More

    ನಿಮಗೆ ನಾಚಿಕೆಯಾಗಬೇಕು; ‘ದಿ ಕಾಶ್ಮೀರ್ ಫೈಲ್ಸ್’ ಖಂಡಿಸಿದ ನಡಾವ್​ಗೆ ಇಸ್ರೇಲಿ ರಾಯಭಾರಿ ಗಿಲಾನ್​ ತರಾಟೆ

    ಮುಂಬೈ: ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವು ಅಸಭ್ಯವಷ್ಟೇ ಅಲ್ಲ, ಅದೊಂದು ಕೆಟ್ಟ ಚಿತ್ರ ಎಂದು ಹೇಳಿರುವ ಇಸ್ರೇಲಿ ನಿರ್ಮಾಪಕ ಮತ್ತು ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾ (IFFI), ಜ್ಯೂರಿ ಮುಖ್ಯಸ್ಥರಾದ ನಾಡವ್ ಲ್ಯಾಪಿಡ್ ಅವರ ಮಾತುಗಳನ್ನು ಭಾರತದಲ್ಲಿ ಇಸ್ರೇಲ್​ ರಾಯಭಾರಿಯಾಗಿರುವ ನವೋರ್​ ಗಿಲಾನ್​ ಖಂಡಿಸಿದ್ದಾರೆ. ಅಷ್ಟೇ ಅಲ್ಲ, ಮೊದಲು ಕ್ಷಮೆ ಕೇಳುವಂತೆ ಆಗ್ರಹಿಸಿದ್ದಾರೆ.

    ಇದನ್ನೂ ಓದಿ: ಸುಳ್ಳು ಎಷ್ಟೇ ದೊಡ್ಡದಾಗಿದ್ದರೂ, ಸತ್ಯದ ಮುಂದೆ ಯಾವತ್ತೂ ಚಿಕ್ಕದು; ಲ್ಯಾಪಿಡ್​ಗೆ ಖೇರ್​ ತಿರುಗೇಟು

    ‘ದಿ ಕಾಶ್ಮೀರ್​ ಫೈಲ್ಸ್​’ ಕುರಿತು ಇತ್ತೀಚೆಗೆ ಮಾತನಾಡಿದ್ದ ನಾಡವ್ ಲ್ಯಾಪಿಡ್, ”ದಿ ಕಾಶ್ಮೀರ್​ ಫೈಲ್ಸ್’ ಚಿತ್ರ ನೋಡಿ ಆಘಾತವಾಯಿತು. ಇಂತಹ ಪ್ರತಿಷ್ಠಿತ ಚಲನಚಿತ್ರೋತ್ಸವದ ಕಲಾತ್ಮಕ, ಸ್ಪರ್ಧಾತ್ಮಕ ವಿಭಾಗಕ್ಕೆ ಇದು ಸೂಕ್ತವಲ್ಲದ ಚಿತ್ರವಾಗಿದೆ. ‘ದಿ ಕಾಶ್ಮೀರ್​ ಫೈಲ್ಸ್​’ ಬರೀ ಅಸಭ್ಯ ಚಿತ್ರವಷ್ಟೇ ಅಲ್ಲ, ಅದೊಂದು ಕೆಟ್ಟ ಚಿತ್ರ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಅನುಪಂ ಖೇರ್​, ದರ್ಶನ್​ ಕುಮಾರ್​ ಸೇರಿದಂತೆ ಹಲವು ಸೆಲೆಬ್ರಿಟಿಗಳು ಮತ್ತು ಜನ ಸಾಮಾನ್ಯರು ಬೇಸರ ವ್ಯಕ್ತಪಡಿಸಿದ್ದರು. ಲ್ಯಾಪಿಡ್​ ಮಾತುಗಳನ್ನು ಖಂಡಿಸಿದ್ದರು. ಈಗ ಭಾರತದಲ್ಲಿ ಇಸ್ರೇಲ್​ ರಾಯಭಾರಿಯಾಗಿರುವ ನವೋರ್​ ಗಿಲಾನ್​ ಖಂಡಿಸಿದ್ದಾರೆ. ಅಷ್ಟೇ ಅಲ್ಲ, ತುರ್ತಾಗಿ ಕ್ಷಮೆ ಕೋರುವಂತೆ ಆಗ್ರಹಿಸಿದ್ದಾರೆ. ಈ ಸಂಬಂಧ ಅವರಿಗೊಂದು ಪತ್ರ ಬರೆದಿದ್ದಾರೆ. ಆ ಪತ್ರ ಬರೆದಿದ್ದರ ಕುರಿತು ಟ್ವೀಟ್​ ಮಾಡಿದ್ದಾರೆ.

    ಈ ಕುರಿತು ಟ್ವೀಟ್​ ಮಾಡಿರುವ ಅವರು, ”ದಿ ಕಾಶ್ಮೀರ್​ ಫೈಲ್ಸ್​’ ಕುರಿತು ನಡಾವ್​ ಲ್ಯಾಪಿಡ್​ ಅವರಿಗೊಂದು ಬಹಿರಂಗ ಪತ್ರ. ಇದು ಹೀಬ್ರೂನಲ್ಲಿ ಇಲ್ಲ. ಏಕೆಂದರೆ, ಈ ವಿಷಯ ಭಾರತದ ನಮ್ಮ ಸಹೋದರ, ಸಹೋದರಿಯರಿಗೂ ಅರ್ಥವಾಗಬೇಕು. ಪತ್ರ ಸುಧೀರ್ಘವಾಗಿದೆ. ಹಾಗಾಗಿ ಈ ಪತ್ರದ ಸಾರಾಂಶವನ್ನು ಮೊದಲು ತಿಳಿಸುತ್ತೇನೆ. ನಿಮಗೆ ನಾಚಿಕೆಯಾಗಬೇಕು. ಯಾಕೆ ಗೊತ್ತಾ?’ ಎಂದು ಟ್ವೀಟ್ ಮಾಡಿದ್ದಾರೆ.

    ಇದನ್ನೂ ಓದಿ: ಸಿದ್ದರಾಮಯ್ಯ ಕುರಿತು ಬಯೋಪಿಕ್ … ಮಾಜಿ ಮುಖ್ಯಮಂತ್ರಿಗಳ ಪಾತ್ರದಲ್ಲಿ ವಿಜಯ್​ ಸೇತುಪತಿ?

    ತಮ್ಮ ಪಾತ್ರದಲ್ಲಿ ಲ್ಯಾಪಿಡ್​ ಅವರನ್ನು ಖಂಡಿಸಿರುವ ಗಿಲಾನ್, ‘ಭಾರತದಲ್ಲಿ ಸಂಸ್ಕೃತಿಯಲ್ಲಿ ಅತಿಥಿಗಳು ದೇವರು ಎನ್ನುತ್ತಾರೆ. ಆದರೆ, ನೀವು ಅವರನ್ನು ಬಹಳ ಕೆಟ್ಟದಾಗಿ ಅವಮಾನ ಮಾಡಿದ್ದೀರಾ. ನಿಮ್ಮ ಮೇಲೆ ಇಟ್ಟ ನಂಬಿಕೆ, ಪ್ರೀತಿಯನ್ನು ಕಡೆಗಣಿಸಿದ್ದೀರಾ’ ಎಂದು ಅವರು ಹೇಳಿದ್ದಾರೆ.

    ‘ದಿ ಕಾಶ್ಮೀರ್​ ಫೈಲ್ಸ್​’ ಅಸಭ್ಯವಷ್ಟೇ ಅಲ್ಲ, ಕೆಟ್ಟ ಸಿನಿಮಾ … ಇಸ್ರೇಲಿ ನಿರ್ಮಾಪಕನ ವಿವಾದಾಸ್ಪದ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts