ಬಾಕಿ
    ಗ್ರಾಪಂಗಳಿಂದ ಬೀದಿ ವಿದ್ಯುತ್ ದೀಪಗಳ ಬಿಲ್ 9 ಸಾವಿರ ಕೋಟಿ ರೂ ಬಾಕಿ ಇದೆ. ಈ ಹಣವನ್ನು ಪಾವತಿ ಮಾಡಿಸಲು ಸಿಎಂ ಜೊತೆಗೆ ಚರ್ಚಿಸಲಾಗುವುದು. ಸೋಲಾರ್ ಲೈಟ್ ಅಳವಡಿಸುವ ಮೂಲಕ ವಿದ್ಯುತ್ ಹೊರೆಯನ್ನು ಕಡಿಮೆ ಮಾಡಲು ಉದ್ದೇಶಿಸಲಾಗಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts