More

    ಜಿಎಸ್ಟಿ ಹೇರಿಕೆ ಖಂಡಿಸಿ ದೆಹಲಿಯಲ್ಲಿ ಅಖಿಲ ಭಾರತ ಪಡಿತರ ವಿತರಕರ ಒಕ್ಕೂಟ ಪ್ರತಿಭಟನೆ

    ಬೆಂಗಳೂರು:ಪಡಿತರ ವಿತರಕರ ಮೇಲೆ ಜಿಎಸ್ಟಿ ಹೇರಿಕೆ, ರಶೀದಿ ಯಂತ್ರ ಖರೀದಿ ವಿರೋಧಿಸಿ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅಖಿಲ ಭಾರತ ಪಡಿತರ ವಿತರಕರ ಒಕ್ಕೂಟ, ಜ.16ರಂದು ದೆಹಲಿಯ ರಾಮಲೀಲಾ ಮೈದಾನದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ಕರೆ ನೀಡಿದೆ.

    ಎಲ್ಲ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ನ್ಯಾಯಬೆಲೆ ಅಂಗಡಿ ಮಾಲೀಕರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ರಾಜ್ಯದಿಂದಲೂ ನೂರಾರು ವಿತರಕರು ತೆರಳಲಿದ್ದಾರೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯಡಿ ಪ್ರತಿ ತಿಂಗಳು ಕಾರ್ಡ್‌ದಾರರಿಗೆ ಅಕ್ಕಿ ವಿತರಿಸಲಾಗುತ್ತಿದೆ. ಅನಗತ್ಯ ಕಾರಣವೊಡ್ಡಿ ಪಡಿತರ ವಿತರಕರ ಮೇಲೆ ಜಿಎಸ್ಟಿ ವಿಧಿಸಲು ಕೇಂದ್ರ ಮುಂದಾಗಿದೆ. ಇದನ್ನೂ ನಾವು ತೀವ್ರವಾಗಿ ಖಂಡಿಸಲಾಗುವುದು ಎಂದು ಒಕ್ಕೂಟದ ಕಾರ್ಯಾಧ್ಯಕ್ಷ ಹಾಗೂ ರಾಜ್ಯ ಸರ್ಕಾರಿ ಪಡಿತರ ವಿತರಕ ಸಂಘ ಅಧ್ಯಕ್ಷ ಟಿ.ಕೃಷ್ಣಪ್ಪ ಹೇಳಿದ್ದಾರೆ.

    ಆಹಾರಧಾನ್ಯ ವಿತರಣೆ ವೇಳೆ ಕಾರ್ಡ್‌ದಾರರಿಗೆ ಮುದ್ರಿತ ರಸೀದಿ ನೀಡುವಂತೆ ಕೇಂದ್ರ ಈಗಾಗಲೇ ಆದೇಶಿಸಿದೆ. ನಿಯಮದಂತೆ ಬಯೋಮೆಟ್ರಿಕ್ ಮೂಲಕ ಆಹಾರ ಪದಾರ್ಥ ವಿತರಿಸಲಾಗುತ್ತಿದೆ.ಪ್ರತಿ ತಿಂಗಳು ಸಾವಿರಾರು ರೂ.ಖರ್ಚು ಬರುತ್ತದೆ. ಈಗ ಪ್ರಿಂಟರ್‌ಗೆ ಖರೀದಿಸಲು ಇನ್ನಷ್ಟು ಆರ್ಥಿಕ ಹೊರೆಯಾಗುತ್ತದೆ ಎಂದರು.

    ಇದನ್ನೂ ಓದಿ: ‘ಸಲಾರ್​’ vs ‘ಡಂಕಿ’!: ಇಬ್ಬರು ಸ್ಟಾರ್​ ನಿರ್ದೇಶಕರ ಚಿತ್ರಕ್ಕೆ ಇದ್ಯಾ ಭರ್ಜರಿ ಪೈಪೋಟಿ? ಇಲ್ಲಿದೆ ಉತ್ತರ….

    ಕೇಂದ್ರವೇ ಎಲ್ಲ ರಾಜ್ಯಗಳಿಗೆ ಉಚಿತವಾಗಿ ಅಕ್ಕಿ ನೀಡುತ್ತಿದೆ. ಅಂದಾಜು 80 ಕೋಟಿ ಜನರು ಇದರ ಸದುಪಯೋಗ ಪಡೆದುಕೊಂಡಿದ್ದಾರೆ. ಕಾರ್ಡ್‌ದಾರರಿಗೆ ಪಡಿತರ ವಿತರಣೆಗಾಗಿ ನೀಡಲಾಗುವ ಕಮಿಷನ್ ಒಂದೊಂದು ರಾಜ್ಯದಲ್ಲಿ ಬೇರೆ ಬೇರೆ ರೀತಿಯಲ್ಲಿದೆ. ಮಹಾರಾಷ್ಟ್ರದಲ್ಲಿ ಕ್ವಿಂಟಲ್‌ಗೆ 150 ರೂ, ತೆಲಂಗಾಣದಲ್ಲಿ ಕ್ವಿಂಟಾಲ್‌ಗೆ 140 ರೂ, ಗೋವಾದಲ್ಲಿ ಕ್ವಿಂಟಾಲ್‌ಗೆ 230 ರೂ ಹಾಗೂ ಕರ್ನಾಟಕದಲ್ಲಿ ಕ್ವಿಂಟಾಲ್‌ಗೆ 124 ರೂ.ಕಮಿಷನ್ ಹಣ ನೀಡಲಾಗುತ್ತಿದೆ. ಹೀಗಾಗಿ, ದೇಶಾದ್ಯಂತ ಏಕರೂಪ ಕಮಿಷನ್ ಪದ್ಧತಿ ಜಾರಿಗೆ ಬರಬೇಕು. ಈ ಸಮಸ್ಯೆಯನ್ನು ಬಗೆಹರಿಸುವಂತೆ ಕೇಂದ್ರದ ಗಮನ ಸೆಳೆಯಲು ಪ್ರತಿಭಟನೆ ನಡೆಸುವುದಾಗಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts