More

    ಬಿಜೆಪಿಯ 175 ಪ್ರಮುಖರ ಜತೆ ಅಮಿತ್ ಷಾ ಮಹತ್ವದ ಸಭೆ; ಶೆಟ್ಟರ್ ಪ್ರಕರಣದ ಕುರಿತು ಹೇಳಿದ್ದೇನು?

    ಹುಬ್ಬಳ್ಳಿ: ಕರ್ನಾಟಕಕ್ಕೆ ಆಗಮಿಸಿರುವ ಕೇಂದ್ರ ಗೃಹ ಸಚಿವ ಅಮಿತ್ ಷಾ ಇದೀಗ ಹುಬ್ಬಳ್ಳಿಯ ಖಾಸಗಿ ಹೋಟೆಲ್​ನಲ್ಲಿ ಮಹತ್ವದ ಸಭೆಯೊಂದನ್ನು ನಡೆಸುತ್ತಿದ್ದಾರೆ. ವಿಶೇಷವೆಂದರೆ ಈ ಸಭೆಯಲ್ಲಿ ಬಿಜೆಪಿಯ 175 ಪ್ರಮುಖರು ಪಾಲ್ಗೊಂಡಿದ್ದು, ಭಾರಿ ಉದ್ದೇಶವೊಂದನ್ನು ಹೊಂದಿದೆ ಎನ್ನಲಾಗಿದೆ.

    ಇದನ್ನೂ ಓದಿ: ಮಗಳ ಮೃತದೇಹದ ಜತೆಗೆ ಐದು ದಿನಗಳನ್ನು ಕಳೆದ ತಾಯಿ!

    ಹುಬ್ಬಳ್ಳಿ-ಧಾರವಾಡ, ಗದಗ, ಹಾವೇರಿ ಜಿಲ್ಲೆಗಳ ಬಿಜೆಪಿ ಪ್ರಮುಖರನ್ನು ಒಳಗೊಂಡಂತೆ ಈ ಸಭೆ ನಡೆಯುತ್ತಿದೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಂಸದ ಶಿವಕುಮಾರ ಉದಾಸಿ, ಸಚಿವ ಬಿ.ಸಿ.ಪಾಟೀಲ್, ಶಂಕರ್ ಪಾಟೀಲ್ ಮುನೇನಕೊಪ್ಪ, ಶಾಸಕ ಅರವಿಂದ ಬೆಲ್ಲದ್, ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ್ ಪಾಟೀಲ್ ಸೇರಿದಂತೆ ಮೂರು ಜಿಲ್ಲೆಗಳ ಪದಾಧಿಕಾರಿಗಳು ಭಾಗಿಯಾಗಿದ್ದಾರೆ. ಸಭೆಯಲ್ಲಿ ಸಚಿವರು, ಹಾಲಿ ಶಾಸಕರು, ಮಂಡಳ ಪ್ರಮುಖರು, ಹಾಲಿ ಮತ್ತು ಮಾಜಿ ಪಂಚಾಯತ, ಪಾಲಿಕೆ ಸದಸ್ಯರು ಕೂಡ ಇದ್ದಾರೆ.

    ಇದನ್ನೂ ಓದಿ: ಹವಾಮಾನ ಮುನ್ಸೂಚನೆ: ಈ ಜಿಲ್ಲೆಗಳಲ್ಲಿ ಐದು ದಿನ ಗುಡುಗು ಮಿಂಚು ಸಹಿತ ಮಳೆ

    ಬಿಜೆಪಿ ಶೆಟ್ಟರ್​ಗೆ ಅನ್ಯಾಯ ಮಾಡಿಲ್ಲ, ಶೆಟ್ಟರ್ ಬಿಜೆಪಿಗೆ ಮೋಸ ಮಾಡಿದ್ದಾರೆ. ಲಿಂಗಾಯತರಿಗೆ ಬಿಜೆಪಿ ಅನ್ಯಾಯ ಮಾಡಿಲ್ಲ. ಲಿಂಗಾಯತ ಬದಲಿಗೆ ಲಿಂಗಾಯತ ಯುವ ನಾಯಕರಿಗೆ ಟಿಕೆಟ್ ನೀಡಲಾಗಿದೆ. ಶೆಟ್ಟರ್​ಗೆ ಎಲ್ಲ ಸ್ಥಾನಮಾನ‌‌ ಕೊಡಲು ಹೈಕಮಾಂಡ್ ಸಿದ್ಧವಿತ್ತು. ಆದರೆ ಶೆಟ್ಟರ್ ಟಿಕೆಟ್ ಬೇಕೇಬೇಕು ಎಂದು ಪಟ್ಟು ಹಿಡಿದರು ಎನ್ನುವುದನ್ನು ಸಭೆಯಲ್ಲಿ ಷಾ ಮನವರಿಕೆ ಮಾಡಿದ್ದಾರೆ ಎನ್ನಲಾಗಿದೆ. ಅಲ್ಲದೆ ಸಭೆಯಲ್ಲಿ ಭಾಗಿಯಾದವರು ಈ ಸಂಗತಿಯನ್ನು ಇತರರಿಗೆ ಮನದಟ್ಟು ಮಾಡಲು ಕಿವಿಮಾತು ಹೇಳಲಾಗಿದ್ದು, ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬ ಸಂದೇಶವನ್ನೂ ಹರಿಬಿಡಲಾಗಿದೆ.

    ನನ್ನ ಕಣ್ಣೀರಿಗೆ ಕಾರಣರಾದವರನ್ನೇ ಕಣ್ಣೀರು ಹಾಕಿಸುವಂತೆ ಮಾಡಿದ್ರೆ ಮಾತ್ರ ನನ್ನ ಆತ್ಮಕ್ಕೆ ಶಾಂತಿ: ಎಚ್​.ಡಿ.ದೇವೇಗೌಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts