ತಲೆಗೂದಲನ್ನು ಕತ್ತರಿಸಿಕೊಂಡ ಅನುಪಮಾ ಗೌಡ! ಕಾರಣ?

ಬೆಂಗಳೂರು: ಖ್ಯಾತ ನಟಿ, ನಿರೂಪಕಿ ಹಾಗೂ ಮಾಜಿ ಬಿಗ್ ಬಾಸ್ ಸ್ಪರ್ಧಿ ಅನುಪಮಾ ಗೌಡ ಅವರು ಒಂದು ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಕಿರುತೆರೆ ನಟಿಯ ಈ ಹೊಸ ಹೇರ್ ಸ್ಟೈಲ್ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ. ಹೌದು, ಅನುಪಮಾ ಗೌಡ ಅವರು ಇಷ್ಟು ವರ್ಷಗಳ ಕಾಲ ಉದ್ದ ಕೂದಲಿನಲ್ಲಿ ಮಿಂಚುತ್ತಿದ್ದರು, ಆದರೆ, ಇದೀಗ ನಟಿ ತಾವು ಪ್ರೀತಿಯಿಂದ ಬೆಳೆಸಿಕೊಂಡಿದ್ದ ಉದ್ದ ಕೂದಲನ್ನು ಕತ್ತರಿಸಿಕೊಂಡಿದ್ದಾರೆ. ಅನುಪಮಾ ಅವರ ಒಂದು ಇನ್​ಸ್ಟಾಗ್ರಾಂ ಪೋಸ್ಟ್​ನಲ್ಲಿ ತಾವು ಕೂದಲನ್ನು ಕತ್ತರಿಸಿಕೊಂಡಿರುವ ಹಾಗೆ ತಿಳಿಸಿದ್ದಾರೆ.
ಹಲವು ವರ್ಷಗಳಿಂದ ಬೆಳೆಸಿದ್ದ ಸುಂದರ ಕೂದಲನ್ನು ಅನುಪಮಾ ಅವರು ಕತ್ತರಿಸಿದ್ದು ಅಭಿಮಾನಿಗಳಿಗೆ ಮಾತ್ರ ಬೇಸರ ತಂದಿದೆ. ಆದರೆ, ಅನುಪಮಾ ಅವರು ಕೂದಲು ಕತ್ತರಿಸಿದ್ದು ಒಂದೊಳ್ಳೆ ಕಾರಣಕ್ಕೆ ಎಂದು ಹೇಳಬೇಕು. ಹೌದು, ನಟಿ ತಮ್ಮ ಉದ್ದ ಕೂದಲಿಗೆ ಕತ್ತರಿ ಹಾಕಿದ್ದು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡುವ ಉದ್ದೇಶದಿಂದ. ಈ ಮೂಲಕ ಅನುಪಮಾ ಎಲ್ಲರಿಗೂ ಮಾದರಿ ಆಗಿದ್ದಾರೆ. ಸದ್ಯ. ಅನುಪಮಾ ಪೋಸ್ಟ್ ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ತಮ್ಮ ಪೋಸ್ಟ್ ನಲ್ಲಿ ಅನುಪಮಾ ಅವರು, ”ನನ್ನ ಕೂದಲು ಸಹ ನನ್ನ ಪಯಣದ ಒಂದು ಭಾಗವಾಗಿದೆ. ಇವತ್ತು ಇದನ್ನ ನನ್ನ ಆತ್ಮವಿಶ್ವಾಸದ ಸಂತಸವನ್ನು ಅಗತ್ಯವಿರೋರಿಗೆ ದಾನ ಮಾಡಲು ಸಂತೋಷವಾಗುತ್ತಿದೆ. ನಾನು ದೀರ್ಘ ಸಮಯದಿಂದ ಕುದಲಿಗೆ ಕತ್ತರಿ ಹಾಕಿರಲಿಲ್ಲ ಮತ್ತು ತುಂಬಾ ಪ್ರೀತಿಯಿಂದ ಬೆಳೆಸಿದ್ದೆ. ಅಲ್ಲಿರುವ ನನ್ನ ಅದ್ಭುತ ಹೋರಾಟಗಾರರಿಗೆ ನನ್ನ ಕೈಲಾದಷ್ಟು ಮಾಡುವ ಸಮಯ ಇದು. ಇದು ಅವರ ಜೀವನದಲ್ಲಿ ಒಂದು ಸಣ್ಣ ಸಂತೋಷವನ್ನು ತರುತ್ತದೆ ಎಂದು ನಾನು ಭಾವಿಸುತ್ತೇನೆ. ಕ್ಯಾನ್ಸರ್ ರೋಗಿಗಳಿಗೆ ವಿಗ್ ತಯಾರಿಸುವ ಸಂಸ್ಥೆಗೆ ದಾನ ಮಾಡಿದ್ದೇನೆ. ಈ ಪೋಸ್ಟ್ ಅನ್ನು ನಾನು ಹಾಕುತ್ತಿರುವ ಉದ್ದೇಶ ಇನ್ನಷ್ಟು ಜನರಿಗೆ ಪ್ರೇರಣೆ ಆಗಲಿ”, ಎಂದು ಬರೆದುಕೊಂಡಿದ್ದಾರೆ 

KGF-2 ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ Records ಗೊತ್ತಾ? ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟು ಇರಬಹುದು?

Contents
ಬೆಂಗಳೂರು: ಖ್ಯಾತ ನಟಿ, ನಿರೂಪಕಿ ಹಾಗೂ ಮಾಜಿ ಬಿಗ್ ಬಾಸ್ ಸ್ಪರ್ಧಿ ಅನುಪಮಾ ಗೌಡ ಅವರು ಒಂದು ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಕಿರುತೆರೆ ನಟಿಯ ಈ ಹೊಸ ಹೇರ್ ಸ್ಟೈಲ್ ಸದ್ಯ ಎಲ್ಲರ ಗಮನ ಸೆಳೆಯುತ್ತಿದೆ. ಹೌದು, ಅನುಪಮಾ ಗೌಡ ಅವರು ಇಷ್ಟು ವರ್ಷಗಳ ಕಾಲ ಉದ್ದ ಕೂದಲಿನಲ್ಲಿ ಮಿಂಚುತ್ತಿದ್ದರು, ಆದರೆ, ಇದೀಗ ನಟಿ ತಾವು ಪ್ರೀತಿಯಿಂದ ಬೆಳೆಸಿಕೊಂಡಿದ್ದ ಉದ್ದ ಕೂದಲನ್ನು ಕತ್ತರಿಸಿಕೊಂಡಿದ್ದಾರೆ. ಅನುಪಮಾ ಅವರ ಒಂದು ಇನ್​ಸ್ಟಾಗ್ರಾಂ ಪೋಸ್ಟ್​ನಲ್ಲಿ ತಾವು ಕೂದಲನ್ನು ಕತ್ತರಿಸಿಕೊಂಡಿರುವ ಹಾಗೆ ತಿಳಿಸಿದ್ದಾರೆ.ಹಲವು ವರ್ಷಗಳಿಂದ ಬೆಳೆಸಿದ್ದ ಸುಂದರ ಕೂದಲನ್ನು ಅನುಪಮಾ ಅವರು ಕತ್ತರಿಸಿದ್ದು ಅಭಿಮಾನಿಗಳಿಗೆ ಮಾತ್ರ ಬೇಸರ ತಂದಿದೆ. ಆದರೆ, ಅನುಪಮಾ ಅವರು ಕೂದಲು ಕತ್ತರಿಸಿದ್ದು ಒಂದೊಳ್ಳೆ ಕಾರಣಕ್ಕೆ ಎಂದು ಹೇಳಬೇಕು. ಹೌದು, ನಟಿ ತಮ್ಮ ಉದ್ದ ಕೂದಲಿಗೆ ಕತ್ತರಿ ಹಾಕಿದ್ದು ಕ್ಯಾನ್ಸರ್ ರೋಗಿಗಳಿಗೆ ದಾನ ಮಾಡುವ ಉದ್ದೇಶದಿಂದ. ಈ ಮೂಲಕ ಅನುಪಮಾ ಎಲ್ಲರಿಗೂ ಮಾದರಿ ಆಗಿದ್ದಾರೆ. ಸದ್ಯ. ಅನುಪಮಾ ಪೋಸ್ಟ್ ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಪೋಸ್ಟ್ ನಲ್ಲಿ ಅನುಪಮಾ ಅವರು, ”ನನ್ನ ಕೂದಲು ಸಹ ನನ್ನ ಪಯಣದ ಒಂದು ಭಾಗವಾಗಿದೆ. ಇವತ್ತು ಇದನ್ನ ನನ್ನ ಆತ್ಮವಿಶ್ವಾಸದ ಸಂತಸವನ್ನು ಅಗತ್ಯವಿರೋರಿಗೆ ದಾನ ಮಾಡಲು ಸಂತೋಷವಾಗುತ್ತಿದೆ. ನಾನು ದೀರ್ಘ ಸಮಯದಿಂದ ಕುದಲಿಗೆ ಕತ್ತರಿ ಹಾಕಿರಲಿಲ್ಲ ಮತ್ತು ತುಂಬಾ ಪ್ರೀತಿಯಿಂದ ಬೆಳೆಸಿದ್ದೆ. ಅಲ್ಲಿರುವ ನನ್ನ ಅದ್ಭುತ ಹೋರಾಟಗಾರರಿಗೆ ನನ್ನ ಕೈಲಾದಷ್ಟು ಮಾಡುವ ಸಮಯ ಇದು. ಇದು ಅವರ ಜೀವನದಲ್ಲಿ ಒಂದು ಸಣ್ಣ ಸಂತೋಷವನ್ನು ತರುತ್ತದೆ ಎಂದು ನಾನು ಭಾವಿಸುತ್ತೇನೆ. ಕ್ಯಾನ್ಸರ್ ರೋಗಿಗಳಿಗೆ ವಿಗ್ ತಯಾರಿಸುವ ಸಂಸ್ಥೆಗೆ ದಾನ ಮಾಡಿದ್ದೇನೆ. ಈ ಪೋಸ್ಟ್ ಅನ್ನು ನಾನು ಹಾಕುತ್ತಿರುವ ಉದ್ದೇಶ ಇನ್ನಷ್ಟು ಜನರಿಗೆ ಪ್ರೇರಣೆ ಆಗಲಿ”, ಎಂದು ಬರೆದುಕೊಂಡಿದ್ದಾರೆ.  

ಅಭಿಮಾನಿಗಳಿಗೆಂದು ಕೈಯಲ್ಲಿ ರೆಡ್ ರೋಸ್ ಹಿಡಿದ ಕರಾವಳಿ ಬೆಡಗಿ ಕೃತಿ ಶೆಟ್ಟಿ; ಕಾರಣ ಗೊತ್ತಾ?

Share This Article
blank

ತುಪ್ಪ ತಿನ್ನೋದರಿಂದ ದಪ್ಪಾ ಆಗ್ತಾರಾ? ಯಾವ ಸಮಯದಲ್ಲಿ ಸೇವಿಸುವುದು ಬೆಸ್ಟ್​, ಇಲ್ಲಿದೆ ಉತ್ತರ | Ghee

Ghee Benefits: ತುಪ್ಪ ಬಹುತೇಕರಿಗೆ ಇಷ್ಟ. ತಾವು ಸೇವಿಸುವ ಆಹಾರದಲ್ಲಿ ತುಪ್ಪವಿದ್ದರೆ ವಿಶೇಷ ರುಚಿ ಎಂದು…

ಈ ಪದಾರ್ಥಗಳು ನಾಲಿಗೆಗೆ ಕಹಿ ಆದ್ರೂ ಆರೋಗ್ಯಕ್ಕೆ ವರದಾನ; ಇದರ ಬಗ್ಗೆ ತಿಳಿಯಿರಿ.. | Health Tips

Health Tips: ಸಾಧಾರಣವಾಗಿ ನಾವು ಕಹಿ ಆಹಾರ ಪದಾರ್ಥಗಳು ಎಂದರೆ ದೂರ ಓಡುತ್ತೇವೆ. ನಮ್ಮಲ್ಲಿ ಹಲವರು…

blank