More

    ಹೊಸ ಅವತಾರದಲ್ಲಿ ಬರ್ತಾ ಇದೆ ಆಧಾರ್

    ಸೆಕ್ಯೂರಿಟಿ ಫೀಚರ್ಸ್ ವಿವರ

    1 ಅತ್ಯುತ್ತಮ ಮುದ್ರಣ ಗುಣಮಟ್ಟ ಮತ್ತು ಲ್ಯಾಮಿನೇಶನ್​

    2 ಆಧಾರ್ ಪಿವಿಸಿ ಕಾರ್ಡ್​ ಹೆಚ್ಚು ಕಾಲ ಬಾಳ್ವಿಕೆ ಬರುವಂಥದ್ದು ಮತ್ತು ಕೊಂಡೊಯ್ಯಲು ಸುಲಭವಾದುದು
    3 ಹೋಲೋಗ್ರಾಮ್​, ಗುಯ್ಲೊಚೆ ಪ್ಯಾಟರ್ನ್​, ಘೋಸ್ಟ್​ ಇಮೇಜ್​ ಮತ್ತು ಮೈಕ್ರೋ ಟೆಕ್ಸ್ಟ್
    4

    ಇನ್​ಸ್ಟಂಟ್ ಆಫ್​ಲೈನ್ ವೆರಿಫಿಕೇಶನ್​ಗೆ ಸಹಕಾರಿ ಕ್ಯೂಆರ್ ಕೋಡ್5

    ವಿತರಿಸಲ್ಪಟ್ಟ ದಿನಾಂಕ ಮತ್ತು ಮುದ್ರಣ ದಿನಾಂಕ

    6

    ಎಂಬೋಸ್ ಮಾಡಿರುವ ಆಧಾರ್ ಲೋಗೋ

    ನವದೆಹಲಿ: ಹೊಚ್ಚ ಹೊಸ ಅವತಾರದಲ್ಲಿ ಆಧಾರ್ ಕಾರ್ಡ್ ಬರ್ತಾ ಇದೆ. ಪಾಲಿವಿನೈಲ್ ಕ್ಲೋರೈಡ್ (ಪಿವಿಸಿ) ಕಾರ್ಡ್​ ಇದಾಗಿದ್ದು, ಸೆಕ್ಯೂರಿಟಿ ಫೀಚರ್ಸ್​ ಕೂಡ ಹೊಂದಿದೆ. ಎಟಿಎಂ/ಡೆಬಿಟ್​/ಕ್ರೆಡಿಟ್​ ಕಾರ್ಡ್​​ಗಳಂತೆ ಆಧಾರ್ ಕಾರ್ಡ್ ಅನ್ನೂ ವ್ಯಾಲೆಟ್​ನಲ್ಲಿ ಇಟ್ಟುಕೊಂಡು ತಿರುಗಾಡಬಹುದು ಎಂದು ಯೂನಿಕ್ ಐಡೆಂಟಿಫಿಕೇಶನ್​ ಅಥಾರಿಟಿ ಆಫ್ ಇಂಡಿಯಾ (ಯುಐಡಿಎಐ) ಹೇಳಿದೆ.

    ಆಧಾರ್ ಪಿವಿಸಿ ಕಾರ್ಡ್ ಎಲ್ಲ ಹವಾಮಾನಗಳಲ್ಲೂ ಸುರಕ್ಷಿತವಾಗಿರುವಂಥದ್ದು. ನೀರಿನಲ್ಲಿ ಬಿದ್ದರೂ ಹಾಳಾಗಲ್ಲ. ಚಾಲನಾ ಪರವಾನಗಿ, ಎಟಿಎಂ ಕಾರ್ಡ್​ಗಳನ್ನು ಜೇಬಿನಲ್ಲಿಟ್ಟುಕೊಂಡು ಹೋಗುವಂತೆ ಇದನ್ನೂ ಕೊಂಡೊಯ್ಯಬಹುದು. ಕ್ಷಿಪ್ರ ಪರಿಶೀಲನೆಗೆ ಇದೇ ಕಾರ್ಡನ್ನೂ ಬಳಸಬಹುದಾಗಿದೆ. ಇದರಲ್ಲಿ ಕ್ಯೂಆರ್ ಕೋಡ್ ಅಳವಡಿಸಲಾಗಿದ್ದು, ಅದನ್ನು ಸ್ಕ್ಯಾನ್ ಮಾಡಿದರೆ ಸಾಕು ಪರಿಶೀಲನೆ ಕೆಲವೇ ಸೆಕೆಂಡ್​ಗಳಲ್ಲಿ ಮುಗಿದು ಹೋಗುತ್ತದೆ.

    ಇದನ್ನೂ ಓದಿ: ರಿಪಬ್ಲಿಕ್ ಟಿವಿ ಅರ್ನಬ್​ಗೆ ಇನ್ನೊಂದು ಸಂಕಷ್ಟ- ಸುಶಾಂತ್​ ಸಿಂಗ್​ ಸ್ನೇಹಿತನಿಂದ ₹200 ಕೋಟಿ ಮಾನನಷ್ಟ ನೋಟಿಸ್​!

    ಈ ವಿಷಯವನ್ನು ಟ್ವೀಟ್ ಮೂಲಕ ಬಹಿರಂಗಪಡಿಸಿರುವ ಯುಐಡಿಎಐ, ಆಧಾರ್ ಕಾರ್ಡ್ ಎಂಬುದು ಹೊಸ ಸೇವೆಯಾಗಿದೆ. ಸಾಂಕೇತಿಕವಾದ ಶುಲ್ಕ ಭರಿಸಿದರೆ ಭಾರತ ಮೂಲೆ ಮೂಲೆಗೂ ಅಗತ್ಯ ಇರುವವರಿಗೆ ಈ ಕಾರ್ಡನ್ನು ತಲುಪಿಸುತ್ತೇವೆ. ಈ ಆಧಾರ್ ಕಾರ್ಡ್​ಗಾಗಿ ನೋಂದಾಯಿತ ಮೊಬೈಲ್​ ನಂಬರ್​ ಬಳಸಬೇಕು. ಅಕಸ್ಮಾತ್ ಇಲ್ಲದೇ ಹೋದರೆ, ಪರ್ಯಾಯ ನಂಬರ್ ದಾಖಲಿಸಿ ಒಟಿಪಿ ಕೊಡಬೇಕು. ಇದಕ್ಕಾಗಿ ಆನ್​ಲೈನ್ ಬೇಡಿಕೆಯ ಫಾರಂ ಅನ್ನು ರಚಿಸಲಾಗಿದ್ದು, ಅದನ್ನು ಭರ್ತಿ ಮಾಡಬೇಕು ಎಂದು ಹೇಳಿದೆ.
    .
    ಇದನ್ನೂ ಓದಿ: ಯಾರೂ ಇಂಥ ತಪ್ಪು ಮಾಡದಿರಿ: ಎನ್​ಸಿಪಿ ಮುಖಂಡ ಕಾರಿನಲ್ಲೇ ಸುಟ್ಟುಕರಕಲಾಗೋದಕ್ಕೆ ಇದುವೇ ಕಾರಣ!

     

     

    ವೈಯಕ್ತಿಕ ಸಂಪತ್ತು ಎಷ್ಟೆಂದು ಘೋಷಿಸಿದ್ರು ಪ್ರಧಾನಿ ನರೇಂದ್ರ ಮೋದಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts