More

    ಸದ್ಯಕ್ಕಂತೂ ಓಟಿಟಿಗಳಿಂದ ಚಿತ್ರಮಂದಿರಗಳಿಗೆ ಯಾವುದೇ ಸಮಸ್ಯೆ ಇಲ್ಲ … ಯಾಕೆ ಗೊತ್ತಾ?

    ಬೆಂಗಳೂರು: ಕರೊನಾ ಸಮಯದಲ್ಲ ಓವರ್​ ದಿ ಟಾಪ್​ (ಓಟಿಟಿ) ಪ್ರಭಾವ ಎಷ್ಟಿತ್ತೆಂದರೆ, ಮುಂದಿನ ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ಚಿತ್ರಗಳು ಬಿಡುಗಡೆಯಾಗುವುದು ಕಡಿಮೆಯಾಗುತ್ತದೆ, ಓಟಿಟಿಯಲ್ಲಿ ಬಿಡುಗಡೆಯಾಗುವ ಚಿತ್ರಗಳ ಸಂಖ್ಯೆ ಹೆಚ್ಚಾಗುತ್ತದೆ ಎಂದು ಹೇಳಲಾಗಿತ್ತು. ಆದರೆ, ಈ ವರ್ಷ ಓಟಿಟಿಯಲ್ಲಿ ನೇರವಾಗಿ ಬಿಡುಗಡೆಯಾದ ಚಿತ್ರಗಳ ಸಂಖ್ಯೆ ನೋಡಿದರೆ, ಸದ್ಯಕ್ಕಂತೂ ಓಟಿಟಿಯಿಂದ ಚಿತ್ರಮಂದಿರಗಳಿಗೆ ಯಾವುದೇ ಅಪಾಯವಿಲ್ಲ ಎಂಬ ವಿಷಯ ಸ್ಪಷ್ಟವಾಗುತ್ತದೆ.

    ಇದನ್ನೂ ಓದಿ: ಹೀಗೇ ಮುಂದುವರೆದರೆ ಚಿತ್ರ ಮಾಡೋದೇ ಕಷ್ಟ ಆಗುತ್ತೆ … ಆಶಾ ಪರೇಖ್​ ಬೇಸರ

    ಮುಂದಿನ ವಾರ ಬಿಡುಗಡೆಯಾಗಲಿರುವ ಚಿತ್ರಗಳನ್ನೂ ಸೇರಿಸಿದರೆ, ಈ ವರ್ಷ ಬಿಡುಗಡೆಯಾದ ಒಟ್ಟು ಚಿತ್ರಗಳ ಸಂಖ್ಯೆ 215 ಮೀರುತ್ತದೆ. ಈ ಪೈಕಿ, ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾದ ಚಿತ್ರಗಳ ಸಂಖ್ಯೆ ಎಷ್ಟು ಎಂದು ಹುಡುಗಿದರೆ ಆಶ್ಚರ್ಯವಾಗುತ್ತದೆ. ಏಕೆಂದರೆ, ಒಟ್ಟಾರೆ ಬಿಡುಗಡೆಯಾದ ಚಿತ್ರಗಳ ಪೈಕಿ ಶೇ.10ರಷ್ಟೂ ಇಲ್ಲ. ಈ ವರ್ಷ ಓಟಿಟಿಯಲ್ಲಿ ಬಿಡುಗಡೆಯಾಗಿರುವ ಚಿತ್ರಗಳ ಸಂಖ್ಯೆ ಕೇವಲ ನಾಲ್ಕು ಎಂದರೆ ಆಶ್ಚರ್ಯವಾಗುತ್ತದೆ.

    ಹೌದು, ಈ ವರ್ಷ ಚಿತ್ರಂದಿರಗಳನ್ನು ಬಿಟ್ಟು ನೇರವಾಗಿ ಓಟಿಟಿಯಲ್ಲಿ ಬಿಡುಗಡೆಯಾದ ಚಿತ್ರಗಳೆಂದರೆ ಅದು ‘ಮ್ಯಾನ್​ ಆಫ್ ದಿ ಮ್ಯಾಚ್​’, ‘ಒನ್​ ಕಟ್​ ಟೂ ಕಟ್​’, ‘ಫ್ಯಾಮಿಲಿ ಪ್ಯಾಕ್​’ ಮತ್ತು ‘ಡಿಯರ್​ ವಿಕ್ರಮ್​’ ಚಿತ್ರಗಳು. ಈ ಪೈಕಿ ಮೊದಲ ಮೂರು ಚಿತ್ರಗಳು ಓಟಿಟಿಗೆಂದೇ ನಿರ್ಮಾಣವಾದಂತವು. ‘ಡಿಯರ್​ ವಿಕ್ರಮ್​’ ಚಿತ್ರವು ಚಿತ್ರಮಂದಿರಕ್ಕೆಂದು ತಯಾರಾಗಿದ್ದರೂ, ಕೊನೆಯ ಕ್ಷಣದಲ್ಲಿ ಚಿತ್ರಮಂದಿರಗಳನ್ನು ಬಿಟ್ಟು ನೇರವಾಗಿ ವೂಟ್​ನಲ್ಲಿ ಬಿಡುಗಡೆ ಮಾಡಲಾಯಿತು.

    ಈ ನಾಲ್ಕು ಚಿತ್ರಗಳನ್ನು ಹೊರತುಪಡಿಸಿದರೆ, ಮಿಕ್ಕಂತೆ ಹಲವು ಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ನಂತರ ಓಟಿಟಿಗೆ ಬಂದಿವೆ. ‘ಜೇಮ್ಸ’, ‘ಕೆಜಿಎಫ್​ 2’, ‘ಅವತಾರ ಪುರುಷ’, ‘ಸಕುಟುಂಬ ಸಮೇತ’, ’21 ಹವರ್ಸ್​’, ‘777 ಚಾರ್ಲಿ’, ‘ಶುಗರ್​ಲೆಸ್​’, ‘ವಿಕ್ರಾಂತ್​ ರೋಣ’, ‘ಪೆಟ್ರೋಮ್ಯಾಕ್ಸ್​’, ‘ನೋಡಿ ಸ್ವಾಮಿ ವನು ಇರೋದೇ ಹೀಗೆ’, ‘ಲವ್​ 360’, ‘ಗುರು ಶಿಷ್ಯರು’, ‘ಕಾಂತಾರ’ ಮುಂತಾದ ಚಿತ್ರಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಓಟಿಟಿಗೆ ಬಂದಿವೆ. ಚಿತ್ರಮಂದಿರಗಳಲ್ಲಿ ನಿರ್ಮಾಪಕರಿಗೆ ದೊಡ್ಡ ದುಡ್ಡು ಬರದಿದ್ದರೂ ಓಟಿಟಿಯ ಮೂಲಕ ಬಿಡುಗಡೆಯಾಗಿ ಒಳ್ಳೆಯ ಹಣ ಸಂಪಾದಿಸಿದೆ.

    ಇದನ್ನೂ ಓದಿ: ಮೇ ಅಟಲ್​ ಹೂಂ’ ಚಿತ್ರದ ಫಸ್ಟ್​ಲುಕ್​ ಬಿಡುಗಡೆ; ವಾಜಪೇಯಿ ಪಾತ್ರಧಾರಿ ಯಾರಿರಬಹುದು ಹೇಳಿ?

    ಓಟಿಟಿಯಿಂದ ಚಿತ್ರಮಂದಿರಗಳಿಗೆ ಯಾವುದೇ ಸಮಸ್ಯೆ ಇರದಿದ್ದರೂ, ಈ ವರ್ಷ ಚಿತ್ರಮಂದಿರಗಳಿಗೂ ಜನ ಬಂದಿದ್ದು ಕಡಿಮೆಯೇ. ಕೆಲವು ಚಿತ್ರಗಳನ್ನು ಹೊರತುಪಡಿಸಿದರೆ, ಈ ವರ್ಷ, ಹಲವು ಚಿತ್ರಗಳನ್ನು ನೋಡಲು ಜನ ಚಿತ್ರಮಂದಿರಗಳತ್ತ ಬರಲೇ ಇಲ್ಲ.

    9 ಹೊಸ ಚಿತ್ರಗಳ ಬಿಡುಗಡೆಯೊಂದಿಗೆ ಈ ವರ್ಷ ಮುಕ್ತಾಯ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts