More

    ಜಮ್ಮು ಮತ್ತು ಕಾಶ್ಮೀರದ ಪುಲ್ವಮಾದಲ್ಲಿ ತಪ್ಪಿದ ಮತ್ತೊಂದು ಭಾರಿ ದುರಂತ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭಾನುವಾರ ಬೆಳಗ್ಗೆ ಉಗ್ರರ ನಡೆಸಿದ ಸುಧಾರಿತ ಸ್ಫೋಟಕ ದಾಳಿಯಲ್ಲಿ ಒಬ್ಬ ಯೋಧ ಗಾಯಗೊಂಡಿದ್ದರು. ಇದರ ಬೆನ್ನಲ್ಲೇ ಸುತ್ತಮುತ್ತ ಶೋಧ ಕಾರ್ಯ ನಡೆಸಿದಾಗ ಉಗ್ರರು ಅಡಗಿಸಿಟ್ಟಿದ್ದ ಮತ್ತೊಂದು ಸುಧಾರಿತ ಸ್ಫೋಟಕ ಪತ್ತೆಯಾಗಿದ್ದು, ಇನ್ನೊಂದು ಭಾರಿ ದುರಂತ ತಪ್ಪಿದಂತಾಗಿದೆ.

    ಜಮ್ಮು ಮತ್ತು ಕಾಶ್ಮೀರದ ಪೊಲೀಸ್​ ಪಡೆ, ಸಿಆರ್​ಪಿಎಫ್​ ಯೋಧರು ಮತ್ತು ಸೇನಾಪಡೆ ಸಿಬ್ಬಂದಿ ಜಂಟಿ ಶೋಧ ಕಾರ್ಯಾಚರಣೆಯಲ್ಲಿ ಪುಲ್ವಮಾ ಜಿಲ್ಲೆಯ ಪೀಕ್ಸ್​ ಆಟೋಮೊಬೈಲ್​ ಕ್ರಾಸಿಂಗ್​ನಲ್ಲಿ ಈ ಸ್ಫೋಟಕ ಪತ್ತೆಯಾಯಿತು ಎಂದು ಹೇಳಲಾಗಿದೆ.

    ಇದನ್ನೂ ಓದಿ: ಕೋವಿಡ್​ನಿಂದ ಸತ್ತವನ ಹೆಣ ಕೊಡಲೇಬೇಕೆಂದು ಸರ್ಕಾರಿ ಸಿಬ್ಬಂದಿಯನ್ನೇ ಅಪಹರಿಸಿದ್ರು…!

    ಸಕಾಲದಲ್ಲಿ ಸ್ಪೋಟಕ ಪತ್ತೆಯಾಗಿದ್ದರಿಂದ, ಮತ್ತೊಂದು ಭಾರಿ ದುರಂತ ತಪ್ಪಿದಂತಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪೊಲೀಸ್​ ವಕ್ತಾರರು ಹೇಳಿದ್ದಾರೆ.

    ಭಾನುವಾರ ಬೆಳಗ್ಗೆ ಸಿಆರ್​ಪಿಎಫ್​ನ ರೋಡ್​ ಓಪನಿಂಗ್​ ಪಾರ್ಟಿ (ಆರ್​ಒಪಿ) ಪುಲ್ವಮಾ ಜಿಲ್ಲೆಯ ಗಾಂಗೂವಿನ ಸರ್ಕ್ಯುಲರ್​ ರಸ್ತೆಯಲ್ಲಿ ಸಾಗುತ್ತಿದ್ದಾಗ ಉಗ್ರರು ಇರಿಸಿದ್ದ ಸುಧಾರಿತ ಸ್ಫೋಟಕ ಸಿಡಿದಿತ್ತು. ಈ ಘಟನೆಯಲ್ಲಿ ಸಿಆರ್​ಪಿಎಫ್​ ಯೋಧರೊಬ್ಬರು ಗಾಯಗೊಂಡಿದ್ದರು.

    ಅಪ್ಪ-ಅಮ್ಮನಿಗೂ ಸೋಂಕು: 17 ದಿನದ ಕಂದನಿಗೆ ವೈದ್ಯರ ಕಣ್ಣೀರ ವಿದಾಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts