More

    ಅನಿಲ್ ಅಂಬಾನಿ ಷೇರಿಗೆ ಮತ್ತೆ ಬೇಡಿಕೆ: 1.13 ತಲುಪಿದ್ದ ಷೇರು ಈಗ 28.44 ರೂಪಾಯಿಗೆ ಏರಿಕೆ: 99 % ಕುಸಿದಿದ್ದ ಸ್ಟಾಕ್​ ಬೆಲೆಯಲ್ಲಿ 25000% ಹೆಚ್ಚಳ

    ಮುಂಬೈ: ಅನಿಲ್ ಅಂಬಾನಿ ಅವರ ಕಂಪನಿಯಾದ ರಿಲಯನ್ಸ್ ಪವರ್ ಷೇರುಗಳಲ್ಲಿ ಈಗ ಭಾರಿ ಏರಿಕೆಯಾಗಿದೆ. ರಿಲಯನ್ಸ್ ಪವರ್ ಷೇರುಗಳ ಬೆಲೆ ಗುರುವಾರ 4% ಕ್ಕಿಂತ ಹೆಚ್ಚು ಏರಿಕೆ ಕಂಡು 28.44 ರೂಪಾಯಿ ತಲುಪಿದೆ. ಈ ಕಂಪನಿಯ ಷೇರುಗಳ ಬೆಲೆ ಬುಧವಾರ ಕೂಡ ಶೇ. 5ರಷ್ಟು ಏರಿಕೆಯೊಂದಿಗೆ 27.30 ರೂ. ತಲುಪಿತ್ತು.

    ರಿಲಯನ್ಸ್ ಪವರ್ ಷೇರು ಕಳೆದ 4 ವರ್ಷಗಳಲ್ಲಿ ಹೂಡಿಕೆದಾರರಿಗೆ ಅದ್ಭುತ ಲಾಭ ನೀಡಿದೆ. ನಾಲ್ಕು ವರ್ಷಗಳಲ್ಲಿ 1 ರೂಪಾಯಿಯಿಂದ ಏರಿಕೆಯಾಗಿ 28 ರೂ.ಗೆ ಈಗ ತಲುಪಿದೆ. ಈ ಮೂಲಕ ಕಳೆದ 4 ವರ್ಷಗಳಲ್ಲಿ ಈ ಕಂಪನಿಯ ಷೇರುಗಳು ಹೂಡಿಕೆದಾರರಿಗೆ 2500% ಕ್ಕಿಂತ ಹೆಚ್ಚು ಲಾಭ ತಂದುಕೊಟ್ಟಿವೆ. ಈ ಅವಧಿಯಲ್ಲಿ 1 ಲಕ್ಷ ರೂಪಾಯಿ ಹೂಡಿಕೆಯನ್ನು 25 ಲಕ್ಷ ರೂಪಾಯಿಗಳಿಗೆ ಹೆಚ್ಚಿಸಿವೆ. ರಿಲಯನ್ಸ್ ಪವರ್‌ನ ಷೇರುಗಳ ಬೆಲೆ ಮಾರ್ಚ್ 27, 2020 ರಂದು 1.13 ರೂಪಾಯಿ ಇತ್ತು. ಈಗ 8 ಫೆಬ್ರವರಿ 2024 ರಂದು 28.44 ರೂಪಾಯಿಗೆ ತಲುಪಿದೆ.

    ಈ ಕಂಪನಿಯ ಷೇರುಗಳ 52 ವಾರಗಳ ಗರಿಷ್ಠ ಮಟ್ಟವು 33.10 ರೂ. ಆಗಿದೆ. ರಿಲಯನ್ಸ್ ಪವರ್‌ನ ಷೇರುಗಳು ಗರಿಷ್ಠ ಮಟ್ಟದಿಂದ 99% ಕ್ಕಿಂತ ಹೆಚ್ಚು ಕುಸಿದು, ಮಾರ್ಚ್ 27, 2020 ರಂದು ರೂ 1.13ಗೆ ತಲುಪಿದ್ದವು. ಕಳೆದ 1 ವರ್ಷದಲ್ಲಿ ಈ ಷೇರುಗಳ ಬೆಲೆ 143% ರಷ್ಟು ಏರಿಕೆಯಾಗಿದೆ. ರಿಲಯನ್ಸ್ ಪವರ್‌ನ ಷೇರುಗಳ ಬೆಲೆ 9 ಫೆಬ್ರವರಿ 2023 ರಂದು 11.72 ರೂ. ಇತ್ತು.

    ಕಳೆದ 3 ವರ್ಷಗಳಲ್ಲಿ, ರಿಲಯನ್ಸ್ ಪವರ್ ಷೇರುಗಳ ಬೆಲೆ 780% ಹೆಚ್ಚಾಗಿದೆ. 12 ಫೆಬ್ರವರಿ 2021 ರಂದು ಕಂಪನಿಯ ಷೇರುಗಳ ಬೆಲೆ 3.23 ರೂ. ಇತ್ತು. ಕಳೆದ 6 ತಿಂಗಳಲ್ಲಿ ಈ ಕಂಪನಿಯ ಷೇರುಗಳ ಬೆಲೆ ಶೇಕಡಾ 55 ಕ್ಕಿಂತ ಹೆಚ್ಚು ಏರಿಕೆಯಾಗಿದೆ.

    ರಿಲಯನ್ಸ್ ಪವರ್ ಲಿಮಿಟೆಡ್ ಅನಿಲ್ ಅಂಬಾನಿಯವರ ರಿಲಯನ್ಸ್ ಸಮೂಹದ ಕಂಪನಿಯಾಗಿದೆ. ರಿಲಯನ್ಸ್ ಗ್ರೂಪ್ ಹಣಕಾಸು ಸೇವೆಗಳು, ಮೂಲಸೌಕರ್ಯ ಮತ್ತು ಇಂಧನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತದೆ. ರಿಲಯನ್ಸ್ ಪವರ್ ಭಾರತದಲ್ಲಿ ವಿದ್ಯುತ್ ಯೋಜನೆಗಳ ಅಭಿವೃದ್ಧಿ ಮತ್ತು ನಿರ್ಮಾಣದಲ್ಲಿ ಕೆಲಸ ಮಾಡುತ್ತದೆ. ಇದು ಕೆಲವು ಅಂಗಸಂಸ್ಥೆಗಳನ್ನು ಸಹ ಹೊಂದಿದೆ. ಕಂಪನಿಯು ಅಂದಾಜು 6000 MW ನಷ್ಟು ಕಾರ್ಯಾಚರಣೆಯ ವಿದ್ಯುತ್ ಉತ್ಪಾದನಾ ಆಸ್ತಿಯನ್ನು ಹೊಂದಿದೆ.

    ಗ್ರೇ ಮಾರ್ಕೆಟ್​ನಲ್ಲಿ 100 ರೂ. ಷೇರಿಗೆ 300 ರೂ.: ಐಪಿಒಗೆ ಮೊದಲ ದಿನವೇ 20 ಪಟ್ಟು ಬೇಡಿಕೆ; ನೀವು ಹೂಡಿಕೆ ಮಾಡಿದರೆ ದೊಡ್ಡ ಲಾಭ

    ನಷ್ಟದಲ್ಲಿದ್ದ ಕಂಪನಿಯ ಲಾಭ ಈಗ 283% ಹೆಚ್ಚಳ: ಝೊಮ್ಯಾಟೊ ಷೇರುಗಳಿಗೆ ಬೇಡಿಕೆ, ಬೆಲೆ ಏರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts