More

    9 ಹೊಸ ಚಿತ್ರಗಳ ಬಿಡುಗಡೆಯೊಂದಿಗೆ ಈ ವರ್ಷ ಮುಕ್ತಾಯ …

    ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಈ ವರ್ಷ ಈಗಾಗಲೇ 200 ಪ್ಲಸ್​ ಚಿತ್ರಗಳು ಬಿಡುಗಡೆಯಾಗಿವೆ. ವರ್ಷ ಮುಗಿಯುವುದಕ್ಕೆ ಇನ್ನೊಂದು ವಾರವಿದ್ದು, ಈ ಶುಕ್ರವಾರ ಒಂಬತ್ತು ಹೊಸ ಕನ್ನಡ ಚಿತ್ರಗಳು ಬಿಡುಗಡೆಯಾಗುವು ಸಾಧ್ಯತೆ ಇದೆ.

    ಇದನ್ನೂ ಓದಿ: ಕಾಲಿವುಡ್​, ಟಾಲಿವುಡ್​ ನಂತರ ಬಾಲಿವುಡ್​ನಲ್ಲೂ ಪೂಜಾಗೆ ಸೋಲು

    ಡಿಸೆಂಬರ್​ ತಿಂಗಳ ಮೊದಲ ಮೂರು ವಾರಗಳಲ್ಲಿ 26 ಚಿತ್ರಗಳು ಬಿಡುಗಡೆಯಾಗಿದ್ದವು. ಆದರೆ, ಕಳೆದ ಶುಕ್ರವಾರ (ಡಿ.23) ಕೇವಲ ಮೂರು ಚಿತ್ರಗಳು ಮಾತ್ರ ಬಿಡುಗಡೆಯಾಗಿದ್ದವು. ಅದಕ್ಕೆ ಕಾರಣ, ‘ವೇದ’. ಶಿವರಾಜಕುಮಾರ್​ ಅವರ 125ನೇ ಚಿತ್ರವಾದ ‘ವೇದ’ ಬಿಡುಗಡೆಯಾಗಿದ್ದರಿಂದ ಬಹಳ ನಿರ್ಮಾಪಕರು, ತಮ್ಮ ಚಿತ್ರಗಳನ್ನು ಆ ಚಿತ್ರದ ಎದುರು ಬಿಡುಗಡೆ ಮಾಡುವುದಕ್ಕೆ ಹಿಂದೇಟು ಹಾಕಿದ್ದರು. ಹಾಗಾಗಿ, ‘ವೇದ’ ಜತೆಗೆ ‘ಹೊಸ ದಿನಚರಿ’ ಮತ್ತು ‘ಐಹೊಳೆ’ ಎಂಬ ಇನ್ನೆರಡು ಚಿತ್ರಗಳು ಮಾತ್ರ ಬಿಡುಗಡೆಯಾದವು.

    ಆದರೆ, ಈ ವಾರ ಹಾಗಿಲ್ಲ. ಒಂಬತ್ತು ಚಿತ್ರಗಳು ಬಿಡುಗಡೆಯಾಗುವುದಕ್ಕೆ ಸಜ್ಜಾಗಿವೆ. ಯೋಗರಾಜ್​ ಭಟ್​ ನಿರ್ಮಾಣದ ‘ಪದವಿಪೂರ್ವ’, ಧನಂಜಯ್​ ಅಭಿನಯದ ‘ಒನ್ಸ್​ ಅಪಾನ್​ ಎ ಟೈಮ್​ ಇನ್​ ಜಮಾಲಿಗುಡ್ಡ’, ಯೋಗಿ ಅಭಿನಯದ ‘ನಾನು ಅದು ಮತ್ತು ಸರೋಜ’ ಚಿತ್ರಗಳು ಒಂದಿಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿವೆ.

    ಮಿಕ್ಕಂತೆ ‘ಮೇಡ್​ ಇನ್​ ಬೆಂಗಳೂರು’, ‘ಲವ್​ ಸ್ಟೋರಿ 1982’, ‘ಜೋರ್ಡಾನ್​’, ‘ದ್ವಿಪಾತ್ರ’, ‘ಆಲ್ಫಾ’ ಮತ್ತು ‘ರುಧೀರ ಕಣಿವೆ’ ಚಿತ್ರಗಳು ಬಿಡುಗಡೆಯಾಗುತ್ತಿವೆ. ಈ ಪೈಕಿ ಆರು ಚಿತ್ರಗಳಲ್ಲಿ ಹೊಸಬರೇ ತುಂಬಿದ್ದಾರೆ. ಈ ಚಿತ್ರಗಳ ಪೈಕಿ ಒಂದೆರಡರಲ್ಲಿ ಜನಪ್ರಿಯ ಪೋಷಕ ಕಲಾವಿದರು ಕಾಣಿಸಿಕೊಂಡಿರುವುದು ಬಿಟ್ಟರೆ, ಮಿಕ್ಕಂತೆ ನಾಯಕ-ನಾಯಕಿ ತಂತ್ರಜ್ನರು ಎಲ್ಲರೂ ಹೊಸಬರೇ. ವಿಶೇಷವೆಂದರೆ, ಈ ಒಂಬತ್ತು ಚಿತ್ರಗಳ ಪೈಕಿ ಎಂಟು ನಿರ್ದೇಶಕರು ಹೊಸಬರು. ‘ಒನ್ಸ್​ ಅಪಾನ್​ ಎ ಟೈಮ್​ ಇನ್​ ಜಮಾಲಿಗುಡ್ಡ’ ಚಿತ್ರವನ್ನು ನಿರ್ದೇಶಿಸಿರುವ ಕುಶಾಲ್​ ಗೌಡ ಮಾತ್ರ ಸ್ವಲ್ಪ ಹಳಬರಾಗಿದ್ದು, ಇದಕ್ಕೂ ಮುನ್ನ ‘ಕನ್ನಡಕ್ಕಾಗಿ ಒಂದನ್ನು ಒತ್ತಿ’ ಎಂಬ ಚಿತ್ರವನ್ನು ನಿರ್ದೇಶಿಸಿದ್ದರು.

    ಇದನ್ನೂ ಓದಿ: ಹೀಗೇ ಮುಂದುವರೆದರೆ ಚಿತ್ರ ಮಾಡೋದೇ ಕಷ್ಟ ಆಗುತ್ತೆ … ಆಶಾ ಪರೇಖ್​ ಬೇಸರ

    ಅಲ್ಲಿಗೆ ಈ ವಾರ 9 ಚಿತ್ರಗಳು ಬಿಡುಡೆಯಾಗುವುದಕ್ಕೆ ಸಿದ್ಧತೆ ನಡೆದಿದೆ. ಈ ಸಂಖ್ಯೆ ಜಾಸ್ತಿಯಾಗಬಹುದು ಅಥವಾ ಕಡಿಮೆಯೂ ಆಗಬಹುದು. ಸದ್ಯಕ್ಕಂತೂ ಇಷ್ಟು ಚಿತ್ರಗಳು ಘೋಷಣೆಯಾಗಿದ್ದು, ಅಂತಿಮವಾಗಿದ್ದು ಎಷ್ಟು ಚಿತ್ರಗಳು ತೆರೆ ಕಾಣುತ್ತವೆ ಎಂಬುದು ಶುಕ್ರವಾರ ಸ್ಪಷ್ಟವಾಗಲಿವೆ.

    ‘ಮೈ ಅಟಲ್​ ಹೂಂ’ ಚಿತ್ರದ ಫಸ್ಟ್​ಲುಕ್​ ಬಿಡುಗಡೆ; ವಾಜಪೇಯಿ ಪಾತ್ರಧಾರಿ ಯಾರಿರಬಹುದು ಹೇಳಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts