More

    ಚೆನ್ನೈ ರಸ್ತೆಗಿಳಿದು ಬೆಂಬಲಿಗರಿಗೆ ಸರ್​ಪ್ರೈಸ್ ಕೊಟ್ಟ ಅಮಿತ್ ಷಾ

    ಚೆನ್ನೈ: ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಇಂದು ತಮಿಳುನಾಡು ತಲುಪಿದ್ದು, ಎರಡು ದಿನಗಳ ಪ್ರವಾಸ ಆರಂಭಿಸಿದ್ದಾರೆ. ಚೆನ್ನೈ ವಿಮಾಲ ನಿಲ್ದಾಣದಲ್ಲಿ ಇಳಿದು ಹೊರಬಂದ ಕೂಡಲೇ ಹೊರಗೆ ಬೆಂಬಲಿಗರು ಭಾರಿ ಸಂಖ್ಯೆಯಲ್ಲಿ ನೆರೆದಿರುವುದನ್ನು ಗಮನಿಸಿ ಪ್ರೊಟೋಕಾಲ್ ನಿಯಮ ಉಲ್ಲಂಘಿಸಿದ ಷಾ, ತಮ್ಮ ವಾಹನದಿಂದ ಇಳಿದು ಜಿಎಸ್​ಟಿ ರಸ್ತೆಯಲ್ಲಿ ನಡೆದುಕೊಂಡು ಎಲ್ಲರತ್ತ ಕೈ ಬೀಸುತ್ತ, ನಮಸ್ಕರಿಸುತ್ತ ಮುನ್ನಡೆದು ಅಚ್ಚರಿ ಮೂಡಿಸಿದರು.

    ಈ ಸಂದರ್ಭದಲ್ಲಿ ಅವರ ಜತೆಗೆ ತಮಿಳುನಾಡು ಉಸ್ತುವಾರಿ ಹೊತ್ತಿರುವ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಬಿಜೆಪಿಯ ರಾಜ್ಯ ಅಧ್ಯಕ್ಷ ಎಲ್​.ಮುರುಗನ್​ ಮತ್ತು ಭದ್ರತಾ ಪಡೆ ಸಿಬ್ಬಂದಿ ಇದ್ದರು. ಷಾ ಭೇಟಿ ಕಾರಣ ಚೆನ್ನೈನಲ್ಲಿ ಬಿಗಿ ಭದ್ರತೆ ಪೂರೈಸಲಾಗಿದ್ದು, ಭದ್ರತಾ ಸಿಬ್ಬಂದಿ ಕಟ್ಟೆಚ್ಚರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

    ಇದನ್ನೂ ಓದಿ : ಮಮತಾ ಬ್ಯಾನರ್ಜಿಯವರನ್ನು ರಾಜಕೀಯವಾಗಿ ಮುಗಿಸಿಬಿಡುತ್ತೇವೆ ಎಂದ ಪ್ರಹ್ಲಾದ್​ ಜೋಶಿ

    ತಮಿಳುನಾಡಿನಲ್ಲಿ ಮುಂದಿನ ಏಪ್ರಿಲ್​-ಮೇ ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಪಕ್ಷ ಸಂಘಟನೆ ಕಾರ್ಯ ಚುರುಕಾಗಿದೆ. ಅಭೂತಪೂರ್ವ ಸ್ವಾಗತ ಪಡೆದ ಅಮಿತ್ ಷಾ ತಮ್ಮ ಟ್ವಿಟರ್ ಖಾತೆಯಲ್ಲಿ, ವಿಡಿಯೋವನ್ನು ಅಪ್ಲೋಡ್ ಮಾಡಿ, ತಮಿಳುನಾಡಿನಲ್ಲಿರುವ ಬಗ್ಗೆ ಖುಷಿ ಅನಿಸ್ತಾ ಇದೆ. ಈ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು ಚೆನ್ನೈ ಎಂಬ ಸಂದೇಶವನ್ನೂ ಅಪ್ಡೇಟ್ ಮಾಡಿದ್ದಾರೆ. ಅಮಿತ್ ಷಾ ಇದಕ್ಕೂ ಮೊದಲು 2019ರ ಆಗಸ್ಟ್​ನಲ್ಲಿ ಚೆನ್ನೈಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಬಂದಿದ್ದರು.

    ಇದನ್ನೂ ಓದಿ : ಇದು ಅಂತಿಂಥ ಬೇಟೆಯಲ್ಲ! ದ್ವಿಚಕ್ರ ವಾಹನದಲ್ಲಿತ್ತು ಬರೋಬ್ಬರಿ 3 ಕೋಟಿ ಮೌಲದ್ಯ ಚಿನ್ನಾಭರಣ

    ಅವರು ಇಂದು ತಮಿಳುನಾಡು ಸರ್ಕಾರದ ಕಾರ್ಯಕ್ರಮದಲ್ಲಿ ಬಾಗವಹಿಸುತ್ತಿದ್ದು, ಚೆನ್ನೈ ಮೆಟ್ರೋ ಎರಡನೇ ಹಂತದ 67,000 ಕೋಟಿ ರೂಪಾಯಿ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಅವರು ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಮುಖ್ಯಮಂತ್ರಿ ಕೆ.ಪಳನಿಸಾಮಿ, ಡಿಸಿಎಂ ಒ ಪನ್ನೀರಸೆಲ್ವಂ ಮತ್ತು ಸಚಿವ ಸಂಪುಟದ ಸಹೋದ್ಯೋಗಿಗಳು ಹಾಗೂ ಬಿಜೆಪಿಯ ರಾಜ್ಯ ಅಧ್ಯಕ್ಷ ಎಲ್​.ಮುರುಗನ್​ ಮತ್ತು ಇತರರು ಬರಮಾಡಿಕೊಂಡಿದ್ದಾರೆ.

    ತಮಿಳುನಾಡಿಗೆ ಅಮಿತ್​ ಷಾ ಭೇಟಿ ಕೊಡುತ್ತಿದ್ದಂತೆಯೇ ಬಿಜೆಪಿ ಸೇರಲಾರಂಭಿಸಿದ ನಾಯಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts