More

    ಓಟಟಿಯಲ್ಲಿ ಬಿಡುಗಡೆಯಾದ ಚಿತ್ರಗಳ ಮರುಬಿಡುಗಡೆ ಇಲ್ಲ … ಮಲ್ಟಿಪ್ಲೆಕ್ಸ್​ಗಳ ನಿರ್ಧಾರ

    ಮುಂಬೈ: ಲಾಕ್​ಡೌನ್​ನಿಂದ ಕಳೆದ ಏಳು ತಿಂಗಳುಗಳಿಂದ ಯಾವೊಂದು ಚಿತ್ರ ಸಹ ಬಿಡುಗಡೆಯಾಗಿಲ್ಲ. ಈ ಸಂದರ್ಭದಲ್ಲಿ ಕೆಲವು ಚಿತ್ರಗಳು ಓಟಿಟಿಯಲ್ಲಿ ನೇರವಾಗಿ ಬಿಡುಗಡೆಯಾಗಿವೆ. ಅಂತಹ ಚಿತ್ರಗಳನ್ನು ಬಿಡುಗಡೆ ಮಾಡದಿರುವುದಕ್ಕೆ ಈಗ ಚಿತ್ರಮಂದಿರದವರು ತೀರ್ಮಾನಿಸಿದ್ದಾರೆ.

    ನಾಳೆಯಿಂದ (ಅಕ್ಟೋಬರ್​ 15) ಚಿತ್ರಪ್ರದರ್ಶನವನ್ನು ಪ್ರಾರಂಭಿಸುವುದಕ್ಕೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದೆ. ಅದಕ್ಕೆ ಸೂಕ್ತ ಮಾರ್ಗಸೂಚಿಗಳನ್ನು ಸಹ ಬಿಡುಗಡೆ ಮಾಡಿದೆ. ಚಿತ್ರಪ್ರದರ್ಶನಕ್ಕೆ ಅನುಮತಿ ಸಿಕ್ಕಿರುವ ಹಿನ್ನೆಲೆಯಲ್ಲಿ ಒಂದಿಷ್ಟು ಚಿತ್ರಗಳು ಏಳು ತಿಂಗಳುಗಳ ನಂತರ ಬಿಡುಗಡೆಯಾಗುವುದಕ್ಕೆ ಸಿದ್ಧತೆ ನಡೆಸಿವೆ. ಈ ಪೈಕಿ ಹೊಸದಾಗಿ ಚಿತ್ರಗಳು ಬಿಡುಗಡೆಯಾಗುತ್ತಿಲ್ಲ. ಈಗಾಗಲೇ ಬಿಡುಗಡೆಯಾಗಿರುವ ಚಿತ್ರವನ್ನೇ ಪ್ರಾಯೋಗಿಕವಾಗಿ ಪ್ರದರ್ಶಿಸಲು ಚಿತ್ರಮಂದಿರಗಳು ಯೋಚಿಸಿವೆ.

    ಇದನ್ನೂ ಓದಿ: ಸುನಿ ಜನ್ಮದಿನಕ್ಕೆ ‘ರಾಬಿನ್​ ಹುಡ್​’ ಸಿನಿಮಾ ಘೋಷಣೆ; ಪುಷ್ಕರ್​ ಹೆಗಲಿಗೆ ನಿರ್ಮಾಣದ ಹೊಣೆ

    ಈ ನಿಟ್ಟಿನಲ್ಲಿ ಓಟಿಟಿಯಲ್ಲಿ ಬಿಡುಗಡೆಯಾಗಿರುವ ಯಾವ ಚಿತ್ರವನ್ನು ಸಹ ಬಿಡುಗಡೆ ಮಾಡಬಾರದು ಎಂಬ ತೀರ್ಮಾನಕ್ಕೆ ಪಿವಿಆರ್​, ಸಿನಿಪೊಲಿಸ್​, ಇನಾಕ್ಸ್​, ಕಾರ್ನಿವಲ್​ ಮುಂತಾದ ಮಲ್ಟಿಪ್ಲೆಕ್ಸ್​ಗಳು ತೀರ್ಮಾನಕ್ಕೆ ಬಂದಿವೆ ಎಂದು ಹೇಳಲಾಗುತ್ತಿವೆ. ಏಕೆಂದರೆ, ಈ ಹಿಂದೆ ಕೆಲವು ಚಿತ್ರಗಳನ್ನು ಓಟಿಟಿಯಲ್ಲಿ ಬಿಡುಗಡೆ ಮಾಡುವ ಪ್ರಸ್ತಾಪವಾದಾಗ, ಚಿತ್ರಮಂದಿರದವರು ಅದರಲ್ಲೂ ಮಲ್ಟಿಪ್ಲೆಕ್ಸ್​ನವರು ಇದನ್ನು ವಿರೋಧಿಸಿದ್ದರು. ಚಿತ್ರಮಂದಿರಗಳು ಚಿತ್ರಗಳನ್ನೇ ನಂಬಿ ಬದುಕುತ್ತಿರುವುದರಿಂದ, ಅವುಗಳನ್ನು ಕಡೆಗಣಿಸಿ ಓಟಿಟಿಯಲ್ಲಿ ಬಿಡುಗಡೆ ಮಾಡಬಾರದು ಎಂದು ಸೂಚಿಸಿದ್ದವು.

    ಇದನ್ನೂ ಓದಿ: ಉಸಿರಾಟದ ಸಮಸ್ಯೆ ಸುತ್ತ ಹೊಸಬರ ಸಿನಿಮಾ; ‘ಡಿಸೆಂಬರ್​ 24’ ರಂದು ನಡೆಯುವುದೇನು?

    ಆದರೆ, ‘ಗುಲಾಬೋ ಸಿತಾಬೋ’, ‘ದಿಲ್​ ಬೇಚಾರಾ’, ‘ಗುಂಜನ್​ ಸಕ್ಸೇನಾ’, ‘ಸಡಕ್​ 2’, ‘ಶಕುಂತಲಾ ದೇವಿ’, ‘ಖುದಾ ಹಾಫೀಜ್​’ ಸೇರಿದಂತೆ ಹಲವು ಚಿತ್ರಗಳನ್ನು ನೇರವಾಗಿ ಓಟಿಟಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಈಗ ಆ ಚಿತ್ರಗಳನ್ನು ಮಲ್ಟಿಪ್ಲೆಕ್ಸ್​ನಲ್ಲಿ ಬಿಡುಗಡೆ ಮಾಡಬಾರದು ಎಂಬ ತೀರ್ಮಾನಕ್ಕೆ ಹಲವರು ಬಂದಿದ್ದಾರೆನ್ನಲಾಗಿದೆ.

    ಅದರ ಬದಲು, ಲಾಕ್​ಡೌನ್​ಗೂ ಮುನ್ನ ಬಿಡುಗಡೆಯಾದ ‘ತಾನ್ಹಾಜಿ’, ‘ತಪ್ಪಡ್​’, ‘ಮಲಾಂಗ್​’, ‘ಶುಭ್​ ಮಂಗಲ್​ ಜ್ಯಾದಾ ಸಾವಧಾನ್​’, ‘ವಾರ್​’, ‘ಭಾಗಿ 3’ ಮುಂತಾದ ಚಿತ್ರಗಳನ್ನು ದೇಶಾದ್ಯಂತ ಬಿಡುಗಡೆ ಮಾಡುವ ಯೋಚನೆ ಇದ್ದು, ಆ ಚಿತ್ರಗಳ ಮೂಲಕ ಮಲ್ಟಿಪ್ಲೆಕ್ಸ್​ನಲ್ಲಿ ಚಿತ್ರಪ್ರದರ್ಶನ ಪ್ರಾರಂಭವಾಗುವ ಸಾಧ್ಯತೆ ಇದೆ.

    ಪಾಯಲ್‌ಗೆ ಬೇಕಿದೆ ‘ನಿಮ್ಮೆಲ್ಲರ ಆಶೀರ್ವಾದ’; ಭಿನ್ನ ಬೆಡಗಿಯ ವಿಭಿನ್ನ ಸಿನಿಮಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts