More

    ಸಹ ಆಟಗಾರನಿಗೆ ಮಧ್ಯದ ಬೆರಳು ತೋರಿಸಿದ ಕೇನ್​ ವಿಲಿಯಮ್ಸನ್; ವಿಡಿಯೋ ವೈರಲ್​ ​

    ನವದೆಹಲಿ: ನ್ಯೂಜಿಲೆಂಡ್​ ತಂಡದ ಸ್ಟಾರ್​ ಆಟಗಾರ ಕೇನ್ ವಿಲಿಯಮ್ಸನ್ ತಮ್ಮ ತಾಳ್ಮೆ ಹಾಗೂ ವಿನಮ್ರ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಶಾಂತ ಸ್ವಭಾವದಿಂದಾಗಿ ಪ್ರಪಂಚದಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿರುವ ಕೇನ್​ ವಿಲಿಯಮ್ಸನ್​ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಅವರಂತೆ ಎಂದು ಹಲವರು ಹೇಳಿದ್ದಾರೆ. ಆದರೆ, ವಿಚಾರ ಒಂದಕ್ಕೆ ಕ್ರೀಡಾಭಿಮಾನಿಗಳ ಗಮನವನ್ನು ಕೇನ್​ ವಿಲಿಯಮ್ಸನ್​ ಸೆಳೆದಿದ್ದಾರೆ.

    ಕೇನ್​ ವಿಲಿಯಮ್ಸನ್​ ಸಹ ಆಟಗಾರನೊಬ್ಬನಿಗೆ ಮಧ್ಯದ ಬೆರಳು ತೋರಿಸುತ್ತಿರುವುದನ್ನು ನೋಡಬಹುದಾಗಿದೆ. ಈ ವಿಡಿಯೋ ವೈರಲ್​ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ ಮತ್ತು ಪರ-ವಿರೋಧದ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

    ವೈರಲ್​ ಆಗಿರುವ ವಿಡಿಯೋದಲ್ಲಿ ಮೈದಾನದಲ್ಲಿ ಸ್ಟ್ರೆಷ್​ ಮಾಡುತ್ತಿರುವ ಕೇನ್​ ವಿಲಿಯಮ್ಸನ್​ಗೆ ವೇಗವಾಗಿ ಬಂದ ಚೆಂಡೊಂದು ಬಂದು ತಗಲುತ್ತದೆ. ಇದಕ್ಕೆ ತಕ್ಷಣವೇ ಪ್ರತಿಕ್ರಿಯಿಸಿದ ವಿಲಿಯಮ್ಸನ್​ ಸಹ ಆಟಗಾರನತ್ತ ಮಧ್ಯದ ಬೆರಳನ್ನು ತೋರಿಸಿ ತಮ್ಮ ವ್ಯಾಯಾಮವನ್ನು ಮುಂದುವರೆಸುತ್ತಾರೆ. ಆದರೆ, ಅವರು ಯಾವ ಆಟಗಾರನಿಗೆ ಆ ರೀತಿ ತೋರಿಸಿದರು ಎಂಬುದು ಈವರೆಗೆ ಸ್ಪಷ್ಟವಾಗಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts