ಬೆಂಗಳೂರು: ಬಹು ಉದ್ದಿಮೆಗಳ ತರಬೇತಿ ಕೇಂದ್ರ, ಖಾದಿ ಮತ್ತು ಗ್ರಾಮೋದ್ಯೋಗ ಆಯೋಗ, ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಸಚಿವಾಲಯದ ವತಿಯಿಂದ ಬ್ಯೂಟಿಷಿಯನ್ ಕೋರ್ಸ್ನಲ್ಲಿ ಒಂದು ತಿಂಗಳ ಪ್ರಾಯೋಗಿಕ ಕೌಶಲ ತರಬೇತಿಗಾಗಿ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಯಾವುದೇ ರಾಷ್ಟ್ರೀಕೃತ ಅಥವಾ ಕೆಲವು ಆಯ್ದ ಖಾಸಗಿ/ ಶೆಡ್ಯೂಲ್ ವಾಣಿಜ್ಯ ಬ್ಯಾಂಕ್ಗಳಿಂದ ಸಾಲ ಪಡೆಯುವ ಮೂಲಕ ಪ್ರಧಾನ ಮಂತ್ರಿಗಳ ಉದ್ಯೋಗ ಸೃಜನ ಕಾರ್ಯಕ್ರಮ (ಪಿಎಂಇಜಿಪಿ ಯೋಜನೆ) ಅಡಿಯಲ್ಲಿ ಉದ್ಯೋಗ ಮಾಡಬಹುದು ಅಥವಾ ಸ್ವಂತ ಬ್ಯೂಟಿ ಪಾರ್ಲರ್ ಸ್ಥಾಪಿಸಬಹುದು. ಶೇ.35ರವರೆಗೆ ಸರ್ಕಾರದ ಸಹಾಯಧನ ಪಡೆಯಬಹುದು.
ಕೈಚೀಲಗಳು, ಲಕೋಟೆಗಳು, ಫೈಲ್ ಕವರ್ಗಳು, ಸ್ಟೇಷನರಿ ಇತ್ಯಾದಿ, ಪ್ರಾಕೃತಿಕ ಬಣ್ಣ ತಯಾರಿಕೆ ಇತ್ಯಾದಿ ತರಬೇತಿಗಳಂತಹ ಕೋರ್ಸ್ಗಳಿಗೆ ಈ ಯೋಜನೆಯಡಿಯಲ್ಲಿ ಸ್ವಂತ ಘಟಕ ಸ್ಥಾಪಿಸಲು ಅವಕಾಶ ಒದಗಿಸಲಾಗುತ್ತದೆ. ಹೆಚ್ಚಿನ ವಿವರಕ್ಕೆ ದೂ: 080 25650285, 95434 25994 ಅಥವಾ 93815 88877 ಸಂಪರ್ಕಿಸಿ.
ತೂಗುಸೇತುವೆ ಕುಸಿದು ಘೋರ ದುರಂತ: 132ಕ್ಕೇರಿದ ಸಾವಿನ ಸಂಖ್ಯೆ, ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ ಆತಂಕ…