More

    ಚಿತ್ರಮಂದಿರಗಳ ಕಥೆ ಏನು? ಅನುಷ್ಕಾ ಹೇಳ್ತಾರೆ ಕೇಳಿ …

    ಲಾಕ್​ಡೌನ್​ನಿಂದ ಚಿತ್ರಮಂದಿರಗಳಿಗೆ ಬೀಗ ಬಿದ್ದು, ಇದೀಗ 100 ದಿನಗಳ ಮೇಲಾಗಿವೆ. ಮುಂದೆ ಯಾವಾಗ ಚಿತ್ರಮಂದಿರಗಳು ತೆಗೆಯುತ್ತವೆ? ತೆಗೆದರು ಎಷ್ಟು ಜನ ಚಿತ್ರಮಂದಿರಗಳಿಗೆ ಬಂದು ಚಿತ್ರ ನೋಡುತ್ತಾರೆ ಎಂದು ಯಾರಿಗೂ ಖಾತ್ರಿ ಇಲ್ಲ. ಹೀಗಿರುವಾಗಲೇ ಕೆಲವು ಚಿತ್ರಮಂದಿರಗಳು ಮುಚ್ಚುವ ಸುದ್ದಿ ಎಲ್ಲಾ ರಾಜ್ಯಗಳಿಂದಲೂ ಬರುತ್ತಿವೆ.

    ಹಾಗಾದರೆ, ಚಿತ್ರಮಂದಿರಗಳ ಮುಂದಿನ ಕಥೆ ಏನು ಎಂಬ ಪ್ರಶ್ನೆ ಸಹಜವೇ. ಆದರೆ, ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ಮಾತ್ರ, ಚಿತ್ರಮಂದಿರಗಳಿಗೆ ಯಾವತ್ತೂ ಪರ್ಯಾಯ ಇಲ್ಲ ಎಂದು ಹೇಳಿದ್ದಾರೆ. ಇತ್ತೀಚೆಗಷ್ಟೇ ಓಟಿಟಿಗಾಗಿ ಬುಲ್​ಬುಲ್​ ಎಂಬ ಚಿತ್ರವನ್ನು ನಿರ್ಮಿಸಿರುವ ಅವರು, ಚಿತ್ರಮಂದಿರಗಳು ಅಬಾಧಿತ ಎಂದು ಅಭಿಪ್ರಾಯಪಟ್ಟಿದ್ದಾರೆ.

    ಇದನ್ನೂ ಓದಿ: PHOTOS: ಬರ್ತ್​ಡೇ ಬಾಯ್​ ಅರ್ಜುನ್​​ ಕಪೂರ್​- ಮಲೈಕಾ ಜೋಡಿಯ ಫೋಟೋಗಳು…

    ಈ ಕುರಿತು ಮಾತನಾಡಿರುವ ಅವರು, ಚಿತ್ರಮಂದಿರದಲ್ಲಿ ಚಿತ್ರ ನೋಡುವ ಅನುಭವವೇ ಬೇರೆ, ಲ್ಯಾಪ್​ಟಾಪ್​ ಅಥವಾ ಮೊಬೈಲ್​ನಲ್ಲಿ ಚಿತ್ರ ನೋಡುವ ಅನುಭವವೇ ಬೇರೆ. ಚಿತ್ರಮಂದಿರದಲ್ಲಿ ಚಿತ್ರ ನೋಡಿದಾಗ ಸಿಗುವ ಅನುಭವ, ಬೇರೆ ಯಾವುದರಲ್ಲೂ ಸಿಗುವುದಿಲ್ಲ. ಹಾಗಾಗಿ ಇಷ್ಟು ವರ್ಷಗಳ ಕಾಲ ಚಿತ್ರಮಂದಿರಗಳು ಸಿನಿಮಾಗಳನ್ನು ಪ್ರದರ್ಶಿಸುತ್ತಲೇ ಬಂದಿವೆ ಮತ್ತು ಮುಂದೆ ಸಹ ಪ್ರದರ್ಶನ ಮುಂದುವರೆಯುತ್ತದೆ ಎಂದು ಅವರು ಹೇಳಿಕೊಂಡಿದ್ದಾರೆ.

    ಲಾಕ್​ಡೌನ್​ನಿಂದ ಚಿತ್ರಮಂದಿರಗಳು ಶಾಶ್ವತವಾಗಿ ಮುಚ್ಚುವ ಅಪಾಯ ತಲುಪಿದೆಯಲ್ಲಾ ಎಂದರೆ, ಹಾಗೇನೂ ಇಲ್ಲ ಎನ್ನುತ್ತಾರೆ ಅವರು. ಲಾಕ್​ಡೌನ್​ನಲ್ಲಿ ಚಿತ್ರಮಂದಿರಗಳು ಇರಲಿಲ್ಲ, ಹಾಗಾಗಿ ಜನ ಓವರ್​ ದಿ ಟಾಪ್​ (ಓಟಿಟಿ)ಯತ್ತ ಹೆಚ್ಚು ಮುಖ ಮಾಡಿದ್ದರು. ಹಾಗಂತ ಚಿತ್ರಮಂದಿರಗಳು ತೆರೆದ ಮೇಲೂ ಜನ ಬರುವುದಿಲ್ಲ ಎಂದಥರ್ವಲ್ಲ. ಮುಂದೆ ಸಹ ಚಿತ್ರಮಂದಿರಗಳಿಗೆ ಜನ ಬಂದೇ ಬರುತ್ತಾರೆ. ನನ್ನ ಪ್ರಕಾರ ಈ ಚಿತ್ರಮಂದಿರಗಳು ಮತ್ತು ಓಟಿಟಿ ಜತೆಜೆಯಾಗಿ ಕೆಲಸ ಮಾಡುತ್ತದೆ ಎಂದಿದ್ದಾರೆ.

    ಇದನ್ನೂ ಓದಿ: PHOTOS| ಮಕ್ಕಳೊಂದಿಗೆ ಸನ್ನಿ ಲಿಯೋನ್​ ಆಟ, ಸುತ್ತಾಟ

    ಇನ್ನು ಓಟಿಟಿಗಳು ಸಿನಿಮಾದವರಿಗೆ ವರವಾಗಿದೆ ಎನ್ನುವ ಅವರು, ಯಾರು ಏನೇ ಅಂದರೂ ಓಟಿಟಿಯ ರೀಚ್​ ದೊಡ್ಡದಿದೆ. ಮೇಲಾಗಿ ಕೆಲವು ಸಿನಿಮಾಗಳು ಚಿತ್ರಮಂದಿರಗಳಲ್ಲಿ ಹೆಚ್ಚು ಓಡುವುದಕ್ಕೆ ಸಾಧ್ಯವಿಲ್ಲ. ಆದರೆ, ಓಟಿಟಿಯಲ್ಲಿ ಹಾಗಿಲ್ಲ, ಹೊಸಹೊಸ ಯೋಚನೆಗಳು ಮತ್ತು ಕಥೆಗಳನ್ನಿಟ್ಟುಕೊಂಡು ಚಿತ್ರ ಮಾಡಬಹುದು. ಅದಕ್ಕೆ ಬಾಕ್ಸ್​ಆಫೀಸ್​ನ ಯಾವುದೇ ಒತ್ತಡ ಇರುವುದಿಲ್ಲ. ಹಾಗಾಗಿ ಓಟಿಟಿಗಳಿಂದ ಒಂದಿಷ್ಟು ಪ್ಲಸ್​ ಅಂಶಗಳೂ ಇವೆ ಎಂದಿದ್ದಾರೆ.

    ಏನೇ ಪರ್ಯಾಯ ವ್ಯವಸ್ಥೆ ಬಂದರೂ, ಜನ ಚಿತ್ರ ನೋಡುವುದಕ್ಕೆ ಇಷ್ಟಪಡುವುದು ಚಿತ್ರಮಂದಿರಗಳನ್ನೇ ಎಂದು ಈ ಹಿಂದೆ ಪುನೀತ್​, ಸುದೀಪ್​ ಸೇರಿದಂತೆ ಹಲವು ದೊಡ್ಡ ನಟ-ನಟಿಯರು ಹೇಳಿದ್ದಾರೆ. ಈಗ ಅದಕ್ಕೆ ಅನುಷ್ಕಾ ಶರ್ಮಾ ಸಹ ದನಿಗೂಡಿಸಿರುವುದು ವಿಶೇಷ.

    Photos: ಕೊಡಗಿನಲ್ಲಿ ಐಂದ್ರಿತಾ ಔಟಿಂಗ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts