More

    ಬದುಕಿದ್ದಾಗ ಅನೇಕರ ಜೀವ ಉಳಿಸಿ, ಸತ್ತ ಮೇಲೂ 8 ಮಂದಿಗೆ ಆಸರೆಯಾದವನ ಮನಕಲಕುವ ಕತೆ ಇದು!

    ತಿರುವನಂತಪುರಂ: ಅಪಘಾತದಲ್ಲಿ ಮೆದುಳು ಹಾನಿಯಾಗಿ ಮೃತಪಟ್ಟ ಕೇರಳ ಮೂಲದ ಅನುಜಿತ್​ (27) ಎಂಬಾತ ಸಾವಿನ ಬಳಿಕವೂ 8 ಮಂದಿಯ ಜೀವಕ್ಕೆ ಆಸರೆಯಾಗುವ ಮೂಲಕ ತಮ್ಮ ಹುಟ್ಟನ್ನು ಸಾರ್ಥಪಡಿಸಿಕೊಂಡಿದ್ದಾರೆ. ಅನುಜಿತ್​ ಪತ್ನಿ ಹಾಗೂ ಸಹೋದರಿಯ ಪ್ರಯತ್ನದಿಂದಾಗಿ ಅಂಗಾಂಗಗಳನ್ನು ದಾನ ಮಾಡುವ ಮೂಲಕ 8 ಜನರ ಪ್ರಾಣ ಉಳಿಸಿದ್ದಾರೆ.

    ಇದನ್ನೂ ಓದಿ: ಬಾಲಕಿಯನ್ನು ರೇಪ್​ ಮಾಡಿ ಓಡಿ ಹೋಗ್ತಿದ್ದವನನ್ನು ಹಿಡಿಯಲು 13ನೇ ಮಹಡಿಯಿಂದ ಜಿಗಿದ ಪೊಲೀಸ್: ಮುಂದೇನಾಯ್ತು?

    ಜುಲೈ 14ರಂದು ಕೊಟ್ಟರಕ್ಕರ ಎಂಬಲ್ಲಿ ಅನುಜಿತ್​ ಬೈಕ್​ ಅಪಘಾತಕ್ಕೀಡಾಗಿದ್ದರು. ಗಂಭೀರ ಸ್ಥಿತಿಯಲ್ಲಿದ್ದ ಆತನನ್ನು ಕೊಟ್ಟರಕ್ಕರ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ತಿರುವನಂತಪುರ ಮೆಡಿಕಲ್​ ಕಾಲೇಜು ಮತ್ತು ಕಿಮ್ಸ್​ಗೆ ಸ್ಥಳಾಂತರಿಸಲಾಗಿತ್ತು. ವೈದ್ಯರ ಕಠಿಣ ಶ್ರಮದ ನಡುವೆಯೂ ಅನುಜಿತ್​ ಬದುಕುಳಿಯಲಿಲ್ಲ. ಮೆದುಳು ಸಂಪೂರ್ಣ ನಿಷ್ಕ್ರಿಯಗೊಂಡು ಮೃತಪಟ್ಟಿರುವುದಾಗಿ ಜುಲೈ 17ರಂದು ವೈದ್ಯರು ತಿಳಿಸಿದ್ದರು.

    ಅನುಜಿತ್​ ಅಂತೂ ಬದುಕುಳಿಯಲಿಲ್ಲ. ಆದರೆ, ಆತನ ಅಂಗಾಂಗಳಾದರೂ ಇನ್ನೊಬ್ಬರಿಗೆ ನೆರವಾಗಲಿ ಎಂಬ ನಿರ್ಧಾರಕ್ಕೆ ಬಂದ ಅನುಜಿತ್​ ಪತ್ನಿ ಪ್ರಿನ್ಸಿ ಮತ್ತು ಸಹೋದರಿ ಅಜಲ್ಯಾ, ಆತನ ಹೃದಯ, ಕಿಡ್ನಿ, ಕಣ್ಣು, ಸಣ್ಣ ಕರುಳು ಮತ್ತು ಕೈಗಳನ್ನು ದಾನ ಮಾಡಲು ಮುಂದಾದರು. ಇವರ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ದುಃಖದಲ್ಲೂ ಕುಟುಂಬದ ಈ ರೀತಿಯ ಮಾನವೀಯತೆ ಹೆಜ್ಜೆ ಇಟ್ಟಿದ್ದು ಪ್ರಶಂಸನೀಯ ಎಂದಿದ್ದಾರೆ. ಅಲ್ಲದೆ, ಅನುಜಿತ್​ ಸಾವಿಗೂ ಸಂತಾಪ ಸೂಚಿಸಿದ್ದಾರೆ.

    ಟ್ರೈನ್​ ಅಪಘಾತ ತಪ್ಪಿಸಿ ಹಿಂದೊಮ್ಮೆ ಸುದ್ದಿಯಾಗಿದ್ದ ಅನುಜಿತ್​
    ಹಿಂದೆ 2010ರಲ್ಲಿ ರೈಲ್ವೆ ಹಳಿಯಲ್ಲಿ ಬಿರುಕು ಬಿಟ್ಟಿರುವುದನ್ನು ನೋಡಿ ಅನುಜಿತ್​, ಮತ್ತವರ ಸ್ನೇಹಿತರು ಕೆಂಪು ಬಣ್ಣದ ಬಾಸ್ಕೆಟ್​ ಹಿಡಿದು ರೈಲಿನ ಕಡೆಗೆ ಸೂಚನೆ ನೀಡುವ ಮೂಲಕ ಅನೇಕ ಜನರ ಪ್ರಾಣವನ್ನು ಉಳಿಸಿದ್ದರು. ಆ ವೇಳೆ ಭಾರಿ ಸುದ್ದಿ ಸಹ ಆಗಿದ್ದರು. ಇದೀಗ ಮೃತಪಟ್ಟ ಮೇಲೂ 8 ಮಂದಿಯ ಜೀವಕ್ಕೆ ಆಸರೆಯಾಗುವ ಮೂಲಕ ತಮ್ಮ ಹುಟ್ಟನ್ನು ಸಾರ್ಥಕವಾಗಿಸಿದ್ದಾರೆ.

    ಇದನ್ನೂ ಓದಿ: ದೇಶದ 18 ಕೋಟಿ ಜನರಿಗೆ ಈಗಾಗ್ಲೇ ಕರೊನಾ ಬಂದು ಹೋಗಿದೆ: ಕರ್ನಾಟಕಕ್ಕೂ ಸಿಕ್ತು ಗುಡ್​ ನ್ಯೂಸ್​!

    ಖಾಸಗಿ ಕಂಪನಿಯಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅನುಜಿತ್​, ಲಾಕ್​ಡೌನ್​ ಹಿನ್ನೆಲೆಯಲ್ಲಿ ಕೊಟ್ಟರಕ್ಕರದಲ್ಲಿನ ಸೂಪರ್​ ಮಾರ್ಕೆಟ್​ನಲ್ಲಿ ಸೇಲ್ಸ್​ಮನ್​ ಆಗಿ ನಿರ್ವಹಿಸುತ್ತಿದ್ದರು. ಇವರ ಪತ್ನಿ ಪ್ರಿನ್ಸಿ ಸಹ ಜ್ಯುವೆಲ್ಲರಿ ಶಾಪ್​ ಒಂದರಲ್ಲಿ ಸೇಲ್ಸ್​ವುಮನ್​ ಆಗಿದ್ದರು. ದಂಪತಿಗೆ 3 ವರ್ಷದ ಮಗನಿದ್ದನು. ಇದೀಗ ಕುಟುಂಬವನ್ನು ಅನುಜಿತ್​ ಅಗಲಿದ್ದಾರೆ. ಶವಪರೀಕ್ಷೆಯ ನಂತರ ಅವರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದ್ದು, ಅಂತ್ಯಕ್ರಿಯೆ ನೆರವೇರಿದೆ. (ಏಜೆನ್ಸೀಸ್​)

    ‘ಪೊರಕೆ’ಗಾಗಿ ತಹಸೀಲ್ದಾರ್​ ಸಮ್ಮುಖದಲ್ಲೇ ಅಧಿಕಾರಿಗಳ ಕಿತ್ತಾಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts