More

    ಹೊರದೇಶದಲ್ಲಿದ್ದುಕೊಂಡೇ ಆರ್ಥಿಕ ವಂಚನೆ: 100 ವೆಬ್​ಸೈಟ್​ ನಿರ್ಬಂಧಿಸಿದ ಕೇಂದ್ರ ಗೃಹ ಸಚಿವಾಲಯ

    ನವದೆಹಲಿ: ಸಂಘಟಿತ ಅಕ್ರಮ ಹೂಡಿಕೆಗಳು ಮತ್ತು ಕಾರ್ಯ ಆಧಾರಿತ ಅರೆಕಾಲಿಕ ಉದ್ಯೋಗ ವಂಚನೆಗಳಿಗೆ ಪೂರಕವಾಗಿದ್ದ 100 ವೆಬ್‌ಸೈಟ್‌ಗಳನ್ನು ಕೇಂದ್ರ ಗೃಹ ಸಚಿವಾಲಯದ ಶಿಫಾರಸಿನ ಹಿನ್ನೆಲೆಯಲ್ಲಿ ನಿರ್ಬಂಧಿಸಲಾಗಿದೆ. ಹೊರ ದೇಶದಲ್ಲಿದ್ದುಕೊಂಡೇ ಕೆಲವರು ಇಂತಹ ವೆಬ್‌ಸೈಟ್‌ಗಳನ್ನು ನಿರ್ವಹಿಸುತ್ತಿದ್ದರು.

    ಕೇಂದ್ರ ಗೃಹ ಸಚಿವಾಲಯದ ವಿಭಾಗವಾದ ಇಂಡಿಯನ್ ಸೈಬರ್ ಕ್ರೈಮ್ ಕೋಆರ್ಡಿನೇಶನ್ ಸೆಂಟರ್ ತನ್ನ ರಾಷ್ಟ್ರೀಯ ಸೈಬರ್ ಕ್ರೈಮ್ ಥ್ರೆಟ್ ಅನಾಲಿಟಿಕ್ಸ್ ಯುನಿಟ್ (NCTAU) ಮೂಲಕ ಕಳೆದ ವಾರ ಸಂಘಟಿತ ಹೂಡಿಕೆ ಮತ್ತು ಕಾರ್ಯ ಆಧಾರಿತ ಅರೆಕಾಲಿಕ ಉದ್ಯೋಗ ವಂಚನೆಗಳಲ್ಲಿ ತೊಡಗಿರುವ 100 ವೆಬ್‌ಸೈಟ್‌ಗಳನ್ನು ಗುರುತಿಸಿ ನಿರ್ಬಂಧಿಸಲು ಶಿಫಾರಸು ಮಾಡಿತ್ತು. ಇದಾದ ನಂತರ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಮಾಹಿತಿ ತಂತ್ರಜ್ಞಾನ ಕಾಯ್ದೆ 2000ರ ಅನುಸಾರ ಈ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಿದೆ.

    ಆರ್ಥಿಕ ಅಪರಾಧಗಳಿಗೆ ಸಂಬಂಧಿಸಿದ ಕಾರ್ಯ-ಆಧಾರಿತ ಸಂಘಟಿತ ಅಕ್ರಮ ಹೂಡಿಕೆಗೆ ಪೂರಕವಾಗಿ ಈ ವೆಬ್‌ಸೈಟ್‌ಗಳನ್ನು ವಿದೇಶಿಗರು ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ. ಡಿಜಿಟಲ್ ಜಾಹೀರಾತು, ಚಾಟ್ ಮೆಸೆಂಜರ್‌ಗಳು ಮತ್ತು ಬಾಡಿಗೆ ಖಾತೆಗಳನ್ನು ಇದಕ್ಕಾಗಿ ಅವರು ಬಳಸುತ್ತಿದ್ದರು. ಕಾರ್ಡ್ ನೆಟ್‌ವರ್ಕ್, ಕ್ರಿಪ್ಟೋ ಕರೆನ್ಸಿ, ಸಾಗರೋತ್ತರ ಎಟಿಎಂ ಹಿಂಪಡೆಯುವಿಕೆ ಮತ್ತು ಅಂತಾರಾಷ್ಟ್ರೀಯ ಫಿನ್‌ಟೆಕ್ ಕಂಪನಿಗಳನ್ನು ಬಳಸಿಕೊಂಡು ಭಾರತದ ಹೊರಗಡೆಯಿಂದ ದೊಡ್ಡ ಪ್ರಮಾಣದ ಆರ್ಥಿಕ ವಂಚನೆಗಳನ್ನು ನಡೆಸಲಾಗುತ್ತಿತ್ತು ಎಂದು ಪ್ರಕಟಣೆ ತಿಳಿಸಿದೆ.

    ರಾಹುಲ್​ ಗಾಂಧಿ- ಪ್ರಣವ್​ ಮುಖರ್ಜಿ ನಡುವಿನ ಅಸಮಾಧಾನ: ಮಗಳು ಬರೆದ ಪುಸ್ತಕದಲ್ಲಿವೆ ಕುತೂಹಲಕಾರಿ ಸಂಗತಿಗಳು

    10 ಬಿಜೆಪಿ ಸಂಸದರು ಲೋಕಸಭೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು ಯಾಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts