More

    ಪಿಒಕೆ ಕಳೆದುಕೊಳ್ಳಲು ನೆಹರೂ ಮಾಡಿದ 2 ಪ್ರಮಾದಗಳೇ ಕಾರಣ: ಲೋಕಸಭೆಯಲ್ಲಿ ಅಮಿತ್​ ಶಾ ವಾಗ್ದಾಳಿ

    ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಹಲವು ದಶಕಗಳಿಂದ ಎದುರಿಸುತ್ತಿರುವ ಭದ್ರತಾ ಸವಾಲುಗಳಿಗೆ ಮಾಜಿ ಪ್ರಧಾನಿ (ದಿವಂಗತ) ಜವಾಹರಲಾಲ್ ನೆಹರು ಅವರೇ ಕಾರಣ ಎಂದು ಕೇಂದ್ರ ಸಚಿವ ಅಮಿತ್ ಶಾ ಟೀಕಿಸಿದ್ದಾರೆ.

    ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆ 2023 ಮತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆ 2023 ಕುರಿತು ಮಾತನಾಡಿದ ಅವರು, ಈ ಹಿಂದೆ ಎರಡು ಪ್ರಮಾದಗಳನ್ನು ಎಸಗದಿದ್ದರೆ ಪಾಕ್ ಆಕ್ರಮಿತ ಕಾಶ್ಮೀರ ಅಸ್ತಿತ್ವಕ್ಕೆ ಬರುತ್ತಿರಲಿಲ್ಲ ಎಂದು ಆಪಾದಿಸಿದರು.

    “ನಾನು ಸದನದಲ್ಲಿ ನಿಂತು ಜವಾಬ್ದಾರಿಯುತವಾಗಿ ಹೇಳುತ್ತೇನೆ, ಪ್ರಧಾನಿ ಜವಾಹರಲಾಲ್ ನೆಹರೂ ಅವರ ಅಧಿಕಾರಾವಧಿಯಲ್ಲಿ ಕಾಶ್ಮೀರವು ಎರಡು ಪ್ರಮಾದಗಳಿಂದಾಗಿ ಹಲವಾರು ವರ್ಷಗಳ ಕಾಲ ನರಳಿತು. ನಮ್ಮ ಪಡೆಗಳು ಗೆದ್ದಾಗ ಕದನ ವಿರಾಮ ಘೋಷಿಸಲಾಯಿತು. ಅಲ್ಲದೆ, ಪಿಒಕೆ ಅಸ್ತಿತ್ವಕ್ಕೆ ಬಂದದ್ದು ದೊಡ್ಡ ತಪ್ಪು. ಕದನ ವಿರಾಮವನ್ನು ಮೂರು ದಿನ ವಿಳಂಬ ಮಾಡಿದ್ದರೆ, ಪಿಒಕೆ ಭಾರತದ ಭಾಗವಾಗುತ್ತಿತ್ತು” ಎಂದು ಸಂಸತ್ತಿನ ವಿರೋಧ ಪಕ್ಷದ ಸದಸ್ಯರ ದೊಡ್ಡ ಪ್ರತಿಭಟನೆಯ ನಡುವೆ ಶಾ ಹೇಳಿದರು.

    ಕಾಶ್ಮೀರ ವಿಚಾರದಲ್ಲಿ ವಿಶ್ವಸಂಸ್ಥೆ ಭಾಗಿಯಾಗಿರುವುದು ಎರಡನೇ ಪ್ರಮಾದ ಎಂದೂ ಅವರು ಹೇಳಿದರು.
    “ಎರಡನೆಯದು ನಮ್ಮ ಸಮಸ್ಯೆಯನ್ನು ಯುಎನ್ (ವಿಶ್ವ ಸಂಸ್ಥೆ) ಗೆ ಕೊಂಡೊಯ್ಯಲು ಮಾಡಿದ ಪ್ರಮಾದ” ಎಂದು ಅವರು ಹೇಳಿದರು.

    : “ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (ಪಿಒಕೆ) ಸಮಸ್ಯೆ ಪಂಡಿತ್ ನೆಹರೂ ಅವರಿಂದ ಉಂಟಾಗಿದೆ. ಇಲ್ಲದಿದ್ದರೆ ಆ ಭಾಗ ಕಾಶ್ಮೀರಕ್ಕೆ ಸೇರುತ್ತಿತ್ತು. ನೆಹರೂಜಿ ಪಿಒಕೆಗೆ ಕಾರಣರಾಗಿದ್ದಾರೆ. ಕಾಶ್ಮೀರದ ಭಾಗವಾದ ಪಿಒಕೆ ಪ್ರತ್ಯೇಕವಾಗಲು ಹಾಗೂ ದೇಶವು ಅಪಾರ ಭೂಮಿ ಕಳೆದುಕೊಳ್ಳಲು ಅಂದಿನ ಪ್ರಧಾನಿ ನೆಹರೂ ಅವರೇ ಕಾರಣವೆಂದು ನೇರವಾಗಿ ವಾಗ್ದಾಳಿ ನಡೆಸಿದರು.

    ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಸಮಸ್ಯೆಗೆ ಮಾಜಿ ಪ್ರಧಾನಿಯೇ ಹೊಣೆ ಎಂದು ಶಾ ಹೇಳಿದರು.
    ಇದು ತಪ್ಪು ಎಂದು ನೆಹರೂ ಅವರು ಹೇಳಿದ್ದರು. ಆದರೆ, ಇದು ಕೇವಲ ತಪ್ಪಾಗಿರಲಿಲ್ಲ. ಈ ದೇಶವು ಅಪಾರ ಭೂಮಿಯನ್ನು ಕಳೆದುಕೊಂಡಿರುವುದು ಪ್ರಮಾದ ಎಂದು ಶಾ ಹೇಳಿದರು.

    ಕಾಶ್ಮೀರಿ ಪಂಡಿತರ ವಲಸೆಗೆ ಕಾಂಗ್ರೆಸ್ ಕಾರಣ ಎಂದು ಆರೋಪಿಸಿದ ಅವರು, ವೋಟ್ ಬ್ಯಾಂಕ್ ರಾಜಕಾರಣ ಇಲ್ಲದಿದ್ದರೆ ಈ ಘಟನೆಯನ್ನು ತಡೆಯಬಹುದಿತ್ತು ಎಂದರು..

    “ಜವಾಹರಲಾಲ್ ನೆಹರು ಅವರಿಂದಾಗಿ ನಾವು ಪಿಒಕೆ ಕಳೆದುಕೊಂಡಿದ್ದೇವೆ ಎಂದು ಅಮಿತ್ ಶಾ ಸರಿಯಾಗಿ ಹೇಳಿದ್ದಾರೆ. ಅವರು (ಪಡೆಗಳನ್ನು) ಹಿಂದಕ್ಕೆ ಕರೆದು ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಗೆ ಕೊಂಡೊಯ್ದರು” ಎಂದು ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ಅವರೂ ಅಮಿತ್ ಶಾ ಅವರನ್ನು ಬೆಂಬಲಿಸಿ ಮಾತನಾಡಿದರು.

    ಕಾಂಗ್ರೆಸ್​ ಸಭಾತ್ಯಾಗಕ್ಕೆ ಲೇವಡಿ:

    ನೆಹರೂ ಕುರಿತು ಅಮಿತ್ ಶಾ ಅವರು ನೀಡಿದ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿ ಹಲವಾರು ಕಾಂಗ್ರೆಸ್ ಸೇರಿ ಪ್ರತಿಪಕ್ಷಗಳ ಸಂಸದರು ಸಭಾತ್ಯಾಗ ಮಾಡಿದರು.
    ಕಾಂಗ್ರೆಸ್​ ಸೇರಿ ವಿರೋಧ ಪಕ್ಷಗಳ ಅಸಮಾಧಾನಕ್ಕೆ ಪ್ರತಿಕ್ರಿಯಿಸಿ ಶಾ, “ನಾನು ಹಿಮಾಲಯನ್ ಬ್ಲಂಡರ್​ (ಮಹಾ ಪ್ರಮಾದ) ಎಂದು ಹೇಳಿದ್ದರೆ, ಅವರು (ವಿರೋಧ ಪಕ್ಷಗಳ ಸಂಸದರು) ರಾಜೀನಾಮೆ ನೀಡಿ ಹೋಗುತ್ತಿದ್ದರು” ಎಂದು ಶಾ ಲೇವಡಿ ಮಾಡಿದರು.

    ಮಸೂದೆ ಅಂಗೀಕಾರ:

    ಲೋಕಸಭೆಯು ಬುಧವಾರ ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಿತು, ಇದು ಕಾಶ್ಮೀರಿ ವಲಸಿಗ ಸಮುದಾಯದಿಂದ ಇಬ್ಬರು ಸದಸ್ಯರನ್ನು ಮತ್ತು ಪಾಕ್ ಆಕ್ರಮಿತ ಕಾಶ್ಮೀರದಿಂದ (ಪಿಒಕೆ) ಸ್ಥಳಾಂತರಗೊಂಡ ವ್ಯಕ್ತಿಗಳನ್ನು ಪ್ರತಿನಿಧಿಸುವ ಒಬ್ಬರನ್ನು ಶಾಸಕಾಂಗ ಸಭೆಗೆ ನಾಮನಿರ್ದೇಶನ ಮಾಡಲು ಪ್ರಯತ್ನಿಸುತ್ತದೆ. ಲೋಕಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆ 2023 ಅನ್ನು ಕೂಡ ಅಂಗೀಕರಿಸಲಾಯಿತು.

    ಈ ಎರಡು ಮಸೂದೆಗಳು ಕಳೆದ 70 ವರ್ಷಗಳಿಂದ ಹಕ್ಕುಗಳಿಂದ ವಂಚಿತರಾದವರಿಗೆ ನ್ಯಾಯ ಒದಗಿಸುವ ಗುರಿಯನ್ನು ಹೊಂದಿವೆ ಎಂದು ಶಾ ಹೇಳಿದರು.

    ಜಮ್ಮು ಮತ್ತು ಕಾಶ್ಮೀರ ಮೀಸಲಾತಿ (ತಿದ್ದುಪಡಿ) ಮಸೂದೆ 2023 ಮತ್ತು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಮಸೂದೆ 2023 ರ ಕುರಿತ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಅವರು, ಪಿಒಕೆ ನಮ್ಮದು. ಅಲ್ಲಿ 24 ಸೀಟುಗಳನ್ನು ಮೀಸಲಿಡಲಾಗಿದೆ ಎಂದು ಹೇಳಿದರು. “ಈ ಹಿಂದೆ ಜಮ್ಮುವಿನಲ್ಲಿ 37 ಸೀಟುಗಳಿದ್ದವು, ಈಗ 43. ಈ ಹಿಂದೆ ಕಾಶ್ಮೀರದಲ್ಲಿ 46 ಇದ್ದವು, ಈಗ 47. ಅಲ್ಲದೆ, ಪಿಒಕೆಯಲ್ಲಿ 24 ಸ್ಥಾನಗಳನ್ನು ಕಾಯ್ದಿರಿಸಲಾಗಿದೆ, ಏಕೆಂದರೆ ಪಿಒಕೆ ನಮ್ಮದು” ಎಂದು ಶಾ ಹೇಳಿದರು.

    ಐದನೇ ಬಾರಿ ಎಂಪಿ ಸಿಎಂ ಸ್ಥಾನದತ್ತ ಕಣ್ಣು: ಪರೋಕ್ಷ ಸಂದೇಶ ರವಾನಿಸಿದ ಶಿವರಾಜ್ ಸಿಂಗ್ ಚೌಹಾಣ್

    ಹೊರದೇಶದಲ್ಲಿದ್ದುಕೊಂಡೇ ಆರ್ಥಿಕ ವಂಚನೆ: 100 ವೆಬ್​ಸೈಟ್​ ನಿರ್ಬಂಧಿಸಿದ ಕೇಂದ್ರ ಗೃಹ ಸಚಿವಾಲಯ

    ರಾಹುಲ್​ ಗಾಂಧಿ- ಪ್ರಣವ್​ ಮುಖರ್ಜಿ ನಡುವಿನ ಅಸಮಾಧಾನ: ಮಗಳು ಬರೆದ ಪುಸ್ತಕದಲ್ಲಿವೆ ಕುತೂಹಲಕಾರಿ ಸಂಗತಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts