More

    ಹೆಸರು ನೋಂದಣಿಗೆ ನ.6ರೊಳಗೆ ಅರ್ಜಿ ಸಲ್ಲಿಸಿ

    ಶೃಂಗೇರಿ: ಕರ್ನಾಟಕ ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮತ ಚಲಾಯಿಸಲು ಅರ್ಹ ಪದವೀಧರರು ಮತ್ತು ಶಿಕ್ಷಕರು ಚುನಾವಣಾ ಆಯೋಗ ನಿಗದಿಪಡಿಸಿದ ದಾಖಲೆಗಳೊಂದಿಗೆ ನಮೂನೆ 18 ಮತ್ತು 19ರಲ್ಲಿ ಅರ್ಜಿ ಸಲ್ಲಿಸಿ ನೋಂದಣಿ ಮಾಡಿಕೊಳ್ಳಬೇಕು ಎಂದು ನೈಋತ್ಯ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ತಾಲೂಕಿನ ಗೊತ್ತುಪಡಿಸಿದ ಅಧಿಕಾರಿ ಎನ್.ಜಿ.ರಾಘವೇಂದ್ರ ಹೇಳಿದರು.

    ತಾಲೂಕು ಕಚೇರಿಯಲ್ಲಿ ನೈರುತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಮತದಾರರ ನೋಂದಣಿ ಮಾಹಿತಿ ಕುರಿತು ರಾಜಕೀಯ ಪಕ್ಷದ ಮುಖಂಡರೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದರು.
    ಅರ್ಜಿ ಸಲ್ಲಿಸುವ ವ್ಯಕ್ತಿಯು 2020ರ ನ.1ಕ್ಕೂ ಹಿಂದೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಿಂದ ಪದವಿ ಪಡೆದ ಪ್ರಮಾಣ ಪತ್ರ, ಅಂಕಪಟ್ಟಿ, ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ವಾಸ ದೃಢೀಕರಣದೊಂದಿಗೆ ನ.6ರೊಳಗೆ ತಹಸೀಲ್ದಾರ್ ಕಚೇರಿಗೆ ಸಲ್ಲಿಸಬೇಕು. ಮತದಾರ ಅಲ್ಲಿನ ಸಾಮಾನ್ಯ ನಿವಾಸಿಯಾಗಿರಬೇಕು. ಸಲ್ಲಿಸುವ ದಾಖಲೆಗಳಿಗೆ ಸ್ವಯಂ ಮತ್ತು ಪತ್ರಾಂಕಿತ ಅಧಿಕಾರಿಯಿಂದ ದೃಢಿಕರಿಸಿಕೊಳ್ಳಬೇಕು ಎಂದರು.
    ಚುನಾವಣಾ ಶಿರಸ್ತೇದಾರ್ ಪ್ರವೀಣ್‌ಕುಮಾರ್ ಮಾತನಾಡಿ, ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಶಿಕ್ಷಕರನ್ನು ನೋಂದಾಯಿಸಲು ನ.1ರ 2023ಕ್ಕಿಂತ ಪೂರ್ವದ 2017ರೊಳಗೆ 6 ವರ್ಷಗಳ ಅವಧಿಯಲ್ಲಿ ಪ್ರೌಢಶಾಲೆಗಳಿಗಿಂತ ಕಡಿಮೆಯಿಲ್ಲದ ಶಿಕ್ಷಕರು ಕನಿಷ್ಠ 3 ವರ್ಷ ಭೋಧನಾ ವೃತ್ತಿ ಮಾಡಿರಬೇಕು. ಬೋಧನಾ ವೃತ್ತಿ ಸಲ್ಲಿಸಿದ ಸಂಸ್ಥೆಯಿಂದ ದೃಢೀಕರಣ ಪಡೆಯಬೇಕು. 2020ರ ನವೆಂಬರ್‌ಗೂ ಹಿಂದೆ ನಿವೃತ್ತಿ ಹೊಂದಿದ ಶಿಕ್ಷಕರು 2017ರಿಂದ ಬೋಧನೆ ಮಾಡಿದ್ದರೆ ಅವರು ಸಹ ನೋಂದಣಿಗೆ ಅರ್ಹರಾಗುತ್ತಾರೆ. ಹಿಂದಿನ ಚುನಾವಣೆಯಲ್ಲಿ ನೋಂದಣಿ ಆಗಿರುವ ಮತದಾರರು ಕೂಡ ಈ ವರ್ಷವೂ ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದರು.
    ಬಿಜೆಪಿ ಮುಖಂಡ ಬಿ.ಶಿವಶಂಕರ್, ಎಚ್.ಎಸ್ ಸುಬ್ರಹ್ಮಣ್ಯ, ಕಾಂಗ್ರೆಸ್ ಮುಖಂಡ ದಿನೇಶ್, ಜೆಡಿಎಸ್ ಮುಖಂಡ ಟಿ.ಟಿ ಕಳಸಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts