More

    ಅಕ್ಕಮಹಾದೇವಿ ಬದುಕು ಇಂದಿಗೂ ಪ್ರಸ್ತುತ

    ವಿಜಯವಾಣಿ ಸುದ್ದಿಜಾಲ ಧಾರವಾಡ
    ವೀರ ವಿರಾಗಿಣಿ ಅಕ್ಕನ ಬದುಕು ಮತ್ತು ಬರಹಗಳು ಇಂದಿಗೂ ಪ್ರಸ್ತುತ ಹಾಗೂ ನಾರಿಯರಿಗೆ ಆದರ್ಶಪ್ರಾಯ ಎಂದು ಹೊಂಬೆಳಕು ಪ್ರತಿಷ್ಠಾನದ ಅಧ್ಯೆ ಡಾ. ವೀಣಾ ಬಿರಾದಾರ ಅಭಿಪ್ರಾಯಪಟ್ಟರು.
    ನಗರದ ಸಾಹಿತ್ಯ ಭವನದಲ್ಲಿ ಉತ್ತರ ಕರ್ನಾಟಕ ಲೇಖಕಿಯರ ಸಂದ ವತಿಯಿಂದ ಅಕ್ಕಮಹಾದೇವಿ ಜಯಂತಿ ನಿಮಿತ್ತ ಬುಧವಾರ ಏರ್ಪಡಿಸಿದ್ದ ಪದ್ಮಾವತಿ ಅಂಗಡಿ ದತ್ತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
    ಪರಶಿವನು ಸಕಲ ಜೀವಾತ್ಮರ ಒಡೆಯನು. ಪ್ರಪಂಚದ ಸಕಲ ಜೀವಿಗಳ ಪತಿ ಅವನೇ ಆಗಿದ್ದಾನೆ. ಅವನ ಭಕ್ತರು ಅವನಿಗೆ ಸತಿ. ಲಿಂಗ ಪತಿ, ಶರಣ ಸತಿ ಭಾವದಲ್ಲಿ ನಾವೆಲ್ಲರೂ ನಿಸ್ವಾರ್ಥ ಗುಣ ಬೆಳೆಸಿಕೊಂಡು ಬದುಕಬೇಕು ಎಂದರು.
    ಅಕ್ಕ ಮಹಾದೇವಿ ವಚನಗಳನ್ನು ಗಾಯನ ಹಾಗೂ ವಾಚನ ಮಾಡಲಾಯಿತು. ಡಾ.ವೀಣಾ ಸಂಕನಗೌಡರ, ಮೇಘಾ ಹುಕ್ಕೇರಿ, ಚಿನ್ಮಯಿ ಪಾಟೀಲ, ಸಂಧ್ಯಾ ದೀಕ್ಷಿತ್​, ಕಸ್ತೂರಿ ಬೀರಪ್ಪನವರ, ಸರೋಜಾ ಪಂಡಿತ, ಪುಷ್ಪಾ ಹಾಲಭಾವಿ, ಪಾರ್ವತಿ ಹಾಲಭಾವಿ, ಸುಧಾ ಹುಲಗೂರ, ಸುಧಾ ಕಬ್ಬೂರ, ಬಸವಂತಿ ಇಂಗಳಳ್ಳಿ, ಇತರರು ಇದ್ದರು.
    ಡಾ. ಪ್ರಜ್ಞಾ ಮತ್ತಿಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ಡಾ. ಉಷಾ ಗದ್ದಗಿಮಠ ಸ್ವಾಗತಿಸಿದರು. ಸುನಿತಾ ಮೂರಶಿಳ್ಳಿ ನಿರೂಪಿಸಿದರು. ಸುಜಾತಾ ಹಡಗಲಿ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts