ವರ್ಷಕ್ಕೆ ನಾಲ್ಕು ಚಿತ್ರಗಳಲ್ಲಿ ನಟಿಸುವುದರಲ್ಲಿ ತಪ್ಪೇನಿದೆ? ಅಕ್ಷಯ್​ ಕುಮಾರ್​ ಪ್ರಶ್ನೆ

blank
blank

ಮುಂಬೈ: ಕಡಿಮೆ ಸಮಯದಲ್ಲಿ ಚಿತ್ರಗಳನ್ನು ಮುಗಿಸುವುದರಲ್ಲಿ ಅಕ್ಷಯ್​ ಕುಮಾರ್​ ಬಹಳ ಜನಪ್ರಿಯ. ಬೇರೆ ನಟರು ವರ್ಷಕ್ಕೋ, ಎರಡು ವರ್ಷಕ್ಕೋ ಒಂದು ಚಿತ್ರದಲ್ಲಿ ನಟಿಸಿದರೆ, ಅಕ್ಷಯ್​ ಕುಮಾರ್​ ಅಭಿನಯದ ಮಿನಿಮಮ್ ನಾಲ್ಕು ಚಿತ್ರಗಳಾದರೂ ಬಿಡುಗಡೆಯಾಗಿವೆ. ಇದೇ ವರ್ಷವನ್ನು ಉದಾಹರಣೆಯಾಗಿ ತೆಗೆದುಕೊಂಡರೆ, ಈ ವರ್ಷ ಅಕ್ಷಯ್​ ಅಭಿನಯದ ನಾಲ್ಕು ಚಿತ್ರಗಳು ಬಿಡುಗಡೆಯಾಗಿದ್ದು, ನಾಲ್ಕಕ್ಕೆ ನಾಲ್ಕೂ ಫ್ಲಾಪ್​ಗಳಾಗಿವೆ. ಈ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ.

ಇದನ್ನೂ ಓದಿ: ಝೈದ್​ ಖಾನ್​ ಅಭಿನಯದ ಹೊಸ ಚಿತ್ರ ಯಾವುದು? ಇಲ್ಲಿದೆ ಡೀಟೇಲ್ಸ್​ …

ಪ್ರಮುಖವಾಗಿ, ಅಕ್ಷಯ್​ ಕುಮಾರ್​ ಅವರಿಗೆ ಡೆಡಿಕೇಷನ್​ ಕಡಿಮೆಯಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅದೇ ಆ ಚಿತ್ರಗಳ ಸೋಲಿಗೆ ಕಾರಣ ಎಂದು ಹೇಳಲಾಗುತ್ತಿದೆ.  ಆದರೆ, ಈ ಮಾತನ್ನು ಅಕ್ಷಯ್​ ಒಪ್ಪುವುದಿಲ್ಲ. ನಾಲ್ಕು ಚಿತ್ರಗಳಲ್ಲಿ ನಟಿಸುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ, ತಮ್ಮ ಬಗ್ಗೆ ಅನಾವಶ್ಯಕವಾಗಿ ಟೀಕೆ ಮಾಡುವವರಿಗೆ ತಮ್ಮದೇ ರೀತಿಯಲ್ಲಿ ಕ್ಲಾಸ್​ ತೆಗೆದುಕೊಂಡಿದ್ದಾರೆ.

ಇತ್ತೀಚೆಗೆ ಸಮಾರಂಭವೊಂದರಲ್ಲಿ ಮಾತನಾಡಿರುವ ಅವರು, ‘ಕೆಲವರು ನಾನೇಕೆ ಪ್ರತಿ ದಿನ ಬೆಳಿಗ್ಗೆ ಬೇಗ ಏಳುತ್ತೇನೆ ಎಂದು ಪ್ರಶ್ನಿಸುತ್ತಾರೆ. ರಾತ್ರಿ ಯಾಕೆ ಅಷ್ಟು ಬೇಗ ಮಲಗುತ್ತೀನಿ ಎಂದು ಕೇಳುತ್ತಾರೆ. ರಾತ್ರಿ ಇರುವುದೇ ಮಲಗುವುದಕ್ಕೆ ಮತ್ತು ಬೆಳಿಗ್ಗೆ ಇರುವುದೇ ಕೆಲಸ ಮಾಡುವುದಕ್ಕೆ. ಇದರಲ್ಲಿ ತಪ್ಪೇನಿದೆ’ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಕರಣ್​ ಜೋಹರ್​ ‘ಪ್ರೇಮ್​ ಕಹಾನಿ’ ಬಿಡುಗಡೆ ಮುಂದಕ್ಕೆ; ಫೆಬ್ರವರಿ ಬದಲು ಏಪ್ರಿಲ್​ನಲ್ಲಿ

ಅದರ ಜತೆಗೆ ತಮ್ಮ ಕೆಲಸದ ಬಗ್ಗೆ ಮಾತನಾಡುವ ಅವರು, ‘ನಾನೇಕೆ ಅಷ್ಟೊಂದು ಕೆಲಸ ಮಾಡುತ್ತೀನಿ ಎಂದು ಕೇಳುತ್ತಾರೆ. ವರ್ಷಕ್ಕೆ ನಾಲ್ಕು ಚಿತ್ರಳನ್ನೇಕೆ ಮಾಡುತ್ತೀಯ ಎನ್ನುತ್ತಾರೆ. ನನಗೆ ಕೆಲಸ ಮಾಡುವುದಕ್ಕೆ ಇಷ್ಟ ಮತ್ತು ಕೆಲಸ ಮಾಡುತ್ತಲೇ ಇರುತ್ತೇನೆ. ಇದರಿಂದ ಯಾರಿಗೆ ಏನು ಸಮಸ್ಯೆ ಎಂದು ನನಗೆ ಅರ್ಥವಾಗುವುದಿಲ್ಲ’ ಎಂದು ಹೇಳಿದ್ದಾರೆ.

ಕನ್ನಡತಿ ಜತೆಗೆ ಟಾಲಿವುಡ್​ ನಟ ನಾಗಶೌರ್ಯ ಮದುವೆ

Share This Article

ಹುರಿದ ಜೋಳ ಅಥವಾ ಬೇಯಿಸಿದ ಜೋಳ ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಬೆಸ್ಟ್​? ಇಲ್ಲಿದೆ ಮಾಹಿತಿ.. | Corn,

Corn: ಸಾಮಾನ್ಯವಾಗಿ ರಸ್ತೆಗಳ ಬದಿಯಲ್ಲಿ ಹುರಿದ ಜೋಳ ಮಾರಾಟ ಮಾಡುವುದನ್ನು ಅಧಿಕ ಗಮನಿಸಿರುತ್ತೀರಾ ಅಲ್ವಾ.. ಹಾಗೇ…

ಮಳೆಗಾಲದಲ್ಲಿ ಉಪ್ಪು ನೀರಾಗಿ ಬದಲಾಗುವುದನ್ನು ತಡೆಯಲು ಇಲ್ಲಿದೆ ಸೂಪರ್‌ ಟಿಪ್ಸ್‌! ಒಮ್ಮೆ ಟ್ರೈ ಮಾಡಿ.. Salt

Salt: ಮಳೆಗಾಲ ಮನೆಯಲ್ಲಿ ಉಪ್ಪನ್ನು ಸಂಗ್ರಹಿಸುವುದು ಕಷ್ಟ. ಇದು ತೇವಾಂಶವನ್ನು ಹೀರಿಕೊಳ್ಳುತ್ತದೆ ಮತ್ತು ನೀರಾಗಿ ಬದಲಾಗುತ್ತದೆ.…