More

    ರಜನೀಕಾಂತ್​ ವಿರುದ್ಧ ಹೈಕೋರ್ಟ್​ ಗರಂ- ದಂಡಕ್ಕೆ ಬೆದರಿದ ಸೂಪರ್​ಸ್ಟಾರ್​!

    ಚೆನ್ನೈ: ತಮಗೆ ಚೆನ್ನೈ ಪಾಲಿಕೆ ನೀಡಿದ್ದ ತೆರಿಗೆ ನೋಟಿಸ್​ ಅನ್ನು ಪ್ರಶ್ನಿಸಿ ಚಿತ್ರನಟ ರಜನೀಕಾಂತ್​ ವಿರುದ್ಧ ಹೈಕೋರ್ಟ್​ ಅಸಮಾಧಾನ ವ್ಯಕ್ತಪಡಿಸಿದೆ.

    ಕಲ್ಯಾಣ ಮಂಟಪಕ್ಕೆ 6.50 ಲಕ್ಷ ಆಸ್ತಿ ತೆರಿಗೆ ವಿಧಿಸಿದ್ದ ಗ್ರೇಟರ್ ಚೆನ್ನೈ ಕಾರ್ಪೋರೇಷನ್ ವಿರುದ್ಧ ರಜನೀಕಾಂತ್​ ಕೋರ್ಟ್​ ಮೆಟ್ಟಿಲೇರಿದ್ದರು. ತಮಿಳುನಾಡಿನ ಕೊಡಂಬಕ್ಕಂನಲ್ಲಿ ರಜನಿಕಾಂತ್ ಅವರ ಕಲ್ಯಾಣ ಮಂಟಪವಿದ್ದು, ಅದರ ತೆರಿಗೆ ಹಣವನ್ನು ಕಟ್ಟುವಂತೆ ಜಾರಿ ಮಾಡಲಾಗಿದ್ದ ನೋಟಿಸನ್ನು ಅವರು ಪ್ರಶ್ನಿಸಿದ್ದರು.

    ಕಳೆದ ಏಪ್ರಿಲ್​ನಿಂದ ಸೆಪ್ಟಂಬರ್​ವರೆಗೆ ಅರ್ಧ ವರ್ಷದ ತೆರಿಗೆ ನೀಡುವಂತೆ ನೋಟಿಸ್​ನಲ್ಲಿ ತಿಳಿಸಲಾಗಿತ್ತು. ಆದರೆ ಲಾಕ್​ಡೌನ್​ ಹಾಗೂ ಕರೊನಾ ವೈರಸ್​ ಕಾರಣ ನೀಡಿದ್ದ ‘ಸೂಪರ್​ಸ್ಟಾರ್’​, ಈ ಅವಧಿಯಲ್ಲಿ ಯಾವುದೇ ಆದಾಯ ಇಲ್ಲ, ಆದ್ದರಿಂದ ತೆರಿಗೆ ಕಟ್ಟುವುದು ಕಷ್ಟ ಎಂದು ಕೋರ್ಟ್​ಗೆ ತಿಳಿಸಿದ್ದರು. ‘ನಿಯಮಿತವಾಗಿ ತೆರಿಗೆ ಪಾವತಿಸುತ್ತಿದ್ದೇವೆ. ಕೊನೆಯದಾಗಿ ಫೆಬ್ರವರಿ 14ರಂದು ತೆರೆಗೆ ಪಾವತಿಸಲಾಗಿದೆ. ಲಾಕ್​ಡೌನ್​ಗೂ ಮೊದಲು ಹಾಲ್ ಬುಕ್ ಮಾಡಿದ್ದ ಜನರಿಗೆ ಸರ್ಕಾರದ ಆದೇಶದಂತೆ ಹಣ ಮರುಪಾವತಿಸಿದ್ದೇವೆ. ನಂತರ ತೆರಿಗೆ ಕಟ್ಟುವುದು ಕಷ್ಟವಾಗುತ್ತಿದೆ ಎಂದಿದ್ದರು.

    ಇದನ್ನೂ ಓದಿ: ಬಾಲಿವುಡ್​ ಸ್ಟ್ರೈಕ್ಸ್​ ಬ್ಯಾಕ್​ಗೆ ಕಾರಣ ಫರ್ಹಾನ್​ ಅಖ್ತರ್​ ಅಂತೆ …

    ಇವರ ಅರ್ಜಿಗೆ ನ್ಯಾಯಮೂರ್ತಿ ಅನಿತಾ ಸುಮಂತ್​, ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ಅರ್ಜಿಯನ್ನು ವಜಾಗೊಳಿಸಿರುವ ಕೋರ್ಟ್​, ಅದನ್ನು ವಾಪಸ್​ ಪಡೆದುಕೊಳ್ಳಿ, ಇಲ್ಲವೇ ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಿದ್ದಕ್ಕಾಗಿ ದಂಡ ವಿಧಿಸಲಾಗುವುದು ಎಂದು ರಜನಿಕಾಂತ್ ಪರ ವಕೀಲರಿಗೆ ಎಚ್ಚರಿಕೆ ನೀಡಿತು. ನೋಟಿಸ್​ಗೆ ಸಂಬಂಧಿಸಿದಂತೆ ಪಾಲಿಕೆಗೆ ಉತ್ತರಿಸುವುದನ್ನು ಬಿಟ್ಟು ನೋಟಿಸ್​ ಕೊಟ್ಟು 10 ದಿನದೊಳಗೇ ಕೋರ್ಟ್​ಗೆ ಬಂದಿರುವುದಕ್ಕೆ ನ್ಯಾಯಮೂರ್ತಿಗಳು ತರಾಟೆಗೆ ತೆಗೆದುಕೊಂಡರು.

    ಈ ಹಿನ್ನೆಲೆಯಲ್ಲಿ ಅರ್ಜಿಯನ್ನು ರಜನೀಕಾಂತ್​ ಪರ ವಕೀಲರು ಹಿಂದಕ್ಕೆ ಪಡೆದರು.

    ಸಿಎಂ ಎದುರು ಹೊಸ ಬೇಡಿಕೆ ಇಟ್ಟ ಶ್ರೀರಾಮುಲು? ಅವರ ಆಸೆ ಏನು ಗೊತ್ತಾ?

    ಮುಸ್ಲಿಂ ಯುವತಿಯ ಸ್ನೇಹಕ್ಕಾಗಿ ಬಿತ್ತು ಮತ್ತೊಂದು ಹೆಣ: ಐವರಿಂದ ಹಿಂದೂ ಯುವಕನ ಹತ್ಯೆ!

    ಮುಚ್ಚಲಿದೆ ಯಾಹೂ ಡಾಟ್​ ಕಾಮ್​- ಬಳಕೆದಾರರಿಗೆ ಇಲ್ಲಿದೆ ಮಹತ್ವದ ಮಾಹಿತಿ…

    ಲಂಚ ಪ್ರಕರಣದಲ್ಲಿ ಬಂಧನ: ಜೈಲಿನಲ್ಲೇ ತಹಶೀಲ್ದಾರ್​ ಆತ್ಮಹತ್ಯೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts