More

    ‘ಮೈ ಅಟಲ್​ ಹೂಂ’ ಚಿತ್ರದ ಫಸ್ಟ್​ಲುಕ್​ ಬಿಡುಗಡೆ; ವಾಜಪೇಯಿ ಪಾತ್ರಧಾರಿ ಯಾರಿರಬಹುದು ಹೇಳಿ?

    ಮುಂಬೈ: ಭಾರತದ ಮಾಜಿ ಪ್ರಧಾನಿ ಅಟಲ್​ ಬಿಹಾರಿ ವಾಜಪೇಯಿ ಅವರ ಹುಟ್ಟುಹಬ್ಬ ಇಂದು. ಈ ಸಂದರ್ಭದಲ್ಲಿ ಅವರ ಬಯೋಪಿಕ್​ನ ಫಸ್ಟ್​ಲುಕ್​ ಬಿಡುಗಡೆಯಾಗಿದೆ. ಅಷ್ಟೇ ಅಲ್ಲ, ವಾಜಪೇಯಿ ಪಾತ್ರಧಾರಿಯ ಮೊದಲ ನೋಟ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗುತ್ತಿದೆ.

    ಇದನ್ನೂ ಓದಿ: ಕಾಲಿವುಡ್​, ಟಾಲಿವುಡ್​ ನಂತರ ಬಾಲಿವುಡ್​ನಲ್ಲೂ ಪೂಜಾಗೆ ಸೋಲು

    ವಾಜಪೇಯಿ ಕುರಿತು ‘ಮೈ ಅಟಲ್​ ಹೂಂ’ ಎಂಬ ಬಯೋಪಿಕ್​ ನಿರ್ಮಾಣವಾಗಲಿದೆ ಎಂಬ ಸುದ್ದಿಯೊಂದು ಕೆಲವು ದಿನಗಳ ಹಿಂದೆ ಕೇಳಿ ಬಂದಿತ್ತು. ಆದರೆ, ವಾಜಪೇಯಿ ಅವರ ಪಾತ್ರವನ್ನು ಯಾರು ಮಾಡುತ್ತಿದ್ದಾರೆ ಎಂಬ ವಿಷಯ ಬಹಿರಂಗವಾಗಿರಲಿಲ್ಲ. ಕೊನೆಗೆ ವಾಜಪೇಯಿ ಅವರ ಪಾತ್ರವನ್ನು ಮನೋಜ್​ ತ್ರಿಪಾಠಿ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ. ವಾಜಪೇಯಿ ಆಗಿ ಮನೋಜ್​ ತ್ರಿಪಾಠಿ ಹೇಗೆ ಕಾಣಿಸುತ್ತಾರೆ ಎಂದು ಚಿತ್ರತಂಡ ಬಹಿರಂಗಗೊಳಿಸಿರಲಿಲ್ಲ. ಈಗ ವಾಜಪೇಯಿ ಹುಟ್ಟುಹಬ್ಬದ ಪ್ರಯುಕ್ತ, ಚಿತ್ರದ ಫಸ್ಟ್​ಲುಕ್ ಬಿಡುಗಡೆಯಾಗಿದೆ. ಇದನ್ನು ನೋಡಿದವರು ಇದು ನಿಜಕ್ಕೂ ಮನೋಜ್​ ತ್ರಿಪಾಠಿ ಅವರೇನಾ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

    ಈ ಚಿತ್ರವು ‘ದಿ ಅಂಟೋಲ್ಡ್​ ವಾಜಪೇಯಿ: ಪೊಲಿಟಿಷಿಯನ್​ ಆ್ಯಂಡ್​ ಪ್ಯಾರಾಡಾಕ್ಸ್​’ ಎಂಬ ಪುಸ್ತಕವನ್ನು ಆಧರಿಸಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ನಿರ್ದೇಶಕ ರವಿ ಜಾಧವ್​ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

    ಇದನ್ನೂ ಓದಿ: ‘ಆದಿತ್ಯ 369’ ಚಿತ್ರದ ಸೀಕ್ವೆಲ್​ ಬರೋದು ಗ್ಯಾರಂಟಿ … ಹೆಸರೇನು ಗೊತ್ತಾ?

    ‘ಮೈ ಅಟಲ್​ ಹೂಂ’ ಚಿತ್ರವನ್ನು ವಿನೋದ್​ ಭಾನುಶಾಲಿ, ಸಂದೀಪ್​ ಸಿಂಗ್​ ಮುಂತಾದವರು ನಿರ್ಮಿಸುತ್ತಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ. ವಾಜಪೇಯಿ ಅವರ 99ನೇ ಜನ್ಮದಿನದ ಪ್ರಯುಕ್ತ ಈ ಚಿತ್ರವು 2023ರ ಕ್ರಿಸ್ಮಸ್​ ಸಂದರ್ಭದಲ್ಲಿ ದೇಶಾದ್ಯಂತ ಬಿಡುಗಡೆಯಾಗುತ್ತಿದೆ.

    ಹೀಗೇ ಮುಂದುವರೆದರೆ ಚಿತ್ರ ಮಾಡೋದೇ ಕಷ್ಟ ಆಗುತ್ತೆ … ಆಶಾ ಪರೇಖ್​ ಬೇಸರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts