More

    ವೀರಪ್ಪನ್ ಕಥೆಗೆ ಹೊಸ ಟ್ವಿಸ್ಟ್​ … ಸಿನಿಮಾ ನಂತರ ಇದೀಗ ವೆಬ್ ಸೀರೀಸ್​​ನಲ್ಲಿ

    ಕಾಡುಗಳ್ಳ ಜೀವನವನ್ನಾಧರಿಸಿ ಕನ್ನಡದಲ್ಲಿ ಇದುವರೆಗೂ ಮೂರು ಸಿನಿಮಾಗಳು ಬಂದಿವೆ. 90ರ ದಶಕದಲ್ಲೇ ದೇವರಾಜ್, ‘ವೀರಪ್ಪನ್’ ಆಗಿದ್ದರು. ಆ ನಂತರ ವೀರಪ್ಪನ್ ಅಟ್ಟಹಾಸ ಮತ್ತು ಎನ್‌ಕೌಂಟರ್ ಕುರಿತಾಗಿ, ‘ಅಟ್ಟಹಾಸ’ ಮತ್ತು ‘ಕಿಲ್ಲಿಂಗ್ ವೀರಪ್ಪನ್’ ಚಿತ್ರಗಳು ಬಂದಿರುವುದು ಗೊತ್ತೇ ಇದೆ.

    ಇದನ್ನೂ ಓದಿ: ಮೊದಲ ತೆಲುಗು ಚಿತ್ರಕ್ಕೆ ದೀಪಿಕಾ ಪಡೆಯುತ್ತಿರುವ ಸಂಭಾವನೆ ಇಷ್ಟೊಂದಾ!?

    ಈಗ ‘ಅಟ್ಟಹಾಸ’ ನಿರ್ದೇಶಿಸಿದ್ದ ಎ.ಎಂ.ಆರ್. ರಮೇಶ್, ‘ವೀರಪ್ಪನ್’ ಎಂಬ ವೆಬ್ ಸೀರೀಸ್ ನಿರ್ದೇಶಿಸುವುದಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಇದೇ 23ರಂದು ಈ ಸರಣಿಯ ಕರ್ಟನ್ ರೇಸರ್ ಬಿಡುಗಡೆ ಮಾಡುತ್ತಿದ್ದಾರೆ.

    ಈ ಕುರಿತು ‘ವಿಜಯವಾಣಿ’ಯೊಂದಿಗೆ ಮಾತನಾಡಿದ ಅವರು, ‘ನಾನು ‘ವೀರಪ್ಪನ್’ ಚಿತ್ರ ಮಾಡುವಾಗ ಒತ್ತಡದಿಂದಾಗಿ ಹಲವು ವಿಷಯಗಳನ್ನು ಹೇಳುವುದಕ್ಕೆ ಸಾಧ್ಯ ಆಗಿರಲಿಲ್ಲ. ಅದರಲ್ಲೂ ಕರ್ನಾಟಕ ಪೊಲೀಸರ ಬಗ್ಗೆ ಹೆಚ್ಚು ಹೇಳುವುದಕ್ಕೆ ಸಾಧ್ಯವಾಗಲಿಲ್ಲ. ಅದರಲ್ಲೂ ಕರ್ನಾಟಕದ ಪೊಲೀಸರ ಸಾಹಸದ ಕುರಿತಾಗಿ ಕಾರಣಾಂತರಗಳಿಂದ ಹಲವು ವಿಷಯ ಹೇಳುವುದಕ್ಕೆ ಆಗಿರಲಿಲ್ಲ. ಈಗ ಈ ವೆಬ್​ ಸೀರೀಸ್​ನಲ್ಲಿ ಎಲ್ಲವನ್ನೂ ಹೇಳುವ ಪ್ರಯತ್ನ ಮಾಡುತ್ತಿದ್ದೇನೆ ಎನ್ನುತ್ತಾರೆ ರಮೇಶ್​.

    ವಿಶೇಷವೆಂದರೆ, ‘ಅಟ್ಟಹಾಸ’ ಚಿತ್ರವನ್ನು ಹಾಗೆಯೇ ಇಟ್ಟುಕೊಂಡು, ಅದಕ್ಕೆ ಪೂರಕವಾದ ಅಂಶಗಳನ್ನು ಸೇರಿಸುತ್ತಾ ಹೋಗುತ್ತಾರಂತೆ. ‘ಈಗಾಗಲೇ ನನ್ನ ಹತ್ತಿರ 10 ಗಂಟೆಗಾಗುವಷ್ಟು ಕಂಟೆಂಟ್​ ಇದೆ. ಈ ಪೈಕಿ ಒಂದೂವರೆ ಗಂಟೆ ಈಗಾಗಲೇ ಸಿದ್ಧವಿದೆ. ಮಿಕ್ಕ ಎಂಟೂವರೆ ಗಂಟೆಗಳ ಚಿತ್ರೀಕರಣ ಸದ್ಯದಲ್ಲೇ ಶುರು ಮಾಡುತ್ತೇವೆ. ಈ 10 ಗಂಟೆಗಳ ವಿಷಯವನ್ನು 45 ನಿಮಿಷಗಳ 12 ಅಥವಾ 14 ಎಪಿಸೋಡುಗಳನ್ನು ಮಾಡುತ್ತೇವೆ’ ಎನ್ನುತ್ತಾರೆ ರಮೇಶ್​.

    ಇದನ್ನೂ ಓದಿ: VIDEO: ಸುಶಾಂತ್​ ಆತ್ಮದ ಜತೆ ಮಾತನಾಡಿ, ಸಾವಿನ ಹಿನ್ನೆಲೆ ತಿಳಿದುಕೊಂಡ ಪ್ಯಾರಾನಾರ್ಮಲ್​ ತಜ್ಞ!!

    ಈ ವೆಬ್​ ಸೀರೀಸ್​ನಲ್ಲಿ ಕಿಶೋರ್​, ವೀರಪ್ಪನ್​ ಪಾತ್ರವನ್ನು ಮುಂದುವರೆಸಲಿದ್ದಾರೆ. ಇನ್ನು ಅರ್ಜುನ್​ ಸರ್ಜಾ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಗಸ್ಟ್​ 10ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ.

    ಈ ವರ್ಷ ಎರಡು ಬಿಡುಗಡೆ; ಮೂರು ಶೂಟಿಂಗ್​ … ಇನ್ನು ಸುಮ್ಮನೆ ಕೂರಲ್ಲ ಅಕ್ಷಯ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts