More

    ಆಲ್ಟ್​ ನ್ಯೂಸ್​ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್​ ಬಂಧನ

    ನವದೆಹಲಿ: ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದ ಮೇರೆಗೆ ಆಲ್ಟ್​​ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೇರ್​ನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಹಳೇ ಕೇಸೊಂದರ ವಿಚಾರಣೆಗಾಗಿ ಕರೆಸಿದ್ದ ಪೊಲೀಸರು ಬಳಿಕ ಬಂಧಿಸಿದ್ದರು.

    ದೆಹಲಿಯ ವಿಶೇಷ ದಳದ ಪೊಲೀಸರು 2022ರ ಕೇಸ್​ವೊಂದಕ್ಕೆ ಸಂಬಂಧಿಸಿದಂತೆ ಜುಬೇರ್​ನನ್ನು ವಿಚಾರಣೆಗೆ ಕರೆದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸದ ಹಾಗೆ ಹೈಕೋರ್ಟ್​ನಿಂದ ಸೂಚನೆ ಪಡೆದಿದ್ದಾಗ್ಯೂ ಜುಬೇರ್ ಬಂಧನವಾಗಿದೆ. ಅಂದರೆ, ಬೇರೆ ಕೇಸೊಂದರ ಎಫ್​ಐಆರ್ ಮೇರೆಗೆ ಪೊಲೀಸರು ಬಂಧಿಸಿದ್ದಾಗಿ ಹೇಳಿದ್ದಾರೆಂದು ಆಲ್ಟ್​ ನ್ಯೂಸ್​ನ ಇನ್ನೊಬ್ಬ ಸಹ ಸಂಸ್ಥಾಪಕ ಪ್ರತೀಕ್ ಸಿನ್ಹಾ ತಿಳಿಸಿದ್ದಾರೆ.

    ವೈದ್ಯಕೀಯ ತಪಾಸಣೆ ಬಳಿಕ ಜುಬೇರ್​ನನ್ನು ಗುಪ್ತ ಸ್ಥಳಕ್ಕೆ ಕರೆದೊಯ್ಯಲಾಗಿದೆ. ಎಲ್ಲಿಗೆ ಎಂದು ಜುಬೇರ್​ ವಕೀಲರಿಗೆ ಅಥವಾ ನನಗೂ ಮಾಹಿತಿ ನೀಡಿಲ್ಲ ಎಂದು ಸಿನ್ಹಾ ಹೇಳಿಕೊಂಡಿದ್ದಾರೆ. ಇನ್ನೊಂದೆಡೆ 2022ರಲ್ಲಿ ಜುಬೇರ್ ಮಾಡಿದ್ದ ಟ್ವೀಟ್​, ಧಾರ್ಮಿಕ ಭಾವನೆಗೆ ಧಕ್ಕೆ ತಂದಿದೆ ಎಂದು ಟ್ವಿಟರ್​ ಬಳಕೆದಾರರು ನೀಡಿದ್ದ ದೂರಿನ ಮೇರೆಗೆ ಬಂಧಿಸಲಾಗಿದೆ ಎಂದು ಡಿಸಿಪಿ ಕೆಪಿಎಸ್ ಮಲ್ಹೋತ್ರಾ ತಿಳಿಸಿದ್ದಾರೆ.

    ಕಾರಿನ ಗಾಜನ್ನು ಒರೆಸುತ್ತ ಫಾಸ್ಟ್ಯಾಗ್ ಹಣ ಕಬಳಿಸುವವರ ಹಾವಳಿ?; ಹೊರಬಿತ್ತು ಅಸಲಿಯತ್ತು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts