More

    ಅಶ್ಲೀಲ ಚಿತ್ರ ವೀಕ್ಷಿಸಿ ಸಹೋದರಿ ಮೇಲೆ Aತ್ಯಾಚಾರ ಎಸಗಿ ಕೊಲೆ ಮಾಡಿದ ಪಾಪಿ ಸಹೋದರ

    ಲಖನೌ: ಯುವಕನೋರ್ವ ಮೊಬೈಲ್​ನಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸಿ ಅಪ್ರಾಪ್ತ ವಯಸ್ಕ ಸಹೋದರಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆ ಉತ್ತರಪ್ರದೇಶದ ಕಸ್​ಗಂಜ್​ ಜಿಲ್ಲೆಯಲ್ಲಿ ನಡೆದಿದೆ. ಘಟನೆ ಸಂಬಂಧ ಪೊಲೀಸರು ಆರೋಪಿ ಸಂಜು (19) ವಶಕ್ಕೆ ಪಡೆದಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.

    ಈ ಕುರಿತು ಪ್ರತಿಕ್ರಿಯಿಸಿರುವ ಕಸ್​ಗಂಜ್​ ವಿಭಾಗದ ಪಟಿಯಾಲಿ ಕೊತ್ವಾಲಿ ಪೊಲೀಸ್​ ಠಾಣಾಧಿಕಾರಿ ಗೋವಿಂದ್ ಬಲ್ಲಭ್ ಶರ್ಮಾ, ಫೆಬ್ರವರಿ 03ರಂದು ಘಟನೆ ನಡೆದಿದ್ದು, ಆರೋಪಿಯನ್ನು ಸೋಮವಾರ ತಡರಾತ್ರಿ ಬಂಧಿಸಲಾಗಿದೆ. ಆರೋಪಿ ಸಂಜು ತಂದೆ ವರ್ಷದ ಹಿಂದೆ ತೀರಿಕೊಂಡಿದ್ದು, ಆತ ತನ್ನ ತಾಯಿ ಹಾಗೂ ತಂಗಿಯೊಂದಿಗೆ ಜೀವನ ನಡೆಸುತ್ತಿದ್ದ.

    ಇದನ್ನೂ ಓದಿ: ಸಹ ಆಟಗಾರನಿಗೆ ಮಧ್ಯದ ಬೆರಳು ತೋರಿಸಿದ ಕೇನ್​ ವಿಲಿಯಮ್ಸನ್; ವಿಡಿಯೋ ವೈರಲ್​ ​

    ಫೆಬ್ರವರಿ 3 ರಂದು ರಾತ್ರಿ ತನ್ನ ತಾಯಿ ತನ್ನ ಚಿಕ್ಕಪ್ಪನ ಮನೆಗೆ ಹೋದಾಗ, ಸಂಜು ತನ್ನ ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರಗಳನ್ನು ನೋಡಿದ್ದಾನೆ. ಇದಾದ ಬಳಿಕ ಮನೆಯಲ್ಲಿ ಯಾರು ಇಲ್ಲ ಎಂಬುದನ್ನು ತಿಳಿದುಕೊಂಡ ಆರೋಪಿ ಅಪ್ರಾಪ್ತ ವಯಸ್ಕ ಸಹೋದರಿ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರದ ನಂತರ ಆಕೆಯ ಬಾಯಿ ಮುಚ್ಚಲು ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದಾನೆ.

    ಸಂತ್ರಸ್ತೆಯ ತಾಯಿ ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದ್ದು, ಅವರು ದಾಖಲಿಸಿದ ದೂರನ್ನು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಕಸ್​ಗಂಜ್​ ವಿಭಾಗದ ಪಟಿಯಾಲಿ ಕೊತ್ವಾಲಿ ಪೊಲೀಸ್​ ಠಾಣಾಧಿಕಾರಿ ಗೋವಿಂದ್ ಬಲ್ಲಭ್ ಶರ್ಮಾ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts