More

    ಮಾಜಿ ಕ್ರಿಕೆಟಿಗ, ಬಿಸಿಸಿಐ ಮಾಜಿ ಮುಖ್ಯಸ್ಥ ಈಗ ಮೋದಿ ಸಂಪುಟದಲ್ಲಿ ಕ್ರೀಡಾ ಸಚಿವ

    ನವದೆಹಲಿ: ಮಾಜಿ ಕ್ರಿಕೆಟಿಗ, ದೇಶದ ಪ್ರತಿಷ್ಠಿತ ಕ್ರೀಡಾ ಸಂಸ್ಥೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಲ್ಲಿ (ಬಿಸಿಸಿಐ) ಮುಖ್ಯಸ್ಥ ಸ್ಥಾನದಿಂದ ಹಿಡಿದು ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದ ಅನುರಾಗ್ ಠಾಕೂರ್, ದೇಶದ 17ನೇ ಕ್ರೀಡಾ ಸಚಿವರಾಗಿ ಗುರುವಾರ ಅಧಿಕಾರ ಸ್ವೀಕರಿಸಿದ್ದಾರೆ. ಇದಕ್ಕೂ ಮೊದಲು ಕಿರಣ್ ರಿಜಿಜು ಈ ಹುದ್ದೆಯಲ್ಲಿದ್ದರು. ಪ್ರತಿಷ್ಠಿತ ಒಲಿಂಪಿಕ್ಸ್‌ಗೆ 15 ದಿನಗಳ ಬಾಕಿ ಇರುವಾಗಲೇ ಕ್ರೀಡಾ ಸಚಿವರನ್ನು ಬದಲಾಯಿಸಲಾಗಿದೆ. 46 ವರ್ಷದ ಅನುರಾಗ್ ಠಾಕೂರ್, ಕ್ರೀಡಾ ಇಲಾಖೆಯ ಜತೆಗೆ ಹೆಚ್ಚುವರಿಯಾಗಿ ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವರಾಗಿಯೂ ಕಾರ್ಯನಿರ್ವಹಿಸಲಿದ್ದಾರೆ. 2000-01ನೇ ಸಾಲಿನಲ್ಲಿ ಏಕೈಕ ಪ್ರಥಮ ದರ್ಜೆ ಪಂದ್ಯವನ್ನಾಡಿರುವ ಅನುರಾಗ್, 2 ವಿಕೆಟ್ ಕಬಳಿಸಿದ್ದರು.

    ಇದನ್ನೂ ಓದಿ: ಆಸ್ಟ್ರೇಲಿಯಾದ ಮಹಿಳಾ ಬಿಗ್‌ ಬ್ಯಾಶ್ನಲ್ಲಿ ಭಾರತದ ಆಟಗಾರ್ತಿಯರಿಗೆ ಹೆಚ್ಚಿದ ಡಿಮ್ಯಾಂಡ್..! 

    ಕಿರಣ್ ರಿಜಿಜು ನಾಯಕತ್ವದಲ್ಲಿ ಕ್ರೀಡಾ ಇಲಾಖೆಯಲ್ಲಿ ಉತ್ತಮ ಕೆಲಸ ಕಾರ್ಯಗಳು ಸಾಗಿವೆ. ಅದೇ ಮಾದರಿಯಲ್ಲಿ ನಾನು ಕಾರ್ಯನಿರ್ವಹಿಸುವೆ, ಭಾರತದ ಕ್ರೀಡೆಗೆ ಒಲಿತಾಗಬೇಕು ಎಂದು ಠಾಕೂರ್ ತಿಳಿಸಿದ್ದಾರೆ. 2006-08ರ ಬಳಿಕ ಮೊದಲ ಬಾರಿಗೆ ಕ್ರೀಡಾ ಇಲಾಖೆ ಖಾತೆಗೆ ಸಂಪುಟ ದರ್ಜೆ ಸ್ಥಾನಮಾನ ನೀಡಲಾಗಿದೆ. ಠಾಕೂರ್‌ಗೆ ಸಹಾಯಕರಾಗಿ ನಿಸಿತ್ ಪ್ರಾಮಾಣಿಕ್ ಕಾರ್ಯನಿರ್ವಹಿಸಲಿದ್ದಾರೆ.

    ಇದನ್ನೂ ಓದಿ: 40ನೇ ಜನ್ಮದಿನದಂದು ಎಂಎಸ್ ಧೋನಿ ಹೊಸ ಲುಕ್ ವೈರಲ್!

    2016ರ ಮೇ ತಿಂಗಳಿಂದ 2017ರ ಫೆಬ್ರವರಿವರೆಗೆ ಅನುರಾಗ್ ಠಾಕೂರ್ ಬಿಸಿಸಿಐ ಅಧ್ಯಕ್ಷರಾಗಿದ್ದರು. ಇದಕ್ಕೂ ಮೊದಲು ಬಿಸಿಸಿಐ ಕಾರ್ಯದರ್ಶಿ, ಹಿಮಾಚಲ ಪ್ರದೇಶ ಕ್ರಿಕೆಟ್ ಸಂಸ್ಥೆಯ ಮುಖ್ಯಸ್ಥರಾಗಿಯೂ ಕಾರ್ಯನಿರ್ವಹಿಸಿದ್ದರು. ಹಿಮಾಚಲ ಪ್ರದೇಶದ ಹಮಿರ್‌ಪುರ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಅನುರಾಗ್, ಇದಕ್ಕೂ ಮೊದಲು ನಿರ್ಮಲಾ ಸೀತಾರಾಮನ್ ಅವರಿಗೆ ಸಹಾಯಕರಾಗಿ ಹಣಕಾಸು ಹಾಗೂ ಕಾರ್ಪೋರೇಟ್ ಸಚಿವರಾಗಿ ಕಾರ್ಯವಹಿಸಿದ್ದರು. ಅನುರಾಗ್ ಠಾಕೂರ್ ಸಹೋದರ ಅರುಣ್ ಧುಮಾಲ್ ಸದ್ಯ ಬಿಸಿಸಿಐನ ಖಜಾಂಚಿಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts