More

    ಕೊನೆಗೂ OTTಗೆ ಬಂತು “ದಿ ಕೇರಳ ಸ್ಟೋರಿ”; ಯಾವಾಗ, ಎಲ್ಲಿ ವೀಕ್ಷಣೆ ಇಲ್ಲಿದೆ ಮಾಹಿತಿ

    ಮುಂಬೈ: ಕಳೆದ ವರ್ಷ ಬಿಡುಗಡೆಗೊಂಡು ದೇಶದಲ್ಲಿ ಭಾರೀ ಸಂಚಲನ ಸೃಷ್ಟಿಸಿದ “ದಿ ಕೇರಳ ಸ್ಟೋರಿ” ಚಿತ್ರವು ಒಟಿಟಿ ಅಂಗಳಕ್ಕೆ ಕಾಲಿಡಲು ಸಜ್ಜಾಗಿದ್ದು, ಸಿನಿಮಾವನ್ನು ವೀಕ್ಷಿಸಲು ಕಾತುರದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಶುಭ ಸುದ್ದಿ ನೀಡಿದೆ.

    ಕಳೆದ ವರ್ಷ ಚಿತ್ರಮಂದಿರದಲ್ಲಿ ಬಿಡುಗಡೆಗೊಂದು ನೂರಾರು ಕೋಟಿ ರೂಪಾಯಿ ಕಮಾಯಿ ಮಾಡಿದ್ದ ಚಿತ್ರದ ಒಟಿಟಿ ಬಿಡುಗಡೆಗೆ ಹತ್ತು ಹಲವು ವಿಘ್ನಗಳು ಎದುರಾಗಿದ್ದವು. ಅದೆಲ್ಲವನ್ನೂ ನಿವಾರಿಸಿಕೊಂಡು ಈಗ ಒಟಿಟಿಗೆ ಈ ಸಿನಿಮಾ ಎಂಟ್ರಿ ನೀಡುತ್ತಿರುವುದು ವಿಶೇಷವಾಗಿದೆ.

    ಸುದೀಪ್ತೋ ಸೇನ್​ ನಿರ್ದೇಶನದ ನಟಿ ಆದಾ ಶರ್ಮಾ ನಟನೆಯ “ದಿ ಕೇರಳ ಸ್ಟೋರಿ” ಜೀ 5 ಪಾಲಾಗಿದ್ದು, ಫೆಬ್ರವರಿ 16ರಂದು ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ವಿವಾದಿತ ಕಥಾವಸ್ತು ಈ ಸಿನಿಮಾದಲ್ಲಿ ಇದೆ ಎಂಬ ಕಾರಣಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇದೇ ಕಾರಣದಿಂದ ಚಿತ್ರದ ಒಟಿಟಿ ರಿಲೀಸ್​ ಕೂಡ ತಡವಾಗಿತ್ತು. ಚಿತ್ರಮಂದಿರದಲ್ಲಿ ತೆರೆಕಂಡು ಬರೋಬ್ಬರಿ 9 ತಿಂಗಳು ಕಳೆದ ಬಳಿಕ ಈ ಸಿನಿಮಾ ಒಟಿಟಿಯಲ್ಲಿ ಪ್ರಸಾರಕ್ಕೆ ಸಜ್ಜಾಗಿದೆ.

    ಇದನ್ನೂ ಓದಿ: ಉತ್ತರಾಖಂಡ ವಿಧಾನಸಭೆಯಲ್ಲಿ UCC ಮಂಡನೆ; ಲಿವ್-ಇನ್ ರಿಲೇಷನ್​ಶಿಪ್​ಗೆ ಬಂತು ವಿಶೇಷ ಕಾನೂನು

    ಸತ್ಯ ಘಟನೆಗಳನ್ನು ಆಧರಿಸಿ ಮಾಡಲಾಗಿರುವ “ದಿ ಕೇರಳ ಸ್ಟೋರಿ” ಚಿತ್ರವು ವಿಶ್ವದಾದ್ಯಂತ 303 ಕೋಟಿ ರೂಪಾಯೊ ಕಮಾಯಿ ಮಾಡಿತ್ತು. ಸಾಮಾನ್ಯವಾಗಿ ಚಿತ್ರಮಂದಿರದಲ್ಲಿ ಹೀಗೆ ಸೂಪರ್​ ಹಿಟ್​ ಆದ ಸಿನಿಮಾವನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಲು ಹಲವು ಒಟಿಟಿ ಸಂಸ್ಥೆಗಳು ಮುಗಿಬೀಳುತ್ತವೆ. ವಿವಾದಾತ್ಮಕ ಕಥಾಹಂದರ ಹೊಂದಿರುವ ‘ದಿ ಕೇರಳ ಸ್ಟೋರಿ’ ಸಿನಿಮಾದ ಒಟಿಟಿ ಹಕ್ಕುಗಳನ್ನು ಖರೀದಿಸಲು ಯಾವ ಸಂಸ್ಥೆಗಳೂ ಆಸಕ್ತಿ ತೋರಿಸಿರಲಿಲ್ಲ. 

    ಕೇರಳದಲ್ಲಿ ಹಿಂದೂ ಯುವತಿಯರನ್ನು ಮತಾಂತರ ಮಾಡಿ, ನಂತರ ಅವರನ್ನು ಬೇರೆ ರಾಷ್ಟ್ರಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ತೋರಿಸಲಾಗಿತ್ತು. ಸಿನಿಮಾದ ಟೀಸರ್​ನಲ್ಲಿ ಅಂಕಿ-ಅಂಶಗಳು ತಪ್ಪಾಗಿದ್ದವು ಮತ್ತು ಘಟನೆಗಳನ್ನು ವೈಭವೀಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದವು ಮತ್ತು ಹಲವು ರಾಜ್ಯಗಳಲ್ಲಿ ಚಿತ್ರದ ಪ್ರದರ್ಶನವನ್ನು ಬ್ಯಾನ್​ ಮಾಡಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts