More

    ಮನೆಯೇ ಜೈಲಾಯಿತು!; ಅಮಿತಾಬ್​ ಬಚ್ಚನ್​ ಹೀಗೆ ಹೇಳಿದ್ದೇಕೆ?

    ಕರೊನಾ ಸೋಂಕಿಗೆ ತುತ್ತಾಗಿ ಕಳೆದ ಕೆಲ ವಾರ ಆಸ್ಪತ್ರೆಯಲ್ಲಿ ಕಾಲ ಕಳೆದಿದ್ದ ಬಾಲಿವುಡ್​ ಬಿಗ್​ ಬಿ ಅಮಿತಾಬ್​ ಬಚ್ಚನ್​, ಮೂರು ದಿನಗಳ ಹಿಂದಷ್ಟೇ ಸೋಂಕಿನಿಂದ ಮುಕ್ತಿ ಹೊಂದಿ ಮನೆಗೆ ಮರಳಿದ್ದಾರೆ. ಮನೆಯಲ್ಲಿಯೇ ಬೇರೆಯವರಿಗೆ ತೊಂದರೆ ಆಗಬಾರದೆಂಬ ಕಾರಣಕ್ಕೆ ಹೋಮ್​ ಕ್ವಾರಂಟೈನ್​ನಲ್ಲಿದ್ದಾರೆ. ಈಗ ಆ ಹೋಮ್​ ಕ್ವಾರಂಟೈನ್​ಗೆ ಜೈಲು ಎಂಬ ಹಣೆಪಟ್ಟಿ ಕಟ್ಟಿದ್ದಾರೆ ಅಮಿತಾಬ್​!

    ಇದನ್ನೂ ಓದಿ: ಕನ್ನಡಕ್ಕೆ ಕೋಕಿಲ: ನಯನ ತಾರಾ ಪಾತ್ರದಲ್ಲಿ ರಚಿತಾ

    ಹೌದು, ಈ ಬಗ್ಗೆ ಬ್ಲಾಗ್​ನಲ್ಲಿ ಬರೆದುಕೊಂಡಿರುವ ಅಮಿತಾಬ್​, ಮನೆಯಲ್ಲಿಯೇ ಎಲ್ಲರಿಂದ ದೂರ ಇರುವ ಸ್ಥಿತಿಯ ಬಗ್ಗೆ ಹೇಳಿದ್ದಾರೆ. ‘ಕರೊನಾ ಸಂದರ್ಭದಲ್ಲಿ ನಮ್ಮ ಕುಟುಂಬದಿಂದಲೇ ದೂರವಾಗಿದ್ದೇನೆ. ಒಂದೇ ಮನೆಯಲ್ಲಿದ್ದರೂ, ಯಾರ ಸಂಪರ್ಕವೂ ನನಗಿಲ್ಲ. ಒಂದರ್ಥದಲ್ಲಿ ಜೈಲಿನಲ್ಲಿ ಇದ್ದಂತಾಗಿದೆ. ಸಿನಿಮಾದಲ್ಲಿ ನೋಡಿದಂತೆ ಗ್ಲಾಸ್​ನ ಬಾಗಿಲುಗಳು, ಅಲ್ಲಿಂದಲೇ ಟೆಲಿಫೋನ್​ನಲ್ಲಿ ಮಾತುಕತೆ ಆದಂತಾಗಿದೆ. ಕುಟುಂಬ ನನ್ನಿಂದ ಕೆಲವೇ ಇಂಚುಗಳಿಮದ ದೂರವಿದ್ದರೂ, ಯಾವುದೇ ಸಂಪರ್ಕ ಇಲ್ಲ. ನಿಜಕ್ಕೂ ಇದು ಜೈಲು’ ಎಂದಿದ್ದಾರೆ.

    ಇದನ್ನೂ ಓದಿ; ಹುಟ್ಟುಹಬ್ಬಕ್ಕೆ ಗಿಡ ನೆಡಲು ಆಶಿಕಾ ಮನವಿ

    ಸದ್ಯ ಕರೊನಾದಿಂದ ಐಶ್ವರ್ಯಾ ರೈ, ಆರಾಧ್ಯಾ ಮತ್ತು ಅಮಿತಾಬ್ ಬಚ್ಚನ್​ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಅಭಿಷೇಕ್​ ಬಚ್ಚನ್​ ಕರೊನಾ ವರದಿ ಪಾಸಿಟಿವ್​ ಬಂದಿದ್ದು, ಇನ್ನಷ್ಟು ದಿನಗಳನ್ನು ನಾನಾವತಿ ಆಸ್ಪತ್ರೆಯಲ್ಲಿಯೇ ಕಳೆಯಬೇಕಿದೆ. (ಏಜೆನ್ಸೀಸ್​)

    ರಾಮಮಂದಿರ ಶಿಲಾನ್ಯಾಸ ನಿಮಿತ್ತ ‘ರಾಬರ್ಟ್’​ ತಂಡದಿಂದ ಹೀಗೊಂದು ಪ್ರಯತ್ನ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts