More

    ನನ್ನ ನಿಜವಾದ ಹೆಸರು ಇಂಕ್ವಿಲಾಬ್​ ಅಲ್ಲ … ಅಮಿತಾಭ್​ ಬಚ್ಚನ್​ ಸ್ಪಷ್ಟನೆ

    ಮುಂಬೈ: ‘ಬಿಗ್​ ಬಿ’ ಅಮಿತಾಭ್​ ಬಚ್ಚನ್​ ಅವರ ವಿಷಯದಲ್ಲಿ ಯಾವಾಗಲೂ ಪ್ರಮುಖವಾಗಿ ಕೇಳಿ ಬರುವ ಒಂದು ಪ್ರಮುಖ ವಿಷಯವೇನೆಂದರೆ, ಅವರ ನಿಜವಾದ ಹೆಸರು ಇಂಕ್ವಿಲಾಬ್​ ಎಂದು. ಆದರೆ, ತಮ್ಮ ನಿಜವಾದ ಹೆಸರು ಇಂಕ್ವಿಲಾಬ್​ ಅಲ್ಲ, ಅಮಿತಾಭ್​ ಎಂದು ಅವರೇ ಸ್ಪಷ್ಟಪಡಿಸಿದ್ದಾರೆ.

    ಇದನ್ನೂ ಓದಿ: ಬಾಲಿವುಡ್​ ಸ್ಟ್ರೈಕ್ಸ್​ ಬ್ಯಾಕ್​ಗೆ ಕಾರಣ ಫರ್ಹಾನ್​ ಅಖ್ತರ್​ ಅಂತೆ …

    ಸದ್ಯ ಪ್ರಸಾರವಾಗುತ್ತಿರುವ ‘ಕೌನ್​ ಬನೇಗಾ ಕರೋಡ್​ಪತಿ’ ಕಾರ್ಯಕ್ರಮದಲ್ಲಿ ಈ ವಿಷಯವನ್ನು ಅಮಿತಾಭ್​ ಸ್ಪಷ್ಟಪಡಿಸಿದ್ದು, ತಮ್ಮ ತಂದೆ-ತಾಯಿ ತಮಗೆ ಯಾವತ್ತೂ ಇಂಕ್ವಿಲಾಬ್​ ಎಂಬ ಹೆಸರನ್ನು ಇಟ್ಟಿರಲಿಲ್ಲ, ಅದನ್ನು ಆ ಹೆಸರನ್ನು ತಂದೆಯವರ ಸ್ನೇಹಿತರೊಬ್ಬರು ಪ್ರಸ್ತಾಪಿಸಿದ್ದರು ಎಂದು ಹೇಳಿದ್ದಾರೆ.

    ವಿಷಯವೇನೆಂದರೆ, 1942ರಲ್ಲಿ ಅಮಿತಾಭ್​ ಅವರ ತಾಯಿ ಎಂಟು ತಿಂಗಳ ಗರ್ಭಿಣಿಯಾಗಿದ್ದರಂತೆ. ಎಲ್ಲರಿಗೂ ಗೊತ್ತಿರುವಂತೆ ಆ ಸಮಯದಲ್ಲಿ ಸ್ವಾತಂತ್ರ್ಯ ಹೋರಾಟ ಉಛ್ರಾಯ ಸ್ಥಿತಿಯಲ್ಲಿತ್ತು. ಈ ಸಂದರ್ಭದಲ್ಲಿ ಒಮ್ಮೆ ತೇಜಿ ಬಚ್ಚನ್​ ಅವರು ಯಾವುದೋ ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರಂತೆ. ಮನೆಯ ಗಂಡಸರು ಬಂದು ನೋಡಿದಾಗ, ತೇಜಿ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ವಿಷಯ ಗೊತ್ತಾಗಿದೆ.

    ಮಗು ಹುಟ್ಟುವುದಕ್ಕೆ ಮುಂಚೆಯೇ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿರುವುದರಿಂದ, ಮಗುವಿಗೆ ಇಂಕ್ವಿಲಾಬ್ ಎಂಬ ಹೆಸರು ಯಾಕಿಡಬಾರದು ಎಂದು ಅಮಿತಾಭ್​ ಬಚ್ಚನ್​ ಅವರ ತಂದೆ ಹರಿವಂಶರಾಯ್​ ಬಚ್ಚನ್​ ಅವರ ಸ್ನೇಹಿತರೊಬ್ಬರು ಸಲಹೆ ನೀಡಿದ್ದರಂತೆ. ಆ ವಿಷಯವನ್ನು ಒಮ್ಮೆ ಎಲ್ಲೋ ಹೇಳಿಕೊಂಡಿದ್ದರಿಂದ, ಕೆಲವರು ಅದನ್ನು ತಪ್ಪಾಗಿ ಗ್ರಹಿಸಿ, ತಮ್ಮ ನಿಜ ಹೆಸರು ಇಂಕ್ವಿಲಾಬ್​ ಎಂದು ಅರ್ಥೈಸಿಕೊಂಡಿರುವ ಸಾಧ್ಯತೆ ಎಂಬುದು ಅಮಿತಾಭ್​ ಅಭಿಪ್ರಾಯ.

    ಇದನ್ನೂ ಓದಿ: ಓಟಟಿಯಲ್ಲಿ ಬಿಡುಗಡೆಯಾದ ಚಿತ್ರಗಳ ಮರುಬಿಡುಗಡೆ ಇಲ್ಲ … ಮಲ್ಟಿಪ್ಲೆಕ್ಸ್​ಗಳ ನಿರ್ಧಾರ

    ಇನ್ನು ಅಮಿತಾಭ್​ ಎಂಬ ಹೆಸರನ್ನು ಸಜೆಸ್ಟ್​ ಮಾಡಿದ್ದು ಅವರ ತಂದೆಯ ಸ್ನೇಹಿತರಂತೆ. ಹರಿವಂಶರಾಯ್​ ಅವರ ಸ್ನೇಹಿತ ಮತ್ತು ಖ್ಯಾತ ಕವಿ ಸುಮಿತ್ರಾನಂದನ್​ ಪಂತ್​, ಮಗುವಿಗೆ ಅಮಿತಾಭ್​ ಎಂಬ ಹೆಸರಿಡುವುದಕ್ಕೆ ಸಲಹೆ ನೀಡಿದರಂತೆ. ಆ ಹೆಸರು ಎಲ್ಲರಿಗೂ ಇಷ್ಟವಾಗಿದ್ದರಿಂದ ಅದೇ ಹೆಸರನ್ನು ಇಡಲಾಗಿದೆಯೇ ಹೊರತು, ಇಂಕ್ವಿಲಾಬ್​ ಎಂಬ ಹೆಸರನ್ನು ತಮಗೆ ಯಾವತ್ತೂ ಇಟ್ಟಿಲ್ಲ ಎಂದು ಅಮಿತಾಭ್​ ಸ್ಪಷ್ಟಪಡಿಸಿದ್ದಾರೆ.

    ರಜನೀಕಾಂತ್​ ವಿರುದ್ಧ ಹೈಕೋರ್ಟ್​ ಗರಂ- ದಂಡಕ್ಕೆ ಬೆದರಿದ ಸೂಪರ್​ಸ್ಟಾರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts