More

    ಮಗನ ಕಷ್ಟ ನೋಡಲಾಗುತ್ತಿಲ್ಲ, ದಯಾಮರಣ ಕೊಡಿ ಎಂದು ಅರ್ಜಿ ಸಲ್ಲಿಸಿದ ಎರಡೇ ಗಂಟೆಗಳಲ್ಲಿ ಮಡಿಲಲ್ಲೇ ಪ್ರಾಣ ಬಿಟ್ಟ ಮಗ

    ಚಿತ್ತೂರು: ಕರೊನಾ ಸೋಂಕು ಜನರನ್ನು ಆರ್ಥಿಕ ಸಂಕಷ್ಟಕ್ಕೆ ನೂಕಿದೆ. ಇಂತಹ ಸಮಯದಲ್ಲಿ ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿರುವ ನನ್ನ ಮಗ ಸರಿಯಾದ ಚಿಕಿತ್ಸೆ ಸಿಗದೆ ಒದ್ದಾಡುತ್ತಿರುವುದನ್ನು ನೋಡಲಾಗುತ್ತಿಲ್ಲ, ದಯವಿಟ್ಟು ಅವನಿಗೆ ದಯಾಮರಣ ಕೊಟ್ಟುಬಿಡಿ ಎಂದು ನ್ಯಾಯಾಲಯದ ಮೆಟ್ಟಲೇರಿದ್ದ ಮಹಿಳೆಯ ಮಗ, ದಯಾಮರಣ ಅರ್ಜಿ ಸಲ್ಲಿಕೆಯಾಗಿ ಎರಡೇ ಗಂಟೆಗಳಲ್ಲಿ ಅಮ್ಮನ ಮಡಿಲಲ್ಲೇ ಪ್ರಾಣ ಬಿಟ್ಟಿದ್ದಾನೆ.

    ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಪುಣಗನೂರಿನ ನಿವಾಸಿಗಳಾಗಿರುವ ಮಣಿ ಮತ್ತು ಅರುಣಾ ದಂಪತಿಗೆ ಹರ್ಷವರ್ಧನ್ (9) ಹೆಸರಿನ ಮಗನಿದ್ದ. ಆತನಿಗೆ ಕಳೆದ ಐದು ವರ್ಷಗಳ ಹಿಂದೆ ವಿಚಿತ್ರವಾದ ರಕ್ತ ಸಂಬಂಧಿತ ಕಾಯಿಲೆಯೊಂದು ಕಾಣಿಸಿಕೊಂಡಿದೆ. ಅಂದಿನಿಂದ ದಂಪತಿ ಮಗನಿಗೆ ಚಿಕಿತ್ಸೆ ಕೊಡಿಸುತ್ತಲೇ ಬಂದಿದ್ದಾರೆ. ಮಗನ ಚಿಕಿತ್ಸೆಗಾಗಿ ತಮ್ಮಲ್ಲಿದ್ದ ಹೊಲವನ್ನೂ ಮಾರಾಟ ಮಾಡಿದ್ದಾರೆ.

    ಬಂಗಾರವನ್ನೆಲ್ಲ ಅಡವಿಟ್ಟು ದುಡ್ಡು ಒಟ್ಟು ಹಾಕಿದ್ದಾರೆ. ಅದಾದ ನಂತರ 4 ಲಕ್ಷ ರೂಪಾಯಿ ಸಾಲವನ್ನೂ ಮಾಡಿ ಚಿಕಿತ್ಸೆ ಕೊಡಿಸಿದ್ದಾರೆ. ಇಷ್ಟಾದರೂ ಮಗನ ಆರೋಗ್ಯ ಸುಧಾರಿಸಿಲ್ಲ. ಈಗ ಕೈ ಕೂಡ ಖಾಲಿಯಾಗಿದೆ. ಮಗನ ಚಿಕಿತ್ಸೆಗೆ ನಮ್ಮ ಬಳಿ ಹಣವಿಲ್ಲ. ಹಣ ಕೊಡಿ ಇಲ್ಲವೇ ದಯಾ ಮರಣಕ್ಕೆ ಅನುಮತಿ ಕೊಡಿ ಎಂದು ಅರುಣಾ ಮಂಗಳವಾರದಂದು ಸ್ಥಳೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾಳೆ.
    ಅರ್ಜಿ ಸಲ್ಲಿಸಿ ಆಟೋ ಒಂದನ್ನು ಹತ್ತಿ ಮಗನನ್ನು ಮನೆಗೆ ಕರೆದುಕೊಂಡು ಹೊರಟಿದ್ದಾರೆ. ಆಟೋದಲ್ಲಿ ಅಮ್ಮನ ಮಡಿಲಲ್ಲಿ ಮಲಗಿದ್ದ ಮಗ ಅಲ್ಲಿಯೇ ಪ್ರಾಣ ಬಿಟ್ಟಿದ್ದಾನೆ ಎನ್ನಲಾಗಿದೆ. (ಏಜೆನ್ಸೀಸ್)

    ‘ಬ್ಲ್ಯಾಕ್​ಫಂಗಸ್​ ಆಗಿದೆ.. ಕಣ್ಣು, ದವಡೆ ತೆಗಿಲೇಬೇಕು’ ಎಂದರೂ ಕೇಳದೆ ರೋಗಿಯನ್ನು ಮಾಂತ್ರಿಕನ ಬಳಿ ಕರೆತಂದ ಗ್ರಾಮಸ್ಥರು

    ಶಿಕ್ಷಕಿಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ ವ್ಯಕ್ತಿ! ಆಕೆಯ ಟಾರ್ಚರ್​ ತಾಳಲಾರದೆ ಆತ್ಮಹತ್ಯೆ!

    17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts