More

    ಪಿಟ್​ಬುಲ್​ ದಾಳಿಯಿಂದ ಬಾಲಕನನ್ನು ರಕ್ಷಿಸಿದ ಬೀದಿ ನಾಯಿಗಳು! ಅನುಷ್ಕಾ ಶರ್ಮಾ ಪ್ರತಿಕ್ರಿಯೆ ಹೀಗಿದೆ…

    ಮುಂಬೈ: ಬೀದಿ ನಾಯಿಗಳು, ಪಿಟ್​ಬುಲ್​ ದಾಳಿಯಿಂದ ಬಾಲಕನನ್ನು ರಕ್ಷಣೆ ಮಾಡಿದ ವಿಡಿಯೋ ಇತ್ತೀಚೆಗೆ ವೈರಲ್​ ಆಗಿ, ಭಾರಿ ಚರ್ಚೆಯನ್ನು ಹುಟ್ಟುಹಾಕಿತ್ತು. ಈ ವಿಡಿಯೋ ಗಮನಿಸಿರುವ ಬಾಲಿವುಡ್​ ನಟಿ ಹಾಗೂ ವಿರಾಟ್​ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ, ತಮ್ಮ ಇನ್​ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್​ ಮಾಡಿಕೊಳ್ಳುವ ಮೂಲಕ ಎರಡು ಬದಿಗಳನ್ನು ಹೈಲೈಟ್​ ಮಾಡಿ ಎಂದು ಬರೆದುಕೊಂಡಿದ್ದಾರೆ.

    ಅನುಷ್ಕಾ ಮಾತಿನ ಅರ್ಥ ಏನು ಎಂಬುದು ಸ್ಪಷ್ಟವಾಗಿಲ್ಲ. ಆದರೆ, ಅನುಷ್ಕಾ ಶೇರ್​ ಮಾಡಿರುವ ವಿಡಿಯೋ ಮೇಲೆ ಬಾಲಕನ ಮೇಲೆ ಪಿಟ್​ಬುಲ್​ ದಾಳಿ ಮಾಡಿದ್ದರೂ ದಾರಿ ಹೋಕರು ಸುಮ್ಮನೇ ನಿಂತು ನೋಡುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಉಲ್ಲೇಖಿಸಿ ಈ ಮಾತನ್ನು ಹೇಳಿಬಹುದು ಅನಿಸುತ್ತದೆ. ಪಿಟ್​ಬುಲ್​ ದಾಳಿ ಮಾಡುತ್ತಿದ್ದರು ಸುಮ್ಮನೇ ನಿಂತು ನೋಡುತ್ತಿದ್ದಾರೆ. ಆದರೆ, ಬೀದಿ ನಾಯಿಗಳೇ ಬಾಲಕನನ್ನು ರಕ್ಷಣೆ ಮಾಡಿವೆ. ಹೀಗಾಗಿ ಅನುಷ್ಕಾ, ಮನುಷ್ಯರಿಗಿಂತ ಪ್ರಾಣಿಗಳೇ ಮೇಲು ಎನ್ನುವ ಅರ್ಥದಲ್ಲಿ ಬರೆದುಕೊಂಡಿರಬಹುದು.

    Anushka 1

    ಪಿಟ್​ಬುಲ್​ ದಾಳಿ ಮಾಡಿದ ಘಟನೆ ಉತ್ತರಪ್ರದೇಶ ಗಾಜಿಯಾಬಾದ್​ನಲ್ಲಿ ಇತ್ತೀಚೆಗಷ್ಟೇ ನಡೆದಿದೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

    ವಿಡಿಯೋದಲ್ಲಿ ಏನಿದೆ?
    ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ಬಾಲಕ ಅಲ್ತಾಫ್​ ಮೇಲೆ ಪಿಟ್​ಬುಲ್​ ನಾಯಿ ಏಕಾಏಕಿ ದಾಳಿ ಮಾಡುತ್ತದೆ. ಈ ವೇಳೆ ಅಲ್ಲೇ ಇದ್ದ ಜನರು ಅದನ್ನು ನೋಡಿಕೊಂಡು ಸುಮ್ಮನೇ ನಿಂತಿರುತ್ತಾರೆ. ಈ ವೇಳೆ ಮೇಲಿನಿಂದ ಇಬ್ಬರು ನೀರು ಎರಚಿದ್ದು, ಬಾಲಕ ಹೇಗೋ ತಪ್ಪಿಸಿಕೊಳ್ಳುತ್ತಾನೆ. ಈ ವೇಳೆ ಕೆಲ ಬೀದಿನಾಯಿಗಳು ಆತನ ರಕ್ಷಣೆಗೆ ಧಾವಿಸಿದ್ದು ಬಾಲಕನನ್ನು ಅಪಾಯದಿಂದ ಪಾರು ಮಾಡುತ್ತವೆ.

    ಪ್ರೀತಿಗೆ ಒಂದು ಅವಕಾಶ ನೀಡಿ
    ಈ ವಿಡಿಯೋವನ್ನು ಮೊದಲು ಧರ್ಮಸಾಲ ಅನಿಮಲ್​ ರೆಸ್ಕ್ಯೂ ಹೆಸರಿನ ಇನ್​ಸ್ಟಾಗ್ರಾಂ ಪೇಜ್​ನಲ್ಲಿ ಮೊದಲು ಶೇರ್​ ಮಾಡಲಾಯಿತು. ಕೊನೆಯವರೆಗೂ ನೋಡಿ, ಶಾಪ್​ಗಳಲ್ಲಿರುವ ನಾಯಿಗಳನ್ನು ದತ್ತು ಪಡೆಯಬೇಡಿ. ಬೀದಿ ನಾಯಿಗಳನ್ನು ದತ್ತು ಪಡೆಯಿರಿ, ಪ್ರೀತಿಗೆ ಒಂದು ಅವಕಾಶ ನೀಡಿ, ಬೀದಿ ನಾಯಿ ವೀರರು, ಶೌರ್ಯ, ಯೋಗ್ಯರು ಹಾಗೂ ಪ್ರೀತಿಗೆ ಅರ್ಹರು ಎಂದು ಅಡಿಬರಹ ನೀಡಲಾಗಿದೆ.

    ಇತ್ತ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದ್ದಂತೆ ಎಚ್ಚೆತ್ತ ಗಾಜಿಯಾಬಾದ್​ ಪಾಲಿಕೆ, ಕೂಡಲೇ ಪ್ರಕರಣ ದಾಖಲಿಸಿಕೊಂಡು ನಾಯಿಯನ್ನು ವಶಕ್ಕೆ ಪಡೆದಿದೆ. ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ. (ಏಜೆನ್ಸೀಸ್​)

    ಏಕಾಏಕಿ ಬಾಲಕನ ಮೇಲೆ ಪಿಟ್​ಬುಲ್​ ದಾಳಿ; ಆದರೆ ಆತನನ್ನು ರಕ್ಷಿಸಿದ್ದು ಮಾತ್ರ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts