More

    ಅನೀಶ್​ ತೇಜೇಶ್ವರ್​ ಹುಟ್ಟುಹಬ್ಬಕ್ಕೆ ಇನ್ನೊಂದು ಹೊಸ ಚಿತ್ರ …

    ಬೆಂಗಳೂರು: ಅನೀಶ್​ ತೇಜೇಶ್ವರ್​ ಅಭಿನಯದ ಚಿತ್ರವೊಂದು ಬಿಡುಗಡೆಯಾಗದೆ ಎರಡೂವರೆ ವರ್ಷಗಳೇ ಆಗಿವೆ. 2018ರ ಆಗಸ್ಟ್​ನಲ್ಲಿ ಅವರ ಅಭಿನಯದ ‘ವಾಸು ನಾನ್​ ಪಕ್ಕಾ ಕಮರ್ಷಿಯಲ್​’ ಚಿತ್ರವು ಬಿಡುಗಡೆಯಾಗಿತ್ತು. ಆ ನಂತರ ಅವರು ‘ರಾಮಾರ್ಜುನ’ ಎಂಬ ಚಿತ್ರದಲ್ಲಿ ನಟಿಸುವುದರ ಜತೆಗೆ ಅದನ್ನು ನಿರ್ದೇಶನ ಮಾಡಿದರಾದರೂ, ಅದಿನ್ನೂ ಬಿಡುಗಡೆಯಾಗಿಲ್ಲ.

    ಇದನ್ನೂ ಓದಿ: ‘ಚಡ್ಡಿದೋಸ್ತ್​’ಗಳ ಹುಡುಗಾಟ, ತುಂಟಾಟ …

    ಈ ಮಧ್ಯೆ, ಅವರ ಅಭಿನಯದ ಇನ್ನೊಂದು ಚಿತ್ರದ ಘೋಷಣೆಯಾಗಿದೆ. ಅದೇ ‘ಎನ್​​ಆರ್​ಐ’. ಈ ಚಿತ್ರ ಕನ್ನಡ ಮತ್ತ ತೆಲುಗಿನಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಲಿದೆ. ಸದ್ಯಕ್ಕೆ ಈ ಚಿತ್ರ ಘೋಷಣೆಯಾಗಿದ್ದು, ಚಿತ್ರೀಕರಣ ಇನ್ನಷ್ಟೇ ಪ್ರಾರಂಭವಾಗಬೇಕಿದೆ. ಈ ಚಿತ್ರ ಇಂದೇ ಘೋಷಣೆಯಾಗುತ್ತಿರುವುದಕ್ಕೂ ಕಾರಣವಿದೆ. ಇಂದು ಅನೀಶ್​ ಅವರ ಹುಟ್ಟುಹಬ್ಬ. ಅದೇ ಕಾರಣಕ್ಕೆ ಚಿತ್ರದ ಪೋಸ್ಟರ್​ ಬಿಡುಗಡೆಯಾಗಿದೆ.

    ‘ಎನ್​ಆರ್​ಐ’ ಚಿತ್ರದಲ್ಲಿ ಅನೀಶ್,​ ವಿಕ್ಕಿ ಎಂಬ ಡ್ರೈವರ್​ ಪಾತ್ರ ಮಾಡುತ್ತಿದ್ದಾರೆ. ದುಬೈನಲ್ಲಿ ಟ್ಯಾಕ್ಸಿ ಓಡಿಸುವ ಯುವಕನೊಬ್ಬನ ಕುರಿತು ಈ ಕಥೆ ಸುತ್ತುತ್ತದೆ ಎಂದು ಹೇಳಲಾಗುತ್ತಿದೆ. ಈ ಚಿತ್ರಕ್ಕೆ ಅನೀಶ್​ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ಈ ಚಿತ್ರವನ್ನು ಅವರು ತಮ್ಮ ವಿಂಕ್​ವಿಸಿಲ್​ ಸ್ಟುಡಿಯೋದ ಮೂಲಕ ನಿರ್ಮಾಣ ಮಾಡುತ್ತಿದ್ದಾರೆ.

    ಇದನ್ನೂ ಓದಿ: ಶಶಿಕುಮಾರ್ ಪುತ್ರನ ಹೊಸ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ ಮಂತ್ರಾಲಯ ಶ್ರೀಗಳು

    ಇನ್ನು, ‘ರಾಮಾರ್ಜುನ’ ಚಿತ್ರವು ಸಂಪೂರ್ಣವಾಗಿದ್ದು, ಬಿಡುಗಡೆ ಆಗುವುದು ಬಾಕಿ ಇದೆ. ಈಗಾಗಲೇ ಚಿತ್ರಕ್ಕೆ ಸೆನ್ಸಾರ್​ ಮಂಡಳಿಯಿಂದ ‘ಯು/ಎ’ ಪ್ರಮಾಣಪತ್ರ ಸಿಕ್ಕಿದೆ. ಈ ಚಿತ್ರ ಸಹ ಕನ್ನಡ ಮತ್ತು ತೆಲುಗಿನಲ್ಲಿ ಬಿಡುಗಡೆಯಾಗುತ್ತಿದ್ದು, ಇತ್ತೀಚೆಗೆ ನಾಯಕಿ ನಿಶ್ವಿಕಾ ನಾಯ್ಡು, ತೆಲುಗು ಅವತರಣಿಕೆಗೆ ಡಬ್ ಮಾಡಿದ್ದಾರೆ. ಈ ಚಿತ್ರ ಫೆಬ್ರವರಿ ಅಥವಾ ಮಾರ್ಚ್​ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

    ‘ಒಂದು ಕ್ರಿಕೆಟ್ ತಂಡಕ್ಕಾಗುವಷ್ಟು ಮಕ್ಕಳನ್ನು ಹೆರುವ ಆಸೆ ಇದೆ’; ಪ್ರಿಯಾಂಕಾ ಚೋಪ್ರಾ ಬಯಕೆ ಇದು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts