More

    ಲಾಕ್​ಡೌನ್​ನಿಂದಾಗಿ ಏರಿದೆ ನಿರುದ್ಯೋಗ ಪ್ರಮಾಣ, ಆದರೆ ಕೆಲಸಕ್ಕೆ ಜನರೇ ಸಿಗುತ್ತಿಲ್ಲ

    ನವದೆಹಲಿ: ದೇಶಾದ್ಯಂತ ಲಾಕ್​ಡೌನ್​ನಿಂದಾಗಿ 40 ಕೋಟಿಗೂ ಅಧಿಕ ಜನರು ಬಡತನದ ಕೂಪಕ್ಕೆ ತಳ್ಳಲ್ಪಟ್ಟರೆ, 12 ಕೋಟಿಗೂ ಅಧಿಕ ಜನರು ಕೆಲಸ ಕಳೆದುಕೊಂಡು ನಿರುದ್ಯೋಗ ಪ್ರಮಾಣ ಹಿಂದೆಂದಿಗಿಂತಲೂ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದು ಅಂಕಿ-ಸಂಖ್ಯೆಗಳು ಹೇಳುತ್ತಿವೆ.

    ಪ್ರಸ್ತುತ ದೇಶದಲ್ಲಿ ಅತಿ ಹೆಚ್ಚು ಉದ್ಯೋಗ ಒದಗಿಸುವ ಕ್ಷೇತ್ರವೆಂದರೆ, ರಿಯಾಲ್ಟಿ ಅಥವಾ ಕಟ್ಟಡ ನಿರ್ಮಾಣ ಕ್ಷೇತ್ರ. ನಿರ್ಮಾಣ ಕಾಮಗಾರಿ ಕೈಗೊಳ್ಳಲು ಈಗಾಗಲೇ ಸರ್ಕಾರ ಅನುಮತಿ ನೀಡಿದೆ. ವಿಪರ್ಯಾಸವೆಂದರೆ, ಗುತ್ತಿಗೆದಾರರಿಗೆ ಕಾಮಗಾರಿ ನಡೆಸಲು ಕಾರ್ಮಿಕರೇ ಸಿಗುತ್ತಿಲ್ಲ.

    ಇಷ್ಟಕ್ಕೂ ಕಾರ್ಮಿಕರ ಕೊರತೆ ಯಾಕೆ ಗೊತ್ತೆ? ರಿಯಾಲ್ಟಿ ಕ್ಷೇತ್ರ ವ್ಯಾಪಕವಾಗಿರುವುದು ಮಹಾನಗರಗಳಲ್ಲಿ. ಅದರಲ್ಲೂ ಮುಂಬೈ, ದೆಹಲಿ, ಚೆನ್ನೈ, ಬೆಂಗಳೂರುಗಳಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಜೋರಾಗಿ ನಡೆಯುತ್ತಿದೆ. ಆದರೆ, ಇಂಥ ಮಹಾನಗರಗಳಲ್ಲಿಯೇ ಕರೊನಾ ಸೋಂಕು ಕೂಡ ವ್ಯಾಪಕವಾಗಿದೆ. ಲಾಕ್​ಡೌನ್​, ಸೀಲ್​ಡೌನ್​ನಿಂದಾಗಿ ತಿಂಗಳುಗಟ್ಟಲೇ ಕಾರ್ಮಿಕರು ಕೆಲಸವಿಲ್ಲದೇ ಕೂತಿದ್ದರು.

    ಇದನ್ನೂ ಓದಿ; ಭಾರತೀಯರ ರಕ್ಷಣೆಗೆ ಆಪರೇಷನ್​ ಸಮುದ್ರ ಸೇತು; ಮಾಲ್ಡೀವ್ಸ್​ ತಲುಪಿದ ಜಲಾಶ್ವ 

    ಈ ಅವಧಿಯಲ್ಲಿ ಭಾರಿ ಸಂಖ್ಯೆಯಲ್ಲಿ ಕಾರ್ಮಿಕರು ತಮ್ಮೂರುಗಳನ್ನು ತಲುಪಿಕೊಂಡಿದ್ದಾರೆ. ಲಾಕ್​ಡೌನ್​ ನಿರ್ಬಂಧಗಳು ತೆರವಾಗುತ್ತಿದ್ದಂತೆ ರೈಲು, ಬಸ್​ಗಳಲ್ಲಿ ವಲಸೆ ಕಾರ್ಮಿಕರು ಪ್ರಯಾ ಬೆಳೆಸಿದ್ದಾರೆ. ಕರೊನಾ ಸಂಕಷ್ಟ ಮುಗಿಯುವವರೆಗೂ ಹಳ್ಳಿಗಳನ್ನು ಬಿಟ್ಟು ತೆರಳುವ ಮನೋಧೈರ್ಯ ಇವರಿಗಿಲ್ಲ.

    ಇನ್ನು, ರಿಯಾಲ್ಟಿ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ಹೆಚ್ಚಿನವರು ಹೊರರಾಜ್ಯಗಳ ಕಾರ್ಮಿಕರೇ ಆಗಿದ್ದಾರೆ. ಹೀಗಾಗಿ ಕಟ್ಟಡ ನಿರ್ಮಾಣ ಕಾಮಗಾರಿ ಶುರುವಾಗಿದ್ದರೂ ಕೆಲಸದವರೇ ಸಿಗುತ್ತಿಲ್ಲ.

    ಇದನ್ನೂ ಓದಿ; ರಾಜ್ಯದ ನಾಡಕಚೇರಿಗಳಿಗೆ ಬೇಕಾಗಿದ್ದಾರೆ ಡೇಟಾ ಎಂಟ್ರಿ ಆಪರೇಟರ್ಸ್, ಜಿಲ್ಲಾಧಿಕಾರಿಗಳ ಹಂತದಲ್ಲಿಯೇ ನಡೆಯಲಿದೆ ನೇಮಕಾತಿ

    ಲಾಕ್​ಡೌನ್​ ನಿರ್ಬಂಧಗಳನ್ನು ಬಹುತೇಕ ಸಡಿಲಿಸಲಾಗಿದ್ದು, ಆರ್ಥಿಕ ಚಟುವಟಿಕೆಗಳಿಗೆ ಚೇತರಿಕೆ ನೀಡುವ ಕೆಲಸ ಮಾಡಲಾಗುತ್ತಿದೆ. ಈ ಕಾರಣಗಳಿಗಾಗಿ ವಲಸೆ ಕಾರ್ಮಿಕರನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಲು ಎಲ್ಲ ರಾಜ್ಯಗಳು ಭಾರಿ ಯತ್ನ ನಡೆಸಿವೆ.

    ಚೆಲಿಯಾ ಮುಸ್ಲಿಮರ ಹೋಟೆಲ್‌, ರೆಸ್ಟೋರಂಟ್​ಗಳಿಗೆ ಹಿಂದು ಹೆಸರುಗಳೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts